T20 ವಿಶ್ವಕಪ್ ಫೈನಲ್| ಭಾರತದ 11 ವರ್ಷಗಳ ಕಾಯುವಿಕೆ ಕೊನೆಗೊಳ್ಳುವುದೇ?
ಭಾರತ ತಂಡದ ಆಡುವ 11 ಆಟಗಾರರಲ್ಲಿ ಬದಲಾವಣೆ ಆಗುವುದಿಲ್ಲ.ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಶಿವಂ ದುಬೆ, ಈ ಮಾಡು-ಮಡಿ ಪಂದ್ಯದಲ್ಲಿ ಉತ್ತಮ ಆಟ ಆಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿಎರಡು ಅಜೇಯ ತಂಡಗಳಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ಶನಿವಾರ (ಜೂನ್ 29) ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಐಸಿಸಿ ಟಿ 20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ನೇತೃತ್ವದ ಇಂಡಿಯ, ತಮ್ಮ ಪ್ರತಿಸ್ಪರ್ಧಿಗಿಂತ ಸ್ವಲ್ಪ ಅನುಕೂಲಕರ ಸ್ಥಿತಿಯಲ್ಲಿದೆ.
ಭಾರತ ಐಸಿಸಿ ಟ್ರೋಫಿಗಾಗಿ 11 ವರ್ಷಗಳಿಂದ ಕಾಯುತ್ತಿದೆ; ದಕ್ಷಿಣ ಆಫ್ರಿಕಾ ಕೂಡ 25 ವರ್ಷಗಳಿಗೂ ಯಾವುದೇ ಪ್ರಮುಖ ಫಲಕವನ್ನು ಹೊಂದಿಲ್ಲದ ಕಾರಣ, ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶ ಹೊಂದಿದೆ. 2013 ರಲ್ಲಿ ಇಂಗ್ಲೆಂಡ್‌ನಲ್ಲಿ ಎಂ.ಎಸ್. ಧೋನಿ ನಾಯ ಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವು ಭಾರತದ ಕೊನೆಯ ಐಸಿಸಿ ಟ್ರೋಫಿ.
ಭಾರತಕ್ಕೆ ಬೆಂಬಲ: ಪಂದ್ಯಾವಳಿಯಲ್ಲಿ ಭಾರತದ ಅಭಿಯಾನ ಕಳೆದ ವರ್ಷ ತವರಿನಲ್ಲಿ ನಡೆದ ಒಂದು ದಿನದ ವಿಶ್ವಕಪ್ ನ್ನು ಹೋಲುತ್ತದೆ. ಆಗ ತಂಡ ಫೈನಲ್ಲಿನಲ್ಲಿ ಆಸ್ಟ್ರೇಲಿಯದಿಂದ ಸೋಲು ಅನುಭವಿಸಿತು.
ತಂಡ ಈ ಟೂರ್ನಿಯಲ್ಲಿ ಅಜೇಯವಾಗಿ ಉಳಿದುಕೊಂಡಿದೆ. ಮುಖ್ಯವಾದ ಅಂಶವೆಂದರೆ, ಟ್ರೋಫಿಯ ಹಾದಿಯಲ್ಲಿ ಆಸ್ಟ್ರೇಲಿಯ ಇಲ್ಲ.
1998 ರಲ್ಲಿ ಚಾಂಪಿಯನ್ಸ್ ಟ್ರೋಫಿ (ಆಗ ಐಸಿಸಿ ನಾಕ್ ಔಟ್ ಟ್ರೋಫಿ ಎಂಬ ಹೆಸರು)ಯ ಐಸಿಸಿ ಪಂದ್ಯದಲ್ಲಿ ಮಾತ್ರ ಜಯಗಳಿಸಿದ ದಕ್ಷಿಣ ಆಫ್ರಿಕಾ, ಭರವಸೆ ಮತ್ತು ಕನಸುಗಳೊಂದಿಗೆ ಫೈನಲ್‌ಗೆ ತೆರಳಿತು. ಅಂತಾರಾಷ್ಟ್ರೀಯವಾಗಿ ʻಚೋಕರ್ಸ್(ಅಂತಿಮ ಹಂತದಲ್ಲಿ ಉಸಿರು ಕಟ್ಟುವವರು) ಎಂಬ ಹಣೆಪಟ್ಟಿ ಪಡೆದಿರುವ ತಂಡ, ಕೆನ್ಸಿಂಗ್ಟನ್ ಓವಲ್‌ನಲ್ಲಿ ಆ ಅವಮಾನವನ್ನು ಕಿತ್ತು ಎಸೆಯಲು ಪ್ರಯತ್ನಿಸಬೇಕಿದೆ.
ಐಪಿಎಲ್ ಪ್ರಶಸ್ತಿ ಜೀವಮಾನದ ಸಾಧನೆ ಎಂದುಕೊಳ್ಳುವ ಆಟಗಾರರಿಗೆ, ವಿಶ್ವಕಪ್ ಟ್ರೋಫಿ ಅಂತಿಮ ಸಾಧನೆಯಾಗಿರುತ್ತದೆ.
ಗಯಾನಾದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿನ ಬಳಿಕ ಅಭಿಮಾನಿಗಳು ಮತ್ತು ಪರಿಣತರ ಪ್ರಕಾರ, ರೋಹಿತ್ ಮತ್ತು ತಂಡ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ ತಂಡದ ಸಂರಚನೆ ಮತ್ತು ಕೆರಿಬಿಯನ್ ದೇಶದ ಪರಿಸ್ಥಿತಿಯನ್ನು ಪರಿಗಣಿಸಿದರೆ, ಇದು ನ್ಯಾಯೋಚಿತ ಅವಲೋಕನ. ನವೆಂಬರ್ 19, 2023 ರಂದು ಅಹಮದಾಬಾದ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಎದುರು ಪ್ಯಾಟ್ ಕಮ್ಮಿನ್ಸ್ ಅವರ ಆಸ್ಟ್ರೇಲಿಯ ತಂಡ ಹಣಿದಾಗ, ಆದ ನೋವನ್ನು ಅಳಿಸಿಹಾಕುವ ನಿರೀಕ್ಷೆಯಿದೆ.
2007 ರ ಒಂದು ದಿನದ ವಿಶ್ವಕಪ್‌ನಲ್ಲಿ ಭಾರತದ ನಾಯಕರಾಗಿ ಕೆರಿಬಿಯನ್‌ನಲ್ಲಿ ಸೋಲುಂಡಿದ್ದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಗೆಲುವು ಪರಿಪೂರ್ಣ ವಿದಾಯ ಆಗಲಿದೆ.
10 ವರ್ಷಗಳ ಬಳಿಕ ಟಿ20 ವಿಶ್ವಕಪ್ ಫೈನಲ್‌ನಲ್ಲಿರುವ ಭಾರತ, ಸ್ಪರ್ಧೆಯಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಫೈನಲ್ ನಲ್ಲಿ ಸ್ಥಾನವನ್ನು ಗಳಿಸಿಕೊಂಡಿದೆ.
ತಂಡವು ಟ್ರಂಪ್ ಕಾರ್ಡ್ ಕುಲದೀಪ್ ಯಾದವ್ ಅವರನ್ನು ಕೆರಿಬಿಯನ್‌ನ ಸ್ಪಿನ್ ಸ್ನೇಹಿ ಪಿಚ್ ಗಳಲ್ಲಿಇಳಿಸುವ ಮೊದಲು, ನ್ಯೂಯಾರ್ಕ್‌ನ ಪರೀಕ್ಷಿಸದ ಪಿಚ್‌ಗಳಲ್ಲಿ ಮೂವರು ತಜ್ಞ ವೇಗಿಗಳನ್ನು ಬಳಸಿಕೊಂಡರು.
ಭಾರತ ತಂಡ ಅದೇ ಹನ್ನೊಂದು ಮಂದಿ ಆಟಗಾರರಿಗೆ ಅಂಟಿಕೊಳ್ಳುವುದು ನಿಶ್ಚಿತ. ಇಬ್ಬರು ಪ್ರಮುಖ ಆಟಗಾರರಿಂದ ಈ ಮಾಡು-ಮಡಿ ಪಂದ್ಯದಲ್ಲಿ ಉತ್ತಮ ಆಟವನ್ನು ನಿರೀಕ್ಷಿಸುತ್ತಿದ್ದಾರೆ.
ಫೈನಲ್‌ನಲ್ಲಿ ಕೊಹ್ಲಿಆಟ?: ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಅವರು ಹಿಂದಿನ ಐಪಿಎಲ್‌ನಲ್ಲಿ ಸಮೃದ್ಧ ರನ್ ಗಳಿಕೆ ನಂತರ ಅಂತಹ ಆಟವನ್ನು ಪ್ರದರ್ಶಿಸಿಲ್ಲ. ಆದರೆ, ಉತ್ತಮ ಲೆಂಥ್ ನ ಚೆಂಡುಗಳನ್ನು ಹೊಡೆಯುವುದು ಸವಾಲಾಗಿರುವ ಪಿಚ್‌ಗಳಲ್ಲಿ ಕೊಹ್ಲಿ, ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸಿಲ್ಲ.
ʻಅವರು ಅದನ್ನು ಫೈನಲ್‌ಗೆ ಉಳಿಸಿಕೊಂಡಿದ್ದಾರೆʼ ಎಂದು ಅವರ ಪಾಲುದಾರ ಮತ್ತು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಟಿ20 ಪಂದ್ಯ ಅವರ ಕೊನೆಯ ಇನ್ನಿಂಗ್ಸ್ ಆಗಿರಲಿದೆ. ಆದರೆ, ರೋಹಿತ್ ಇದಕ್ಕೆ ತದ್ವಿರುದ್ಧವಾಗಿ ಇತರ ಬ್ಯಾಟರ್‌ಗಳಿಗೆ ದಾರಿ ತೋರಿಸಿದ್ದಾರೆ ಮತ್ತು ಅವರ ಆಟ ಫೈನಲ್‌ನಲ್ಲಿ ಭಾರಿ ಪ್ರಾಮುಖ್ಯತೆ ಹೊಂದಿರಲಿದೆ.
