T20 ವಿಶ್ವಕಪ್| ಸೆಮಿಫೈನಲ್‌ ಗೆ  ಭಾರತ; ರೋಹಿತ್‌ ಭರ್ಜರಿ ಆಟ
x

T20 ವಿಶ್ವಕಪ್| ಸೆಮಿಫೈನಲ್‌ ಗೆ ಭಾರತ; ರೋಹಿತ್‌ ಭರ್ಜರಿ ಆಟ

ಪ್ರಾವಿಡೆನ್ಸ್‌ನಲ್ಲಿ ಗುರುವಾರ (ಜೂನ್ 27) ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಭಾರತ, ಗ್ರೂಪ್ 2 ರಲ್ಲಿ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ಅನ್ನು ಎದುರಿಸಲಿದೆ.


ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಆಟದಿಂದ ಭಾರತವು ಆಸ್ಟ್ರೇಲಿಯವನ್ನು 24 ರನ್‌ಗಳಿಂದ ಸೋಲಿಸಿ, ಸೆಮಿಫೈನಲ್‌ ಪ್ರವೇಶಿಸಿತು.

ಈ ಗೆಲುವಿನೊಂದಿಗೆ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಉಳಿಯಿತು; ಮೂರು ಪಂದ್ಯಗಳಿಂದ 6 ಅಂಕಗಳೊಂದಿಗೆ ಗ್ರೂಪ್ 1 ರಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ಗೆ 205 ರನ್‌ ಗಳಿಸಿದ ನಂತರ, ಅರ್ಶ್‌ ದೀಪ್ ಸಿಂಗ್ (3/37) ಅವರ ಮಾರಕ ಚೆಂಡೆಸೆತದಿಂದ ಆಸ್ಟ್ರೇಲಿಯವನ್ನು 7 ವಿಕೆಟ್‌ ಗೆ 181ರನ್‌ ಗೆ ಉರುಳಿಸಿತು. ಕುಲದೀಪ್ ಯಾದವ್ 24 ರನ್‌ ಗೆ 2 ವಿಕೆಟ್‌, ಜಸ್ಪ್ರೀತ್ ಬೂಮ್ರಾ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಗಳಿಸಿದರು.

ಆಸ್ಟ್ರೇಲಿಯ ಪರ ಟ್ರಾವಿಸ್ ಹೆಡ್ 43 ಎಸೆತಗಳಲ್ಲಿ 76 ರನ್ ಹಾಗೂ ನಾಯಕ ಮಿಚೆಲ್ ಮಾರ್ಷ್ 28 ಎಸೆತಗಳಲ್ಲಿ 37 ರನ್ ಗಳಿಸಿದರು.

ರೋಹಿತ್ 41 ಎಸೆತಗಳಲ್ಲಿ 92 ರನ್: ಜೂನ್ 27ರಂದು ಪ್ರಾವಿಡೆನ್ಸ್‌ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು ಗ್ರೂಪ್ 2 ರಲ್ಲಿ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ನ್ನು ಎದುರಿಸಲಿದೆ. ಆಸ್ಟ್ರೇಲಿಯ (ಮೂರು ಪಂದ್ಯಗಳಿಂದ 2 ಅಂಕ) ಸೆಮಿಫೈನಲ್‌ಗೆ ಮುನ್ನಡೆಯುವಿಕೆಯು ಅಫ್ಘಾನಿಸ್ತಾನ (2 ಅಂಕ) ಮತ್ತು ಬಾಂಗ್ಲಾದೇಶ (0) ನಡುವಿನ ಕೊನೆಯ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುತ್ತದೆ.

ಬಾಂಗ್ಲಾದೇಶ 62 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ, ಆಸ್ಟ್ರೇಲಿಯ ಕೊನೆಯ ನಾಲ್ಕರ ಹಂತಕ್ಕೆ ತಲುಪಲಿದೆ ಮತ್ತು ಅಫ್ಘಾನಿಸ್ತಾನ ಗೆಲುವಿನೊಂದಿಗೆ ನಾಕೌಟ್‌ಗೆ ಪ್ರವೇಶಿಸುತ್ತದೆ. ಬಾಂಗ್ಲಾದೇಶವು 150 ಮತ್ತು ಅದಕ್ಕಿಂತ ಹೆಚ್ಚು ರನ್‌ ಗಳಿಸಿ, 62 ಕ್ಕಿಂತ ಹೆಚ್ಚು ರನ್‌ಗಳಿಂದ ಗೆಲ್ಲಬೇಕಿದೆ.

ರೋಹಿತ್ 41 ಎಸೆತಗಳಲ್ಲಿ 92 ರನ್ ಗಳಿಸುವ ಮೂಲಕ ಭಾರತ ಐದು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಆಸ್ಟ್ರೇಲಿಯ ಅತ್ಯುತ್ತಮ ಬ್ಯಾಟಿಂಗ್ ಪಿಚ್‌ ನಲ್ಲಿ ಭಾರತಕ್ಕೆ ಬ್ಯಾಟಿಂಗ್‌ ಅವಕಾಶ ನೀಡಿತು. ರೋಹಿತ್ ಏಳು ಬೌಂಡರಿ ಮತ್ತು ಎಂಟು ಸಿಕ್ಸರ್‌ ಇರುವ ಭವ್ಯ ಆಟ ಪ್ರದರ್ಶಿಸಿದರು.

