ಟಿ 20  ವಿಶ್ವಕಪ್:  ಪಾಕಿಸ್ತಾನವನ್ನು 6 ರನ್‌ಗಳಿಂದ ಸೋಲಿಸಿದ ಭಾರತ
x

ಟಿ 20 ವಿಶ್ವಕಪ್: ಪಾಕಿಸ್ತಾನವನ್ನು 6 ರನ್‌ಗಳಿಂದ ಸೋಲಿಸಿದ ಭಾರತ


ನ್ಯೂಯಾರ್ಕ್‌ನ ಹೊರ ವಲಯದಲ್ಲಿರುವ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ 2024 ಸ್ಪರ್ಧೆಯಲ್ಲಿ ಪಾಕಿಸ್ತಾನವನ್ನು 6 ರನ್‌ಗಳ ಅಂತರದಲ್ಲಿ ಸೋಲಿಸಿದೆ. ಭಾರತ ಗಳಿಸಿದ 119 ರನ್‌, ಟಿ 20ಯಲ್ಲಿ ಭಾರತ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ.

ಜಸ್ಪ್ರೀತ್ ಬೂಮ್ರಾ ನಾಲ್ಕು ಓವರ್‌ಗಳಲ್ಲಿ 14 ರನ್‌ ನೀಡಿ, ಮೂರು ವಿಕೆಟ್‌ ಕಬಳಿಸಿದರು. ಅವರ ಬೌಲಿಂಗಿನಲ್ಲಿ 15 ಡಾಟ್ ಬಾಲ್‌ಗಳು ಇದ್ದವು. ಉಪ ನಾಯಕ ಹಾರ್ದಿಕ್ ಪಾಂಡ್ಯ ನಾಲ್ಕು ಓವರ್‌ಗಳಲ್ಲಿ 24 ರನ್‌ ನೀಡಿ 2 ವಿಕೆಟ್‌ ಪಡೆದು, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಆಟ ತಿರುಗಿಸಿದ ಬುಮ್ರಾ: ಗೆಲುವಿಗೆ 120 ರನ್‌ ಗುರಿ ಹೊಂದಿದ್ದ ಪಾಕಿಸ್ತಾನ 14ನೇ ಓವರ್ ವರೆಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬು ಮ್ರಾ ತಮ್ಮ ಎರಡನೇ ಸ್ಪೆಲ್‌ ನ ಮೊದಲ ಎಸೆತದಲ್ಲಿ ಮೊಹಮ್ಮದ್ ರಿಜ್ವಾನ್ (44 ಎಸೆತ, 31 ರನ್) ಅವರನ್ನು ಔಟ್ ಮಾಡಿದರು. ರಿಜ್ವಾನ್ ಔಟಾದಾಗ, ಪಾಕಿಸ್ತಾನ 80/4 ಆಗಿತ್ತು.‌ಆನಂತರ ವಿಕೆಟ್‌ಗಳು ಶೀಘ್ರವಾಗಿ ಪತನಗೊಂಡವು. ಪಾಕಿಸ್ತಾನ 20 ಓವರಿಗೆ 7 ವಿಕೆಟ್‌ ಕಳೆದುಕೊಂಡು 113 ರನ್‌ ಗಳಿಸಿತು.

ಇದರೊಂದಿಗೆ ಭಾರತವು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೇಲೆ ತನ್ನ ಪ್ರಾಬಲ್ಯ ಮುಂದುವರಿಸಿತು. ಮುಖಾಮುಖಿಯಲ್ಲಿ 7-1 ಪಂದ್ಯಗಳಿಂದ ಮುಂದೆ ಇದೆ. ಎ ಗುಂಪಿನಲ್ಲಿ ಐರ್ಲೆಂಡ್ ವಿರುದ್ಧ ಜಯಗಳಿಸಿ ಅಭಿಯಾನ ಆರಂಭಿಸಿದ ಭಾರತಕ್ಕೆ ಇದು ಸತತ ಎರಡನೇ ಗೆಲುವು. ಪಾಕಿಸ್ತಾನ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ. ತಮ್ಮ ಆರಂಭಿಕ ಪಂದ್ಯದಲ್ಲಿ ಸಹ ಆತಿಥೇಯ ಅಮೆರಿಕದಿಂದ ಆಘಾತಕಾರಿ ಸೋಲು ಕಂಡಿತ್ತು.

