ತಮಿಳು ನಟ ದಳಪತಿ ವಿಜಯ್ ರಾಜಕೀಯ 'ತಮಿಳಗ ವೆಟ್ರಿ ಕಳಗಂ' ಪಕ್ಷ ಈಗ ಅಧಿಕೃತ
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಅಧಿಕೃತವಾಗಿ ನೋಂದಾಯಿಸಿದೆ ಹಾಗೂ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಎಂದು ನಟ ಮತ್ತು ಪಕ್ಷದ ಮುಖ್ಯಸ್ಥ ವಿಜಯ್ ಭಾನುವಾರ (ಸೆಪ್ಟೆಂಬರ್ 8) ಘೋಷಿಸಿದರು.
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಅಧಿಕೃತವಾಗಿ ನೋಂದಾಯಿಸಿದೆ ಹಾಗೂ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಈ ಬಗ್ಗೆ ನಟ ಮತ್ತು ಪಕ್ಷದ ಮುಖ್ಯಸ್ಥ ವಿಜಯ್ ಭಾನುವಾರ (ಸೆಪ್ಟೆಂಬರ್ 8) ಘೋಷಿಸಿದ್ದಾರೆ/
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯ್, "ಚುನಾವಣಾ ಆಯೋಗವು ಈಗ ನಮ್ಮ ತಮಿಳಗ ವೆಟ್ರಿ ಕಳಗಂ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಿದೆ ಮತ್ತು ನೋಂದಾಯಿತ ಪಕ್ಷವಾಗಿ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಅವಕಾಶ ನೀಡಿದೆ," ಎಂದು ವಿಜಯ್ ಬರೆದಿದ್ದಾರೆ.
'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಲು ಫೆಬ್ರವರಿ 2 ರಂದು ಭಾರತೀಯ ಚುನಾವಣಾ ಆಯೋಗಕ್ಕೆ ವಿಜಯ್ ಮನವಿ ಮಾಡಿದ್ದರು.
ನಟ ವಿಜಯ್ ಫೆಬ್ರವರಿ 2 ರಂದು ತಮ್ಮ ರಾಜಕೀಯ ಪಕ್ಷವನ್ನು ಘೋಷಿಸಿದರು. ಅವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆಗಸ್ಟ್ 22 ರಂದು ತಮ್ಮ ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿ ಪಕ್ಷದ ಅಧಿಕೃತ ಹಾಡನ್ನು ಸಹ ಬಿಡುಗಡೆ ಮಾಡಿದ್ದರು/
ಮರೂನ್-ಹಳದಿ ಧ್ವಜವು ಮಧ್ಯದಲ್ಲಿ ನಕ್ಷತ್ರಗಳಿಂದ ಸುತ್ತುವರಿದ ನವಿಲು ಮತ್ತು ಎರಡು ಬದಿಗಳಲ್ಲಿ ಆನೆಗಳನ್ನು ಹೊಂದಿದೆ.