ಪಂದ್ಯದ ಮೊದಲ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ನಾಲ್ಕು ರನ್‌ ಗಳಿಸಿದಾಗ, ಅವರ ವಿಶೇಷ ಇನ್ನಿಂಗ್ಸ್‌ ಆರಂಭಗೊಂಡಿತು.

ಹೊರನಡೆದ ಕೊಹ್ಲಿ: ಇನ್ನೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ (0), ನಂತರದ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್‌ ಅವರ ಬೌಲಿಂಗಿನಲ್ಲಿ ಕ್ಯಾಚ್ ನೀಡಿದರು.

ಆಟ ಮುಂದುವರಿಸಿದ ರೋಹಿತ್, ರನ್‌ ಗಳಿಕೆ ವೇಗವನ್ನು ಕಡಿಮೆ ಮಾಡಲಿಲ್ಲ. ಸ್ಟಾರ್ಕ್‌ ಅವರ ಎರಡನೇ ಓವರ್‌ನಲ್ಲಿ 29 ರನ್‌ ಗಳಿಸಿದರು. ಇದು ಅವರ ಅತ್ಯಂತ ದುಬಾರಿ ಓವರ್‌ ಆಗಿದೆ. ಆ ಓವರ್‌ನಲ್ಲಿ ಮೊದಲ ಎರಡು ಸಿಕ್ಸರ್‌ ಹೊಡೆದರು. ಓವರ್‌ನ ನಾಲ್ಕನೇ ಗರಿಷ್ಠ ಹೊಡೆತ ತಪ್ಪು ಹೊಡೆತದಿಂದ ಬಂದಿತು. ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅವರನ್ನು ಲಾಂಗ್ ಆನ್ ನಲ್ಲಿ ಸಿಕ್ಸರ್‌ನೊಂದಿಗೆ ಸ್ವಾಗತಿಸಿದ ಮೂರನೇ ಕ್ರಮಾಂಕದ ರಿಷಭ್ ಪಂತ್ (14 ಎಸೆತಗಳಲ್ಲಿ 15), ಈ ಜೋಡಿ 87 ರನ್‌ ಜೋಡಿಸಿತು.

ಆಸ್ಟ್ರೇಲಿಯದ ಟ್ರಂಪ್ ಕಾರ್ಡ್ ಎನ್ನಲಾದ ಝಂಪಾ, ಯಾವುದೇ ವಿಕೆಟ್ ಗಳಿಸಲಿಲ್ಲ.

ರೋಹಿತ್ ಅವರ ಇನ್ನಿಂಗ್ಸ್‌ನ ಮತ್ತೊಂದು ಸ್ಮರಣೀಯ ಶಾಟ್ ಪ್ಯಾಟ್ ಕಮ್ಮಿನ್ಸ್ ಅವರ ಆರಂಭಿಕ ಓವರ್‌ನಲ್ಲಿ ಡೀಪ್ ಮಿಡ್‌ ವಿಕೆಟ್‌ನಲ್ಲಿ ಹೊಡೆದ ಸಿಕ್ಸರ್. ಐದನೇ ಓವರ್‌ನ ಕೊನೆಯಲ್ಲಿ ಒಂದು ರನ್‌ ಗಳಿಸಿದ ರೋಹಿತ್‌, ಅರ್ಧ ಶತಕ ಪೂರೈಸಿದರು. ಇದು ಪಂದ್ಯಾವಳಿಯ ಅತ್ಯಂತ ವೇಗದ ಆಟವಾಗಿದೆ.

ಎಂಟನೇ ಓವರ್‌ನಲ್ಲಿ ಮಾರ್ಕಸ್ ಸ್ಟೊಯಿನಿಸ್ ದಾಳಿಗೆ ಬಂದಾಗ, ರೋಹಿತ್ ಹೆಚ್ಚುವರಿ ಕವರ್‌ನಲ್ಲಿ ಸಿಕ್ಸರ್ ಗಳಿಸಿದರು.

ಸೂರ್ಯಕುಮಾರ್ 31 ರನ್: ಬೌಲಿಂಗಿಗೆ ಮರಳಿದ ಸ್ಟಾರ್ಕ್, ಯಾರ್ಕರ್‌ನಿಂದ ರೋಹಿತ್‌ ಅವರನ್ನು ಔಟ್‌ ಮಾಡಿದರು. ಸೂರ್ಯಕುಮಾರ್ ಯಾದವ್ (15 ಎಸೆತಗಳಲ್ಲಿ 31), ಹಾರ್ದಿಕ್ ಪಾಂಡ್ಯ (ಔಟಾಗದೆ 27) ಮತ್ತು ಶಿವಂ ದುಬೆ (22 ಎಸೆತಗಳಲ್ಲಿ 28) ಸಹಕಾರ ನೀಡಿದರು. ಆದರೆ, ಭಾರತ ಕೊನೆಯ ಐದು ಓವರ್‌ಗಳಲ್ಲಿ ಹೆಚ್ಚು ರನ್‌ ಗಳಿಸಲು ಸಾಧ್ಯವಾಗಲಿಲ್ಲ; ಕೇವಲ 43 ರನ್ ಗಳಿಸಿತು. ಜೋಶ್ ಹ್ಯಾಜಲ್‌ವುಡ್ ನಾಲ್ಕು ಓವರ್‌ಗಳಲ್ಲಿ ಒಂದು ವಿಕೆಟ್ ಪಡೆದು, ಕೇವಲ 14 ರನ್‌ ಕೊಟ್ಟರು.

Read More
Next Story