ಟಿ20 ವಿಶ್ವಕಪ್: ಸೂಪರ್‌ ಎಂಟರ ಹಂತ ಪ್ರವೇಶಿಸಿದ  ವೆಸ್ಟ್ಇಂಡೀಸ್
x

ಟಿ20 ವಿಶ್ವಕಪ್: ಸೂಪರ್‌ ಎಂಟರ ಹಂತ ಪ್ರವೇಶಿಸಿದ ವೆಸ್ಟ್ಇಂಡೀಸ್


ತರೌಬಾ (ಟ್ರಿನಿಡಾಡ್), ಜೂನ್ 13- ಶೆರ್ಫೇನ್ ರುದರ್‌ಫೋರ್ಡ್ ಅವರ ವೃತ್ತಿಜೀವನದ ಅತ್ಯುತ್ತಮ ಅಜೇಯ ಅರ್ಧಶತಕ, ವೇಗಿ ಅಲ್ಜಾರಿ ಜೋಸೆಫ್ ಮತ್ತು ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ ಅವರ ಬೌಲಿಂಗ್‌ ನೆರವಿನಿಂದ ವೆಸ್ಟ್ ಇಂಡೀಸ್, ಟಿ20 ವಿಶ್ವಕಪ್‌ನ ಸೂಪರ್‌ ಎಂಟರ ಹಂತ ತಲುಪಿದೆ. ನ್ಯೂಜಿಲೆಂಡ್‌ ಮೇಲೆ 13 ರನ್‌ ಜಯ ಗಳಿಸಿದ್ದು,ನ್ಯೂಜಿಲೆಂಡ್‌ ಟೂರ್ನಿಯಿಂದ ಹೊರಹೋಗುವ ಆತಂಕ ಎದುರಿಸುತ್ತಿದೆ.

ರುದರ್‌ಫೋರ್ಡ್ 39 ಎಸೆತಗಳಲ್ಲಿ ಅರ್ಧ ಡಜನ್ ಸಿಕ್ಸರ್‌, ಎರಡು ಬೌಂಡರಿ ಮೂಲಕ 68 ರನ್ ಗಳಿಸಿದರು. ಇದರಿಂದ ವೆಸ್ಟ್ ಇಂಡೀಸ್ ಸ್ಕೋರ್‌ 12.3 ಓವರ್‌ಗಳಲ್ಲಿ 76 ಕ್ಕೆ 7 ವಿಕೆಟ್ಟಿನಿಂದ, 149 ಕ್ಕೆ ಹೆಚ್ಚಿತು. ಆನಂತರ, ವೆಸ್ಟ್ ಇಂಡೀಸ್ ಕಿವೀಸ್ ಅನ್ನು 9 ವಿಕೆಟ್‌ಗೆ 136 ಕ್ಕೆ ಸೀಮಿತಗೊಳಿಸಿತು. ರುದರ್‌ಫೋರ್ಡ್ ಅವರ ಸಹವರ್ತಿ ಗಯಾನೀಸ್ ಮೋಟಿ 25 ರನ್‌ ನೀಡಿ 3 ವಿಕೆಟ್‌ ಗಳಿಸಿದರು. ಕೆಳ ಹಂತದ ಬ್ಯಾಟರ್‌ ಗಳನ್ನು ಕಾಡಿದ ಜೋಸೆಫ್‌, 19 ರನ್‌ ನೀಡಿ 4 ವಿಕೆಟ್‌ ಉರುಳಿಸಿದರು.

ವೆಸ್ಟ್‌ ಇಂಡೀಸ್‌ ಸತತ ಮೂರು ಗೆಲುವಿನೊಂದಿಗೆ ಸೂಪರ್ ಎಂಟು ಹಂತಕ್ಕೆ ಅರ್ಹತೆ ಪಡೆದರು. ಆದರೆ, ನ್ಯೂಜಿಲೆಂಡ್‌ ನಿರಂತರ ಸೋಲಿನಿಂದ ಬಸವಳಿದಿದ್ದು, ಪಂದ್ಯಾವಳಿಯಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ.

ಈ ಹಿಂದೆ 75 ರನ್‌ಗಳಿಗೆ ಔಟ್ ಆಗಿ, ಅಫ್ಘಾನಿಸ್ತಾನದ ವಿರುದ್ಧ 84 ರನ್‌ಗಳಿಂದ ಸೋಲುಂಡಿದ್ದರು. ನ್ಯೂಜಿಲೆಂಡ್‌ ವಿಶ್ವಕಪ್‌ಗಳಲ್ಲಿ ಅತ್ಯಂತ ಸ್ಥಿರವಾದ ತಂಡಗಳಲ್ಲಿ ಒಂದಾಗಿದ್ದು, 2021 ರಲ್ಲಿ 2ನೇ ಸ್ಥಾನಕ್ಕೆ ಪಾತ್ರವಾಗಿತ್ತು. ತಂಡ ಒಂದು ದಿನದ ವಿಶ್ವಕಪ್‌ನಲ್ಲಿ 2015, 2019 ಮತ್ತು 2023 ರಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ; 2016, 2021 ಮತ್ತು 2022 ರಲ್ಲಿ ಟಿ20 ವಿಶ್ವಕಪ್‌ಗಳಲ್ಲಿ ಕೊನೆಯ ನಾಲ್ಕರ ಹಂತ ಪ್ರವೇಶಿಸಿದೆ.