ಈ ಪಂದ್ಯಾವಳಿಯಲ್ಲಿ ಮಧ್ಯಮ ಸಾಧನೆ ಮಾಡಿರುವ ಶಿವಂ ದುಬೆಯಿಂದ ಉತ್ತಮ ಆಟವನ್ನು ರೋಹಿತ್ ನಿರೀಕ್ಷಿಸಿದ್ದಾರೆ. ಸ್ಪಿನ್ನರ್‌ಗಳಾದ ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ವಿರುದ್ಧದ ಅವರ ಆಟ ಭಾರಿ ಪರಿಣಾಮ ಬೀರಬಹುದು.
ಬೌಲಿಂಗ್ ನಲ್ಲಿ ವೇಗಿಗಳು ಮತ್ತು ಸ್ಪಿನ್ನರ್‌ಗಳು ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಿರುವುದರಿಂದ ತಂಡ ಆ ಬಗ್ಗೆ ಚಿಂತಿಸಬೇಕಿಲ್ಲ.
ಫೈನಲ್‌ಗೆ ಕಡಿಮೆ ಸಮಯ: ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ನಂತರ ಬ್ರಿಡ್ಜ್‌ಟೌನ್‌ಗೆ ಆಗಮಿಸುವುದರಿಂದ, ಚೇತರಿಸಿಕೊಳ್ಳಲು ಕೇವಲ ಒಂದು ದಿನ ಮಾತ್ರ ಉಳಿದಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಅಂತಿಮ ಪಂದ್ಯದ ನಡುವೆ 2 ದಿನ ಬಿಡುವು ಪಡೆದುಕೊಂಡಿದೆ. ಶುಕ್ರವಾರ ತರಬೇತಿಯಲ್ಲಿ ತೊಡಗಿಕೊಂಡಿತ್ತು.
ಹಿಂದೆಂದೂ ವಿಶ್ವಕಪ್ ಫೈನಲ್‌ನ ಭಾಗವಾಗದ ಕಾರಣ, ತಂಡ ಕಳೆದುಕೊಳ್ಳುವುದು ಏನೂ ಇಲ್ಲ. ಆದರೆ, ಟ್ರಿನಿಡಾಡ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಜಯ ಸಾಧಿಸಿದ ನಂತರ ದಕ್ಷಿಣ ಆಫ್ರಿಕ ಗೆಲುವಿನ ರುಚಿಯನ್ನು ಅನುಭವಿಸುತ್ತಿದ್ದಾರೆ.
ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ ಮತ್ತು ರೀಜಾ ಹೆಂಡ್ರಿಕ್ಸ್‌ನಿಂದ ರನ್‌ಗಳನ್ನು ನಿರೀಕ್ಷಿಸಿದ್ದಾರೆ. ನಾಯಕ ಏಡೆನ್ ಮಾರ್ಕ್ರಾಮ್ ದೊಡ್ಡ ತಂಡಗಳ ವಿರುದ್ಧ ಹೆಚ್ಚು ಯಶಸ್ಸು ಗಳಿಸಿಲ್ಲ. ಅವರಿಂದ ದೊಡ್ಡ ಸ್ಕೋರ್ ನಿರೀಕ್ಷಿಸಲಾಗಿದೆ. ವಿನಾಶಕಾರಿ ಹೊಡೆತಗಾರ ಹೆನ್ರಿಚ್ ಕ್ಲಾಸೆನ್‌ಗೂ ರನ್‌ಗಳ ಅಗತ್ಯವಿದೆ.
ದಕ್ಷಿಣ ಆಫ್ರಿಕಾದ ವೇಗಿಗಳ ವಿಭಾಗ ಉತ್ತಮವಾಗಿದೆ. ಶಮ್ಸಿ ಮತ್ತು ಮಹಾರಾಜ್ ಪರಿಣಾಮಕಾರಿಯಾಗಿದ್ದರೂ, ಭಾರತೀಯ ಬ್ಯಾಟ್ಸ್‌ಮನ್‌ಗಳು ಅವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಶನಿವಾರ ಮಳೆ ಬೀಳುವ ಸಾಧ್ಯತೆ ಇದೆ. ಇದರಿಂದ, ಐಸಿಸಿ ಎಲ್ಲಾ ಪ್ರಮುಖ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಿದೆ.
ತಂಡಗಳು:
ಭಾರತ: ರೋಹಿತ್ ಶರ್ಮಾ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್ಗಳು), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್, ಸಂಜು ಸ್ಯಾಮ್ಸನ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ಸಿ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್ಟ್ವಾ), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಜೆರಾಲ್ಡ್ ಕೋಟ್ಜೆ ಫಾರ್ಟುಯಿನ್, ರಯಾನ್ ರಿಕೆಲ್ಟನ್.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ ಭಾರತೀಯ ಕಾಲಮಾನ