ಬ್ಯಾಟಿಂಗ್ ಕುಸಿತ: ಇದಕ್ಕೂ ಮೊದಲು ಭಾರತ ಪಂದ್ಯದ ಮಧ್ಯದಲ್ಲಿ ಕುಸಿತವನ್ನು ಅನುಭವಿಸಿತು. 19 ಓವರ್‌ಗಳಲ್ಲಿ 119 ರನ್‌ ಗಳಿಸಿತು. ಮೂರನೇ ಕ್ರಮಾಂಕದ ಆಟಗಾರ ಪಂತ್, 31 ಎಸೆತಗಳಲ್ಲಿ 42 ರನ್ ಗಳಿಸಿದರು. ಆದರೆ, ಹಲವು ತಾರೆಗಳಿದ್ದ ತಂಡವು ತೀವ್ರ ಗತಿಯ ಕುಸಿತ ಅನುಭವಿಸಿತು. ನಸೀಮ್ ಷಾ ಮತ್ತು ಹ್ಯಾರಿಸ್ ರೌಫ್ ತಲಾ ಮೂರು ವಿಕೆಟ್‌ ಹಂಚಿಕೊಂಡರು. 12ನೇ ಓವರ್‌ನಲ್ಲಿ 3 ವಿಕೆಟ್‌ಗೆ 89 ರನ್‌ ಗಳಿಸಿದ್ದ ಭಾರತ, ಆನಂತರ ಕೇವಲ 28 ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡಿತು. ಮಳೆಯಿಂದ ಪಂದ್ಯ 50 ನಿಮಿಷ ಕಾಲ ತಡವಾಗಿ ಪ್ರಾರಂಭವಾಯಿತು. ಮೋಡ ಕವಿದ ವಾತಾವರಣದಿಂದಾಗಿ, ನಿರೀಕ್ಷೆಯಂತೆ ಬಾಬರ್ ಅಜಮ್ ಎದುರಾಳಿ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿದರು.

ಶಾಹೀನ್‌ ಅಫ್ರಿದಿ ಅವರ ಮೊದಲ ಓವರಿನಲ್ಲಿ ರೋಹಿತ್ ಶರ್ಮ ಸಿಕ್ಸರ್‌ ಹೊಡೆದರು. ಆನಂತರ, ಮಳೆಯಿಂದ ಪಂದ್ಯ ಸರಿಸುಮಾರು 30 ನಿಮಿಷ ನಿಲ್ಲಿಸಲಾಯಿತು.

ಕೊಹ್ಲಿ ವೈಫಲ್ಯ: ಪಾಕಿಸ್ತಾನದ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ (3 ಎಸೆತ, 4 ರನ್ ) ನಸೀಮ್‌ ಶಾ ಬೌಲಿಂಗಿನ ಮೊದಲ ಎಸೆತದಲ್ಲಿ ಅದ್ಭುತ ಕವರ್ ಡ್ರೈವ್ ಹೊಡೆದರು. ಅಫ್ರಿದಿ ಅವರ ಮುಂದಿನ ಓವರ್‌ನಲ್ಲಿ ರೋಹಿತ್ (12 ಎಸೆತಗಳಲ್ಲಿ 13) ನಿರ್ಗಮಿಸಿದರು.