ಪಂದ್ಯ ಮುಗಿದಾಗ, ಮಧ್ಯರಾತ್ರಿ ಕಳೆದಿತ್ತು. ಆದರೆ, ಸತತ ಹಿನ್ನಡೆಗಳ ನಿರಾಶೆಯನ್ನು ಅಳಿಸಿಹಾಕಿದ ವಿಜಯವನ್ನು ಸ್ಥಳೀಯರು ಸಂಭ್ರಮಿಸಿದರು. ಎರಡು ಬಾರಿಯ ಚಾಂಪಿಯನ್‌ಗಳಾದ ವೆಸ್ಟ್‌ ಇಂಡೀಸ್‌ , 2021 ರಲ್ಲಿ ಯುಎಇಯಲ್ಲಿ ಸೂಪರ್ 12 ಹಂತದಲ್ಲಿ ಹೊರಹಾಕಲ್ಪಟ್ಟರು. 2022 ರಲ್ಲಿ ಆಸ್ಟ್ರೇಲಿಯದಲ್ಲಿ ಗುಂಪು ಹಂತದಲ್ಲಿ ನಿರ್ಗಮಿಸಿತು.

ʻರುದರ್‌ಫೋರ್ಡ್ ಅವರ ಇನ್ನಿಂಗ್ಸ್ ಆತ್ಮವಿಶ್ವಾಸ ತುಂಬಿತು. ಅವರು ಉತ್ತಮ ಆಟವನ್ನು ನಾವು ಪುನರಾವರ್ತಿಸಲು ಪ್ರಯತ್ನಿಸಿದೆವು,ʼ ಎಂದು ನಾಯಕ ರೋವ್ಮನ್‌ ಪೊವೆಲ್‌ ಹೇಳಿದರು.

ವಿಲಿಯಮ್ಸನ್ ಮೂರು ಬದಲಾವಣೆ ಮಾಡಿದರು. ಟ್ರೆಂಟ್ ಬೌಲ್ಟ್ ತಮ್ಮ ಮೊದಲ ಓವರ್‌ನಲ್ಲಿ ಜಾನ್ಸನ್ ಚಾರ್ಲ್ಸ್ (0) ಅವರನ್ನು ಪೆವಿಲಿ ಯನ್‌ ಗೆ ಕಳಿಸಿದರು. ಕಿವೀಸ್ ಎಡಗೈ ವೇಗಿ 4-1-16-3 ರ ಅದ್ಭುತ ಅಂಕಿಅಂಶ ದಾಖಲಿಸಿದರು. ನಿಕೋಲಸ್ ಪೂರನ್ ಮೂರು ತ್ವರಿತ ಬೌಂಡರಿಗಳೊಂದಿಗೆ ಟಿ20 ಯಲ್ಲಿ ಅತ್ಯಧಿಕ ರನ್‌ ಗಳಿಸಿದ ವೆಸ್ಟ್‌ ಇಂಡೀಸಿನ ಆಟಗಾರರಾದರು. ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದರು.

ಆದರೆ, ನ್ಯೂಜಿಲೆಂಡ್ ಮೇಲುಗೈ ಸಾಧಿಸಿತು. ಪೂರನ್ (17), ರೋಸ್ಟನ್ ಚೇಸ್ (0), ಆನಂತರ ನಾಯಕ ರೋವ್ಮನ್ ಪೊವೆಲ್ ಔಟಾದರು. ವೇಗಿ ಟಿಮ್ ಸೌಥಿ (2/21) ಜೊತೆ ನೀಡಿದರು.

ರುದರ್‌ಪೋರ್ಡ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ ಆಡಿದರು. 25 ವರ್ಷದ ಗಯಾನಾದ ಆಲ್‌ರೌಂಡರ್, ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಿಡಿಸಿದರು. ಮೋಟೀ ಜೊತೆಗೆ 37 ರನ್‌ ಸೇರಿಸಿದರು. ಇದು ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೊಸ 10 ನೇ ವಿಕೆಟ್ ದಾಖಲೆಯಾಗಿದೆ.

ಪ್ರತ್ಯುತ್ತರವಾಗಿ, ನ್ಯೂಜಿಲೆಂಡ್ ಕಳಪೆಯಾಗಿ ಆರಂಭಿಸಿತು. ಡೆವೊನ್ ಕಾನ್ವೇ (5), ಫಿನ್ ಅಲೆನ್ (26), ಗ್ಲೆನ್ ಫಿಲಿಪ್ಸ್(33 ಎಸೆತ,40) ಆಟ ಗುರಿ ಮುಟ್ಟಲು ಸಾಲದೆ ಹೋಯಿತು. ನ್ಯೂಜಿಲೆಂಡ್‌ಗೆ ಕೊನೆಯ ಓವರ್‌ನಲ್ಲಿ 33 ರನ್‌ ಅಗತ್ಯವಿತ್ತು; ಮಿಚೆಲ್ ಸ್ಯಾಂಟ್ನರ್ ಮೊದಲ ನಾಲ್ಕು ಎಸೆತಗಳಲ್ಲಿ ಮೂರು ಸಿಕ್ಸರ್‌ ಸಿಡಿಸಿದರು. ಆದರೆ, ಅಂತಿಮವಾಗಿ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

Read More
Next Story