ಟಿ20 ವಿಶ್ವಕಪ್, ಸೂಪರ್ 8 ಹಂತ| ಭಾರತ vs ಆಸ್ಟ್ರೇಲಿಯಾ ಪಂದ್ಯ ಜೂನ್‌ 24ಕ್ಕೆ
x

ಟಿ20 ವಿಶ್ವಕಪ್, ಸೂಪರ್ 8 ಹಂತ| ಭಾರತ vs ಆಸ್ಟ್ರೇಲಿಯಾ ಪಂದ್ಯ ಜೂನ್‌ 24ಕ್ಕೆ

ಹ್ಯಾಟ್ರಿಕ್ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ, ಸೂಪರ್ 8 ರ ಹಂತವನ್ನು ಪ್ರವೇಶಿಸಿದೆ.


ಭಾರತ 2024 ರ ಐಸಿಸಿ ಟಿ 20 ವಿಶ್ವಕಪ್‌ನ ಸೂಪರ್ ಎಂಟು ಹಂತಕ್ಕೆ ಅರ್ಹತೆ ಪಡೆದಿದೆ.

ಸತತ ಮೂರು ಗೆಲುವಿನೊಂದಿಗೆ ಭಾರತ ಸೂಪರ್ ಎಂಟರ ಹಂತ ಪ್ರವೇಶಿಸಿದೆ . ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ನಂತರ ಎರಡನೇ ಸುತ್ತಿಗೆ ಮುನ್ನಡೆದ ಮೂರನೇ ತಂಡ ಭಾರತ. ಸಹ ಆತಿಥೇಯ ವೆಸ್ಟ್ ಇಂಡೀಸ್ ಗುರುವಾರ (ಜೂನ್ 13) ನ್ಯೂಜಿಲೆಂಡ್ ಅನ್ನು ಸೋಲಿಸಿ ಅರ್ಹತೆ ಗಳಿಸಿತು.

ಭಾರತ ಜೂನ್ 19 ರಂದು ಪ್ರಾರಂಭವಾಗುವ ಪಂದ್ಯಾವಳಿಯ ಎರಡನೇ ಸುತ್ತಿನತ್ತ ಗಮನ ಹರಿಸಿದೆ. ಟಿ20 ವಿಶ್ವಕಪ್ 2024 ಟೂರ್ನಿಯು 20 ತಂಡಗಳೊಂದಿಗೆ ಪ್ರಾರಂಭವಾಯಿತು. ಮೊದಲ ಸುತ್ತಿನ ನಂತರ 12 ತಂಡಗಳು ಹೊರಹೋಗುತ್ತವೆ. ಗುರುವಾರದ ಹೊತ್ತಿಗೆ ನಮೀಬಿಯಾ ಮತ್ತು ಒಮನ್ ಅಧಿಕೃತವಾಗಿ ಹೊರಹೋಗಿವೆ. ಜೂನ್ 15 ರ ಶನಿವಾರ ಕೆನಡಾ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಗ್ರೂಪ್ ಎ ಅಭಿಯಾನ ಪೂರ್ಣಗೊಳಿಸಲಿದೆ.

ಸೂಪರ್ ಎಂಟು ಕಾರ್ಯನಿರ್ವಹಣೆ ಹೇಗೆ?: ಸೂಪರ್ ಎಂಟು ಹಂತದಲ್ಲಿ ಎಂಟು ತಂಡಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೂಪರ್ ಎಂಟರಲ್ಲಿ ಭಾರತ ಎ1 ಮತ್ತು ಪಾಕಿಸ್ತಾನ ಎ2 ಆಗಿದೆ.

