ಟಿ 20 ವಿಶ್ವಕಪ್ 2024: ವೀಕ್ಷಕ ವಿವರಣೆಗಾರರಲ್ಲಿ ನಾಲ್ವರು ಭಾರತೀಯರು
x

ಟಿ 20 ವಿಶ್ವಕಪ್ 2024: ವೀಕ್ಷಕ ವಿವರಣೆಗಾರರಲ್ಲಿ ನಾಲ್ವರು ಭಾರತೀಯರು

ವೀಕ್ಷಕ ವಿವರಣೆಗಾರರಲ್ಲಿ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ದಿನೇಶ್ ಕಾರ್ತಿಕ್, ಹರ್ಷ ಭೋಗ್ಲೆ ಇದ್ದಾರೆ.


ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಮೆರಿಕ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಜೂನ್‌ ನಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ವೀಕ್ಷಕ ವಿವರಣೆಗಾರರನ್ನು ಶುಕ್ರವಾರ (ಮೇ 24) ಪ್ರಕಟಿಸಿದೆ.

ʻಕ್ರಿಕೆಟ್ ದಂತಕಥೆಗಳನ್ನು ಒಳಗೊಂಡ ಸುಪ್ರಸಿದ್ಧ ವಿವರಣೆಗಾರರ ತಂಡವು ಒಳನೋಟ ಮತ್ತು ವಿಶ್ಲೇಷಣೆಯನ್ನು ನೀಡಲಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸಿನ ಒಂಬತ್ತು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ,ʼ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಖ್ಯಾತ ವೀಕ್ಷಕ ವಿವರಣೆಗಾರರಾದ ರವಿಶಾಸ್ತ್ರಿ, ನಾಸರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಹರ್ಷಾ ಭೋಗ್ಲೆ ಮತ್ತು ಇಯಾನ್ ಬಿಷಪ್ ಅವರು ವಿವರಣೆಗಾರರ ತಂಡವನ್ನು ಮುನ್ನಡೆಸಲಿದ್ದಾರೆ. ದಿನೇಶ್ ಕಾರ್ತಿಕ್, ಎಬೊನಿ ರೈನ್‌ಫೋರ್ಡ್‌ ಬ್ರೆಂಟ್‌, ಸ್ಯಾಮ್ಯುಯಲ್ ಬದ್ರಿ, ಕಾರ್ಲೋಸ್ ಬ್ರಾಥ್‌ವೈಟ್, ಸ್ಟೀವ್ ಸ್ಮಿತ್ ಮತ್ತು ಲೀಸಾ ಸ್ಥಾಲೇಕರ್‌ ಜೊತೆಗೆ 2021ರಲ್ಲಿ ಟ್ರೋಫಿ ವಿಜೇತ ಆರನ್ ಫಿಂಚ್ ಸೇರಿದ್ದಾರೆ.

ರಿಕಿ ಪಾಂಟಿಂಗ್, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಮ್ ಪರಿಣತ ಒಳನೋಟಗಳನ್ನು ನೀಡಲಿದ್ದಾರೆ. ಜಾಮ್‌ ಬಾಯ್ ಎಂದು ಹೆಸರಾದ ಅಮೆರಿಕನ್ ನಿರೂಪಕ ಜೇಮ್ಸ್ ಒಬ್ರಿಯಾನ್ ಅವರು ಅಮೆರಿಕದ ಪ್ರೇಕ್ಷಕರಿಗೆ ಆಟದ ಬಗ್ಗೆ ವಿವರಿಸಲು ಸೇರ್ಪಡೆಯಾಗಿದ್ದಾರೆ.

ಡೇಲ್ ಸ್ಟೇಯ್ನ್, ಗ್ರೀಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೌಲ್, ಶಾನ್ ಪೊಲಾಕ್ ಮತ್ತು ಕೇಟಿ ಮಾರ್ಟಿನ್ ತಂಡವನ್ನು ಸೇರುವ ಇತರ ದಿಗ್ಗಜರು.

ವಿಶ್ವದ ಕೆಲವು ಪ್ರಮುಖ ಕ್ರಿಕೆಟ್ ಪ್ರಸಾರಕರಾದ ಎಂಪುಮೆಲೆಲೊ ಎಂಬಾಂಗ್ವಾ, ನಟಾಲಿ ಜರ್ಮನೋಸ್, ಡ್ಯಾನಿ ಮಾರಿಸನ್, ಅಲಿಸನ್ ಮಿಚೆಲ್, ಅಲನ್ ವಿಲ್ಕಿನ್ಸ್, ಬ್ರಿಯಾನ್ ಮುರ್ಗಟ್ರಾಯ್ಡ್, ಮೈಕ್ ಹೆಸ್‌ಮನ್, ಇಯಾನ್ ವಾರ್ಡ್, ಅಥರ್ ಅಲಿ ಖಾನ್, ರಸೆಲ್ ಆರ್ನಾಲ್ಡ್ , ನಿಯಾಲ್ ಒಬ್ರಿಯಾನ್, ಕಾಸ್ ನಾಯ್ಡೂ ಮತ್ತು ವೆಸ್ಟ್ ಇಂಡೀಸ್ ಮಾಜಿ ನಾಯಕ ಡರೆನ್ ಗಂಗಾ.

