ಟಿ20 ವಿಶ್ವಕಪ್: ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ ಭಾರತ
x
ಪ್ರಾವಿಡೆನ್ಸ್, ಗಯಾನಾದಲ್ಲಿ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್‌ನ ನಾಯಕ ಜೋಸ್ ಬಟ್ಲರ್ ಅವರನ್ನು ವಜಾಗೊಳಿಸಿದ ನಂತರ ಸಹ ಆಟಗಾರರೊಂದಿಗೆ ಸಂಭ್ರಮಿಸಿದ ಅಕ್ಷರ್ ಪಟೇಲ್.

ಟಿ20 ವಿಶ್ವಕಪ್: ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ ಭಾರತ

ರೋಹಿತ್ ಶರ್ಮಾ (39 ಎಸೆತಗಳಲ್ಲಿ 57) ಮತ್ತು ಸೂರ್ಯಕುಮಾರ್ ಯಾದವ್ (36 ಎಸೆತಗಳಲ್ಲಿ 47) ಜೋಡಿ ಸಮರ್ಥ ಆಟದ ಮೂಲಕ ಭಾರತವನ್ನು ಸವಾಲಿನ ಮೊತ್ತಕ್ಕೆ ಕೊಂಡೊಯ್ದರು.‌ ಕುಲದೀಪ್ ಯಾದವ್ (3/19) ಮತ್ತು ಅಕ್ಷರ್ ಪಟೇಲ್ (3/23) ಅವರ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದರು.


ಗುರುವಾರ (ಜೂನ್ 27) ನಡೆದ ಐಸಿಸಿ ಟಿ 20 ವಿಶ್ವಕಪ್ 2024ರ ಸೆಮಿ ಫೈನಲ್‌ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಪಿನ್ನರ್‌ಗಳ ಅದ್ಭುತ ಪ್ರದರ್ಶನದಿಂದ ಭಾರತ ಫೈನಲ್‌ಗೆ ಪ್ರವೇಶ ಪಡೆಯಲು ಕಾರಣವಾಯಿತು.

ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮಳೆ ಕಾಟದ ನಡುವೆಯೂ ಎರಡನೇ ಸೆಮಿಫೈನಲ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಕುಲದೀಪ್ ಯಾದವ್ (3/19), ಅಕ್ಷರ್ ಪಟೇಲ್ (3/23), ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್ ಗಳಿಸಿದರು. ಈ ಮೂವರ ಮಾರಕ ಬೌಲಿಂಗ್‌ ದಾಳಿಯಿಂದ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 68 ರನ್ ಗಳ ಬೃಹತ್ ಜಯ ಗಳಿಸಿತು.

172 ರನ್‌ಗಳ ಗುರಿ ಬೆನ್ನತ್ತಿದ ಜೋಸ್ ಬಟ್ಲರ್ ನೇತೃತ್ವದ ತಂಡ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 25 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಮುಂದುವರಿಯಿತು. ಶನಿವಾರ (ಜೂನ್ 29) ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ಭಾರತ ತಂಡವು ಈವರೆಗೆ ಸೋಲು ಕಾಣದ ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಫೈನಲ್‌ ಪಂದ್ಯವು ರಾತ್ರಿ 8 (ಭಾರತೀಯ ಕಾಲಮಾನ) ಕ್ಕೆ ಪ್ರಾರಂಭವಾಗುತ್ತದೆ.

ರೋಹಿತ್ ಅರ್ಧಶತಕ: ನಾಯಕ ರೋಹಿತ್ ಚೆಂಡು ಕಡಿಮೆ ಪುಟಿದೇಳುವ ಪಿಚ್‌ನಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತೋರಿಸಿದರು, ಇದರಿಂದ ಭಾರತ 7 ವಿಕೆಟ್‌ಗೆ 171 ತಲುಪಿತು.

