ಟಿ20 ವಿಶ್ವಕಪ್ | ಮಹಾರಾಷ್ಟ್ರದಿಂದ 11 ಕೋಟಿ ನಗದು ಬಹುಮಾನ: ಏಕನಾಥ್‌ ಶಿಂಧೆ ಜೇಬಿನಿಂದ ಕೊಡಲಿ ಎಂದ ಕಾಂಗ್ರೆಸ್‌
x
ಏಕನಾಥ್‌ ಶಿಂಧೆ - ರೋಹಿತ್‌ ಶರ್ಮಾ

ಟಿ20 ವಿಶ್ವಕಪ್ | ಮಹಾರಾಷ್ಟ್ರದಿಂದ 11 ಕೋಟಿ ನಗದು ಬಹುಮಾನ: ಏಕನಾಥ್‌ ಶಿಂಧೆ ಜೇಬಿನಿಂದ ಕೊಡಲಿ ಎಂದ ಕಾಂಗ್ರೆಸ್‌

ಟಿ20 ವಿಶ್ವಕಪ್‌ವಿಜೇತ ಭಾರತ ತಂಡದ ಸದಸ್ಯರಿಗೆ ಬಹುಮಾನವಾಗಿ 11 ಕೋಟಿ ನಗದು ವಿತರಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ. ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು 11 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದು, ಇದನು ಮಹಾರಾಷ್ಟ್ರದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ವಿರೋಧಿಸಿವೆ.


ಟಿ20 ವಿಶ್ವಕಪ್‌ವಿಜೇತ ಭಾರತ ತಂಡದ ಸದಸ್ಯರಿಗೆ ಬಹುಮಾನವಾಗಿ 11 ಕೋಟಿ ನಗದು ವಿತರಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ.

ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವು 11 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದು, ಇದನು ಮಹಾರಾಷ್ಟ್ರದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನೆ (ಯುಬಿಟಿ) ವಿರೋಧಿಸಿವೆ. ಈ ವಿಷಯದಲ್ಲಿ ಸರ್ಕಾರ ತನ್ನ ಬೆನ್ನು ತಾನೇ ತಟ್ಟಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಕ್ರಿಕೆಟಿಗರ ಸಾಧನೆಯ ಬಗ್ಗೆ ನಾವು ಹೆಮ್ಮೆ ಪಡುತ್ತಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರದ ಬೊಕ್ಕಸದಿಂದ 11 ಕೋಟಿ ರೂಪಾಯಿ ನೀಡುವ ಅಗತ್ಯವಿರಲಿಲ್ಲ. ಈ ಮೊತ್ತವನ್ನು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ತಮ್ಮ ವೈಯಕ್ತಿಕ ಖಾತೆಯಿಂದಲೇ ಭರಿಸಲಿ ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರಿಸಿರುವ ಬಿಜೆಪಿ ಶಾಸಕ ಪ್ರವೀಣ್ ದಾರೇಕರ್ ಅವರುು, ಕಾಂಗ್ರೆಸ್ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಭಾರತ ಕ್ರಿಕೆಟ್ ತಂಡಕ್ಕೆ 11 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಮಹಾರಾಷ್ಟ್ರದ ವಿಧಾನ ಭವನದಲ್ಲಿ (ರಾಜ್ಯ ಶಾಸಕಾಂಗ ಸಂಕೀರ್ಣ) ಭಾರತ ತಂಡದ ನಾಲ್ವರು ಮುಂಬೈ ಆಟಗಾರರಾದ ಭಾರತದ ಟಿ20 ತಂಟದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಆಟಗಾರರಿಗೆ ನಗದು ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಡೆತ್ತಿವಾರ್ ಅವರು, ರಾಜ್ಯದ ಬೊಕ್ಕಸದಿಂದ 11 ಕೋಟಿ ರೂಪಾಯಿ ಕೊಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿ, ಬಡವರು ಸಂಕಷ್ಟ ಅನುಭವಿಸಿದರೂ, ಸರ್ಕಾರ ಮಾತ್ರ ತನ್ನ ಬೆನ್ನನ್ನು ತಟ್ಟಿಕೊಳ್ಳಲು ಬಯಸುತ್ತಿದೆ ಎಂದಿದ್ದಾರೆ.

ಶಿವಸೇನೆ (ಯುಬಿಟಿ)ಯ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದನ್ವೆ ಮಾತನಾಡಿ, ಮಹಾರಾಷ್ಟ್ರ ಸರ್ಕಾರದ ಬೊಕ್ಕಸದಿಂದ ಕ್ರೀಡಾಪಟುಗಳಿಗೆ 11 ಕೋಟಿ ರೂಪಾಯಿ ನೀಡುವುದು ಅಗತ್ಯವಿರಲಿಲ್ಲ. ಈ ರೀತಿ ಪರಿಹಾರ ನೀಡುವುದಾದರೆ, ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರು ಸ್ವಂತ ಜೇಬಿನಿಂದ 11 ಕೋಟಿ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಈ ವಿಷಯದ ಬಗ್ಗೆ ಮಾತನಾಡಿರುವ ಬಿಜೆಪಿಯ ನಾಯಕ ದಾರೇಕರ್ ಅವರು ಮಾತನಾಡಿ, ಇದು ವಿರೋಧ ಪಕ್ಷದ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಟಿ20 ಪುರುಷರ ತಂಡ ವಿಶ್ವಕಪ್ ಗೆದ್ದಿರುವುದಕ್ಕೆ ಇಡೀ ದೇಶವೇ ಸಂಭ್ರಮಿಸಿದೆ. ಎಲ್ಲರೂ ಖುಷಿಯಾಗಿದ್ದಾರೆ. ಮುಂಬೈನ ಮರೀನ್ ಡ್ರೈವ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟಿಗರ ಮೇಲೆ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದರು. ಆದರೆ, ವಿರೋಧ ಪಕ್ಷಗಳು ಈ ವಿಷಯದಲ್ಲಿ ರಾಜಕೀಯ ನಡೆಸುತ್ತಿವೆ. ನಮ್ಮ ಸರ್ಕಾರವು ರೈತರ ಪರ ಕಾಳಜಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

Read More
Next Story