ಆರನ್ ಫಿಂಚ್ ಹೇಳಿದರು: ʻಇದೊಂದು ವಿಶೇಷ ಕಾರ್ಯಕ್ರಮ. 20 ತಂಡಗಳು ಸ್ಪರ್ಧಿಸಲಿದ್ದು, ರೋಮಾಂಚನ ಖಾತ್ರಿʼ ಎಂದರು. ʻನಾನು 2021 ರ ಆವೃತ್ತಿಯಲ್ಲಿ ಆಸ್ಟ್ರೇಲಿಯವನ್ನು ಗೆಲುವಿಗೆ ಮುನ್ನಡೆಸಿದ್ದಕ್ಕೆ ಹೆಮ್ಮೆಪಡುತ್ತೇನೆ. ಪಂದ್ಯಾವಳಿ ವೇಳೆ ವಿವರಣೆ ನೀಡಲು ನನ್ನ ಎಲ್ಲ ಅನುಭವ ಬಳಸುತ್ತೇನೆ,ʼ ಎಂದರು.

ದಿನೇಶ್ ಕಾರ್ತಿಕ್,ʻ20 ತಂಡ, 55 ಪಂದ್ಯ ಮತ್ತು ಹೊಸ ಸ್ಥಳದೊಂದಿಗೆ ಇದು ರೋಮಾಂಚಕ ಸಂಯೋಜನೆ,ʼ ಎಂದರು.

ಐಸಿಸಿ ಪಟ್ಟಿ: 1. ರವಿಶಾಸ್ತ್ರಿ 2. ನಾಸರ್ ಹುಸೇನ್ 3. ಇಯಾನ್ ಸ್ಮಿತ್ 4. ಮೆಲ್ ಜೋನ್ಸ್ 5. ಹರ್ಷಾ ಭೋಗ್ಲೆ 6. ಇಯಾನ್ ಬಿಷಪ್ 7. ಆರನ್ ಫಿಂಚ್ 8. ದಿನೇಶ್ ಕಾರ್ತಿಕ್ 9. ಎಬೊನಿ ರೈನ್‌ಫೋರ್ಡ್‌ ಬ್ರೆಂಟ್ 10. ಸ್ಯಾಮ್ಯುಯೆಲ್ ಬದ್ರಿ 11. ಕಾರ್ಲೋ ಸ್ ಬ್ರಾಥ್‌ವೈಟ್ 12. ಸ್ಟೀವ್ ಸ್ಮಿತ್ 13. ಲಿಸಾ ಸ್ಥಾಲೇಕರ್ 14. ರಿಕಿ ಪಾಂಟಿಂಗ್ 15. ಸುನಿಲ್ ಗವಾಸ್ಕರ್ 16. ಮ್ಯಾಥ್ಯೂ ಹೇಡನ್ 17. ರಮಿಜ್ ರಾಜಾ 18. ಇಯಾನ್ ಮಾರ್ಗನ್ 19. ಟಾಮ್ ಮೂಡಿ 20. ವಾಸಿಂ ಅಕ್ರಮ್ 21. ಡೇಲ್ ಸ್ಟೇಯ್ನ್ 22. ಗ್ರೀಮ್ ಸ್ಮಿತ್ 23. ಮೈಕೆಲ್ ಅಥರ್ಟನ್ 24. ವಕಾರ್ ಯೂನಿಸ್ 25. ಸೈಮನ್ ಡೌಲ್ 26. ಶಾನ್ ಪೊಲಾಕ್ 27. ಕೇಟಿ ಮಾರ್ಟಿನ್ 28. ನಟಾಲಿಯಾ ಜರ್ಮನೋಸ್ 29. ಎಂಪುಮೆಲೆಲೊ ಎಂಬಾಂಗ್ವಾ 30. ಡ್ಯಾನಿ ಮಾರಿಸನ್ 31. ಅಲಿಸನ್ ಮಿಚೆಲ್ 32. ಅಲನ್ ವಿಲ್ಕಿನ್ಸ್ 33. ಬ್ರಿಯಾನ್ ಮುರ್ಗಟ್ರಾಯ್ಡ್ 34. ಮೈಕ್ ಹೇಸ್ಮನ್ 35. ಇಯಾನ್ ವಾರ್ಡ್ 36. ಅಥರ್ ಅಲಿ ಖಾನ್ 37. ರಸ್ಸೆಲ್ ಅರ್ನಾಲ್ಡ್ 38. ನಿಯಾಲ್ ಒ'ಬ್ರೇನ್ 39. ಕಾಸ್ ನಾಯ್ಡೂ

40. ಡರೆನ್ ಗಂಗಾ 41. ಜೇಮ್ಸ್ ಒ'ಬ್ರೇನ್

Read More
Next Story