ಪ್ರವಾಹ ಪರಿಹಾರ ನಿಧಿ ಬಿಡುಗಡೆಗೆ ಎಸ್‌ಸಿ ಕದ ತಟ್ಟಿದ ತಮಿಳುನಾಡು
x

ಪ್ರವಾಹ ಪರಿಹಾರ ನಿಧಿ ಬಿಡುಗಡೆಗೆ ಎಸ್‌ಸಿ ಕದ ತಟ್ಟಿದ ತಮಿಳುನಾಡು


ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮಧ್ಯಂತರ ಪರಿಹಾರ ಪ್ಯಾಕೇಜ್‌ನಲ್ಲಿ 2,000 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಆದೇಶಿಸಬೇಕೆಂದು ಕೋರಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ಮೈಚಾಂಗ್ ಚಂಡಮಾರುತ ಮತ್ತು ಭಾರೀ ಮಳೆಯಿಂದ ಉಂಟಾದ ಹಾನಿಗಾಗಿ 37,000 ಕೋಟಿ ರೂ. ಪರಿಹಾರವನ್ನು ಕೋರಿದೆ. ಕೇಂದ್ರ ಸರ್ಕಾರ ಪರಿಹಾರ ನಿಧಿಯನ್ನು ತಡೆಹಿಡಿಯುತ್ತಿದೆ. ಇದು ತಾರತಮ್ಯ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದೆ.

ಸ್ಟಾಲಿನ್ ಆತಂಕ: ಆರ್ಥಿಕ ಸಹಾಯಕ್ಕಾಗಿ ಕೇರಳ ಮತ್ತು ಕರ್ನಾಟಕ ಇಂಥದ್ದೇ ಮನವಿ ಸಲ್ಲಿಸಿರುವುದನ್ನು ಎಂ.ಕೆ .ಸ್ಟಾಲಿನ್ ಉದಹರಿಸಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡಿಗೆ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಮೂಲಕ ಈಗಾಗಲೇ 900 ಕೋಟಿ ರೂ. ವಿತರಿಸಲಾಗಿದೆ ಎಂದು ಹೇಳಿದ್ದರು. ಚೆನ್ನೈನಲ್ಲಿ ಮಳೆನೀರು ಚರಂಡಿ ನಿರ್ಮಾಣಕ್ಕೆ 5,000 ಕೋಟಿ ರೂ. ಮೀಸಲಿಡುವ ಬಗ್ಗೆಯೂ ಪ್ರಸ್ತಾಪಿಸಿದರು. ಅದರ ಬಳಕೆ ಖಾತೆಯನ್ನು ಒದಗಿಸುವಂತೆ ಸಚಿವೆ ರಾಜ್ಯವನ್ನು ಒತ್ತಾಯಿಸಿದ್ದರು.

ಮನವಿ ಪರಿಶೀಲನೆ: ತಮಿಳುನಾಡಿನ ಮನವಿಯನ್ನು ಉನ್ನತ ಮಟ್ಟದ ಸಮಿತಿ ಪರಿಶೀಲಿಸಲಿದೆ ಎಂದು ಹಣಕಾಸು ಸಚಿವೆ ಭರವಸೆ ನೀಡಿದರು. ಸಮರ್ಪಕವಾಗಿ ಹಣ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಆದರೆ, ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ವಿಲಿಸಿರುವುದು ಕೇಂದ್ರ ಸರ್ಕಾರ ಮತ್ತು ಬಿಜೆಪಿಯೇತರ ಪಕ್ಷಗಳಿರುವ ರಾಜ್ಯಗಳ ನಡುವಿನ ಉದ್ವಿಗ್ನತೆಯನ್ನು ತೋರಿಸುತ್ತದೆ. ದಕ್ಷಿಣದ ರಾಜ್ಯಗಳಿಗೆ ವಿಪತ್ತು ಪರಿಹಾರ ಅಥವಾ ತೆರಿಗೆ ಹಂಚಿಕೆ ಬಾಕಿ ವಿತರಣೆ ವಿವಾದ ಸಂಸತ್ತಿನಲ್ಲೂ ಚರ್ಚೆಗೆ ಕಾರಣವಾಗಿದೆ.

ಈ ಸಂಬಂಧ ಫೆಬ್ರವರಿಯಲ್ಲಿ ಸೀತಾರಾಮನ್ ಮತ್ತು ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ನಡುವೆ ಬಿಸಿ ಚರ್ಚೆ ನಡೆದಿತ್ತು.

ದಕ್ಷಿಣ ರಾಜ್ಯಗಳ ಪ್ರತಿಭಟನೆ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮತ್ತು ಎಡ ನೇತೃತ್ವದ ಕೇರಳ ಸರ್ಕಾರ ಈ ಸಂಬಂಧ ಪ್ರತಿಭಟಿಸಿವೆ. ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯನ್ನು ತಮಿಳುನಾಡಿನ ಡಿಎಂಕೆ ಸಂಸದರು ಬೆಂಬಲಿಸಿದ್ದರು. ಕೇಂದ್ರ ಸರ್ಕಾರದಿಂದ ʻತಾರತಮ್ಯʼ ಧೋರಣೆ ಆರೋಪದ ನಡುವೆ, ತೆಲಂಗಾಣ ಕೂಡ ನಿಧಿ ಹಂಚಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

Read More
Next Story