ರನ್‌ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿದ ವಿರಾಟ್ ಕೊಹ್ಲಿ, ಬೇಗ ಔಟಾದರು. ಆದರೆ ರೋಹಿತ್ (39 ಎಸೆತಗಳಲ್ಲಿ 57) ಮತ್ತು ಸೂರ್ಯಕುಮಾರ್ ಯಾದವ್ (36 ಎಸೆತಗಳಲ್ಲಿ 47) ಸಮರ್ಥ ಜೊತೆಯಾಟ ಆಡಿದರು. ಇಬ್ಬರೂ ಭಾರತವನ್ನು ಸವಾಲಿನ ಮೊತ್ತಕ್ಕೆ ಕೊಂಡೊಯ್ದರು.

ಪಂದ್ಯ ಆರಂಭಕ್ಕೂ ಮುನ್ನ ಮಳೆ ಕಾಟ ಶುರುವಾಗಿತ್ತು ಹಾಗಾಗಿ ಆಟ 1ಗಂಟೆ 15 ನಿಮಿಷ ವಿಳಂಬವಾಯಿತು. ಭಾರತ ಎಂಟು ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದ್ದಾಗ ಮತ್ತೊಮ್ಮೆ ಮಳೆ ಸುರಿಯಿತು.

ಕೊಹ್ಲಿ (9) ಮತ್ತು ರೋಹಿತ್ ಬ್ಯಾಟಿಂಗ್‌ಗೆ ಬಂದ ಕೂಡಲೇ ಕಡಿಮೆ ಬೌನ್ಸ್‌ ನಿಂದ ಬ್ಯಾಟರ್‌ಗಳಿಗೆ ಆಟವಾಡುವುದು ಕಷ್ಟವಾಗಲಿದೆ ಎಂಬುದು ಸ್ಪಷ್ಟವಾಯಿತು. ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಇನ್ನಿಂಗ್ಸ್‌ನ ಆರಂಭದಲ್ಲಿ ರೀಸ್ ಟೋಪ್ಲಿ ಮತ್ತು ಜೋಫ್ರಾ ಆರ್ಚರ್ ಅವರ ವೇಗದ ಚೆಂಡುಗಳನ್ನು ಹೊಡೆಯಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟಿಗೆ ಸಿಗುತ್ತಿರಲಿಲ್ಲ.

ಕೊಹ್ಲಿ ನಿಯತವಾಗಿ ಟೋಪ್ಲಿ ಮತ್ತು ಆರ್ಚರ್ ಇಬ್ಬರನ್ನೂ ಹಣಿಯಲು ಮುಂದಾದರೂ, ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಟೊಪ್ಲೆಯ ಒಂದು ಎಸೆತವನ್ನು ಮಿಡ್ ವಿಕೆಟ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದರು. ಆದರೆ, ಅವರ ಎರಡು ಎಸೆತಗಳ ನಂತರ ಔಟಾದರು.

ಹೊಂದಿಕೊಂಡ ರೋಹಿತ್‌: ರೋಹಿತ್ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಂಡು, ನಿಧಾನವಾಗಿ ಆಡಲು ನಿರ್ಧರಿಸಿದರು. ಅದಕ್ಕೆ ಒಂದು ಉದಾಹರಣೆಯೆಂದರೆ, ಎರಡನೇ ಓವರ್‌ನಲ್ಲಿ ಫಿಲ್ ಸಾಲ್ಟ್‌ ಎಸೆದ ಚೆಂಡು ಬೌಂಡರಿ ಸೇರಿದ್ದು. ಆನಂತರ ಟೋಪ್ಲೆ ಅವರ ಮೂರನೇ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದರು. ಪವರ್‌ಪ್ಲೇನಲ್ಲಿ ಭಾರತ ಎರಡು ವಿಕೆಟ್‌ಗಳಿಗೆ 46 ರನ್‌ ತಲುಪಿತು. ರಿಷಭ್ ಪಂತ್ (4) ಅವರು ಸ್ಯಾಮ್ ಕರ್ರನ್ ಎಸೆತದಲ್ಲಿ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ನೀಡಿ ಹೊರನಡೆದರು.

