ಟಿ20 ವಿಶ್ವಕಪ್: ಚೊಚ್ಚಲ ಫೈನಲ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ
x

ಟಿ20 ವಿಶ್ವಕಪ್: ಚೊಚ್ಚಲ ಫೈನಲ್‌ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ

ಅಫ್ಘಾನಿಸ್ತಾನವನ್ನು ಅತ್ಯಲ್ಪ 56 ರನ್‌ಗಳಿಗೆ ಆಲೌಟ್ ಮಾಡಿದ ನಂತರ ದಕ್ಷಿಣ ಆಫ್ರಿಕ, 67 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.


ತಾರಾಬೌನಲ್ಲಿ ಗುರುವಾರ ನಡೆದ ಟಿ 20 ವಿಶ್ವ ಕಪ್‌ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ದಕ್ಷಿಣ ಆಫ್ರಿಕಾ, ತನ್ನ ಚೊಚ್ಚಲ ಟಿ20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಗಳಿಸಿತು.

ಅಫ್ಘಾನಿಸ್ತಾನವನ್ನು ಅತ್ಯಲ್ಪ 56 ರನ್‌ಗಳಿಗೆ ಆಲೌಟ್ ಮಾಡಿದ ನಂತರ ದಕ್ಷಿಣ ಆಫ್ರಿಕ, 67 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿದರು.

ದಕ್ಷಿಣ ಆಫ್ರಿಕಾ ತಂಡದ ವೇಗಿಗಳು ಪಿಚ್‌ ನ ವೇಗದ ಚಲನೆಯನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಬ್ಯಾಟಿಂಗ್ ಆರಿಸಿಕೊಂಡ ಅಫ್ಘಾನಿಸ್ತಾನದ ಪರಿಸ್ಥಿತಿ ಚಿಂತಾಜನಕವಾಯಿತು.

ಅಫ್ಘಾನಿಸ್ತಾನವು ಪವರ್‌ಪ್ಲೇ ಒಳಗೆ ತಂಡದ ಅರ್ಧದಷ್ಟು ಬ್ಯಾಟರ್‌ ಗಳನ್ನು ಕಳೆದುಕೊಂಡಿತು. ವೇಗಿಗಳಾದ ಮಾರ್ಕೊ ಜಾನ್ಸೆನ್ (3/16), ಕಗಿಸೊ ರಬಾಡ (2/14) ಮತ್ತು ಅನ್ರಿಚ್ ನಾರ್ಟ್ಜೆ (2/7) ಏಳು ವಿಕೆಟ್‌ ಹಂಚಿಕೊಂಡಿದ್ದು, ಸ್ಪಿನ್ನರ್ ತಬ್ರೈಜ್ ಶಮ್ಸಿ ಮೂರು ವಿಕೆಟ್‌ (3/6) ಪಡೆದರು.

12 ಎಸೆತಗಳಲ್ಲಿ 10 ರನ್ ಗಳಿಸಿದ ಅಜ್ಮತುಲ್ಲಾ ಒಮರ್ಜಾಯ್, ಅಫ್ಘಾನಿಸ್ತಾನದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌:

ಅಫ್ಘಾನಿಸ್ತಾನ 11.5 ಓವರ್‌ಗಳಲ್ಲಿ 56 ಆಲೌಟ್ (ಅಜ್ಮತುಲ್ಲಾ ಒಮರ್ಜಾಯ್ 10; ತಬ್ರೈಜ್ ಶಮ್ಸಿ 3/6, ಮಾರ್ಕೊ ಜಾನ್ಸೆನ್ 3/16)

ದಕ್ಷಿಣ ಆಫ್ರಿಕಾ 8.5 ಓವರ್‌ಗಳಲ್ಲಿ 1 ವಿಕೆಟ್‌ಗೆ 60 (ರೀಜಾ ಹೆಂಡ್ರಿಕ್ಸ್ 29, ಏಡನ್ ಮಾರ್ಕ್ರಾಮ್ ಔಟಾಗದೆ 23; ಫಜಲ್ಹಕ್ ಫಾರೂಕಿ 1/11)

Read More
Next Story