ಭಾರತ ಎರಡು ವಿಕೆಟ್‌ಗೆ 19 ರನ್‌ ಗಳಿಸಿತ್ತು. ಸೂರ್ಯಕುಮಾರ್ ಯಾದವ್ ಅವರ ಬದಲು ನಾಲ್ಕನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ (18 ಎಸೆತಗಳಲ್ಲಿ 20) ಅವರಿಗೆ ಬಡ್ತಿ ನೀಡಿತು. ತಂಡ ಎಂಟನೇ ಕ್ರಮಾಂಕದವರೆಗೆ ಸಮರ್ಥ ಬ್ಯಾಟರ್‌ಗಳನ್ನು ಹೊಂದಿದ್ದು, ಈ ನಡೆ ಆಶ್ಚರ್ಯ ಮೂಡಿಸಿತು. ಆದರೆ, ಅಕ್ಸರ್‌ ಅಫ್ರಿದಿ ಅವರ ಎಸೆತದಲ್ಲಿ ಥರ್ಡ್ ಮ್ಯಾನ್‌ ಪ್ರದೇಶದಲ್ಲಿ ಸಿಕ್ಸರ್ ಸೇರಿದಂತೆ ಕೆಲವು ದಿಟ್ಟ ಹೊಡೆತ ಬಾರಿಸಿದರು.

ಪಂತ್-ಅಕ್ಸರ್ ಪಾಲುದಾರಿಕೆ: ಪಂತ್ ಮತ್ತು ಅಕ್ಷರ್ 30 ಎಸೆತಗಳಲ್ಲಿ 39 ರನ್‌ ಜೋಡಿಸಿದರು. ಮೊಹಮ್ಮದ್ ಅಮೀರ್ ಎಸೆತದಲ್ಲಿ ಎರಡು ಬೌಂಡರಿ ಗಳಿಸಿದ ಪಂತ್, ವೈಯಕ್ತಿಕ ಸ್ಕೋರ್‌ 8 ಆಗಿದ್ದಾಗ ಜೀವದಾನ ಪಡೆದರು. ಹ್ಯಾರಿಸ್ ರೌಫ್ ಅವರ ಆರಂಭಿಕ ಓವರ್‌ನಲ್ಲಿ ಮೂರು ಬೌಂಡರಿ ಬಂದಿತು. ಸ್ಪಿನ್ನರ್ ಇಮಾದ್ ವಾಸಿಮ್ ಅವರ ಬೌಲಿಂಗಿನಲ್ಲಿ ಇನ್ನೊಂದು ಬೌಂಡರಿ ಬಂದಿತು. ಸೂರ್ಯಕುಮಾರ್ ಯಾದವ್ (8 ಎಸೆತ, 7 ರನ್ ) ಅವರೊಂದಿಗಿನ 31 ರನ್‌ ಜೊತೆಯಾಟದಿಂದ ಭಾರತ 10 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 81 ರನ್‌ ಗಳಿಸಿತು. ಆದರೆ, ಪಾಕಿಸ್ತಾನ 11-15 ಓವರ್‌ಗಳ ನಡುವೆ ನಾಲ್ಕು ವಿಕೆಟ್‌ ಗಳಿಸಿತು ಮತ್ತು ಕೇವಲ 15 ರನ್‌ ಕೊಟ್ಟಿತು. ಇದರಿಂದ ಭಾರತ 7 ವಿಕೆಟ್‌ಗೆ 96 ರನ್‌ಗೆ ಹೆಣಗಾಡಿತು.

ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ, ಪಂತ್ ಜಗ್ಗಲಿಲ್ಲ. ಅವರು ನೇರವಾಗಿ ಹೊಡೆದು, ಅಮೀರ್‌ಗೆ ಮೊದಲ ವಿಕೆಟ್ ನೀಡಿದರು. ನಂತರದ ಎಸೆತಕ್ಕೆ ರವೀಂದ್ರ ಜಡೇಜಾ ಔಟಾದರು. ಐದು ಓವರ್‌ಗಿಂತ ಹೆಚ್ಚು ಬಾಕಿ ಇರುವಾಗ ಆಗಮಿಸಿದ ಹಾರ್ದಿಕ್, ಹೆಚ್ಚು ಕಾಲ ಉಳಿಯಲಿಲ್ಲ.

Read More
Next Story