ಆನಂತರ ರೋಹಿತ್ ಮತ್ತು ಸ್ಪಿನ್ನರ್‌ ರಶೀದ್ ನಡುವಿನ ಆಕರ್ಷಕ ಆಟ ಆರಂಭವಾಯಿತು. ರೋಹಿತ್‌ ಆರಂಭಿಕ ಓವರಿನಲ್ಲಿ ರಿವರ್ಸ್ ಮತ್ತು ಸಾಂಪ್ರದಾಯಿಕ ಸ್ವೀಪ್ ಮೂಲಕ 2 ಬೌಂಡರಿ ಬಾರಿಸಿಸಿದರು.

ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮಳೆ ಆರಂಭವಾದಾಗ ರೋಹಿತ್ ಜೊತೆಗೆ ಸೂರ್ಯಕುಮಾರ್ ಯಾದವ್ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಜೋರ್ಡಾನ್ ಅವರ ಚೆಂಡನ್ನು ಸೂರ್ಯಕುಮಾರ್ ಗರಿಷ್ಠ ದೂರಕ್ಕೆ ಬಾರಿಸಿದರು. ಆನಂತರ ಪಂದ್ಯ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತವಾಯಿತು.

ವಿರಾಮದ ನಂತರ ಇಂಗ್ಲೆಂಡ್ ತಂಡದ ರಶೀದ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅವರು ಲೆಗ್ ಸ್ಪಿನ್ ಬೌಲಿಂಗ್ ಮಾಡಿದರು. ಆದರೆ, ರೋಹಿತ್ ಮತ್ತು ಸೂರ್ಯಕುಮಾರ್ ಅವರ ಸ್ಪೋಟಕ ಬ್ಯಾಟಿಂಗ್‌ಗೆ ಬ್ರೇಕ್‌ ಹಾಕಲು ಸಾಧ್ಯವಾಗಲಿಲ್ಲ.

ರೋಹಿತ್-ಸೂರ್ಯಕುಮಾರ್ ಜೋಡಿಯಾಟ: ಸ್ಯಾಮ್‌ ಕರ್ರನ್ ಅವರ 13ನೇ ಓವರ್‌ನಲ್ಲಿ ಸೂರ್ಯಕುಮಾರ್ ಎರಡು ಸಿಕ್ಸರ್‌ ಸಿಡಿಸಿದರು ಮತ್ತು ರೋಹಿತ್ ಎರಡನೇ ಸತತ ಅರ್ಧಶತಕವನ್ನು ಗಳಿಸಿದರು. ರಶೀದ್‌ ಹಾಕಿದ ಗೂಗ್ಲಿ ಬೌಲಿಂಗ್‌ಗೆ ರೋಹಿತ್‌ ವಿಕೆಟ್‌ ಒಪ್ಪಿಸಿ ಹೊರನಡೆದರು.

ಹಾರ್ದಿಕ್ ಪಾಂಡ್ಯ (13 ಎಸೆತಗಳಲ್ಲಿ 23) ಎರಡು ಸಿಕ್ಸರ್‌ ಹೊಡೆದು ಸ್ಪೋಟಕ ಆಟಕ್ಕೆ ಮುಂದಾದಾಗ ಕ್ಯಾಚ್‌ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಶಿವಂ ದುಬೆ ಈ ಪಂದ್ಯದಲ್ಲೂ ಮುಗ್ಗರಿಸಿದರು. ಮೊದಲ ಬೌಲ್‌ನಲ್ಲೇ ವಿಕೆಟ್‌ ಒಪ್ಪಿಸದರು. ಅಂತಿಮ ಓವರ್‌ ಹಾಕಿದ ಆರ್ಚರ್‌ ಬೌಲ್‌ನಲ್ಲಿ ರವೀಂದ್ರ ಜಡೇಜಾ (ಔಟಾಗದೆ 17) ಎರಡು ನಿರ್ಣಾಯಕ ಬೌಂಡರಿ ಗಳಿಸಿದರು. ಅಂತಿಮವಾಗಿ ಭಾರತದ ಸ್ಕೋರ್‌ 170 ದಾಟಿತು. ಕೊನೆಯ ಐದು ಓವರ್‌ಗಳಲ್ಲಿ ತಂಡವು 53 ರನ್ ಗಳಿಸಿತು.

Read More
Next Story