ಈ ಹಂತದಲ್ಲಿ ಪ್ರತಿ ತಂಡ ತಮ್ಮ ಗುಂಪಿನ ಮೂರು ತಂಡಗಳ ವಿರುದ್ಧ ಆಡುತ್ತದೆ. ವೇಳಾಪಟ್ಟಿ ಪ್ರಕಾರ, ಗ್ರೂಪ್ 1 ನಲ್ಲಿರುವ ಭಾರತ ಜೂನ್ 24 ರಂದು ಆಸ್ಟ್ರೇಲಿಯವನ್ನು (ಬಿ2) ಎದುರಿಸಲಿದೆ. ಇತರ ತಂಡಗಳು (ಸಿ1 ಮತ್ತು ಡಿ2) ಇನ್ನೂ ನಿರ್ಧಾರವಾಗಿಲ್ಲ. ನ್ಯೂಜಿಲೆಂಡ್ (ಸಿ1) ಇಲ್ಲಿಯವರೆಗೆ ಯಾವುದೇ ಪಂದ್ಯದಲ್ಲಿ ಗೆಲ್ಲದೇ ಸಂಕಷ್ಟದಲ್ಲಿದೆ. ಆ ಸ್ಥಾನವು ಅಫ್ಘಾನಿಸ್ತಾನದ ಪಾಲಾಗಬಹುದು. ಶ್ರೀಲಂಕಾ (ಡಿ 2) ಎರಡು ಪಂದ್ಯಗಳಲ್ಲಿ ಸೋಲು ಮತ್ತು ಒಂದರಲ್ಲಿ ಫಲಿತಾಂಶ ಬಂದಿಲ್ಲ; ಕೇವಲ ಒಂದು ಅಂಕದೊಂದಿಗೆ ಪಟ್ಟಿಯ ತಳದಲ್ಲಿದ್ದಾರೆ. ಒಂದು ಪಂದ್ಯ ಆಡಬೇಕಿದೆ.

ಒಂದುವೇಳೆ ಶ್ರೀಲಂಕಾ ಅರ್ಹತೆ ಪಡೆಯಲು ವಿಫಲವಾದರೆ, ಆ ಸ್ಥಾನವನ್ನು ಬಾಂಗ್ಲಾದೇಶ, ನೆದರ್ಲೆಂಡ್ ಅಥವಾ ನೇಪಾಳ ತೆಗೆದುಕೊಳ್ಳುತ್ತದೆ.

ಭಾರತದ ಸೂಪರ್ ಎಂಟು ವೇಳಾಪಟ್ಟಿ

ಗುರುವಾರ, ಜೂನ್ 20 (ರಾತ್ರಿ 8 ಗಂಟೆ, ಭಾರತೀಯ ಕಾಲಮಾನ): ಭಾರತ ವಿರುದ್ಧ (ಸಿ1, ತಂಡ ನಿಗದಿಯಾಗಿಲ್ಲ)

ಶನಿವಾರ, ಜೂನ್ 22 (ರಾತ್ರಿ 8 ಗಂಟೆ, ಭಾರತೀಯ ಕಾಲಮಾನ): ಭಾರತ ವಿರುದ್ಧ (ಡಿ2, ತಂಡ ನಿಗದಿಯಾಗಿಲ್ಲ)

ಸೋಮವಾರ, ಜೂನ್ 22 (ರಾತ್ರಿ 8 ಗಂಟೆ, ಭಾರತೀಯ ಕಾಲಮಾನ ): ಭಾರತ vs ಆಸ್ಟ್ರೇಲಿಯ (ಬಿ2)

ಟಿ20 ವಿಶ್ವಕಪ್ 2024 ರ ಶ್ರೇಣಿ: ಎ1 - ಭಾರತ, ಎ2 - ಪಾಕಿಸ್ತಾನ, ಬಿ1 - ಇಂಗ್ಲೆಂಡ್, ಬಿ2 - ಆಸ್ಟ್ರೇಲಿಯ, ಸಿ1 - ನ್ಯೂಜಿಲೆಂಡ್, ಸಿ2 - ವೆಸ್ಟ್ ಇಂಡೀಸ್, ಡಿ1 - ದಕ್ಷಿಣ ಆಫ್ರಿಕಾ, ಡಿ2 - ಶ್ರೀಲಂಕಾ

ಮೇಲಿನ ಯಾವುದೇ ತಂಡ ಸೂಪರ್ ಎಂಟರ ಘಟ್ಟಕ್ಕೆ ಅರ್ಹತೆ ಪಡೆಯಲು ವಿಫಲವಾದರೆ, ಮುನ್ನಡೆಯುವ ತಂಡ ಅವರ ಸ್ಥಾನವನ್ನು ಪಡೆದುಕೊಳ್ಳುತ್ತದೆ.

ಸೂಪರ್ ಎಂಟು ಗುಂಪುಗಳು: ಗುಂಪು 1: ಎ1, ಬಿ2, ಸಿ1, ಡಿ2. ಗುಂಪು 2: ಎ2, ಬಿ1, ಸಿ2, ಡಿ1

Read More
Next Story