T20 ವಿಶ್ವಕಪ್ 2024: ಸೂರ್ಯಕುಮಾರ್‌ ಭರ್ಜರಿ ಆಟ, ಬೂಮ್ರಾ ಮಾರಕ ‌ಬೌಲಿಂಗ್‌- ಭಾರತಕ್ಕೆ ಭಾರಿ ಗೆಲುವು
x

T20 ವಿಶ್ವಕಪ್ 2024: ಸೂರ್ಯಕುಮಾರ್‌ ಭರ್ಜರಿ ಆಟ, ಬೂಮ್ರಾ ಮಾರಕ ‌ಬೌಲಿಂಗ್‌- ಭಾರತಕ್ಕೆ ಭಾರಿ ಗೆಲುವು

ತಂಡದ ಅತ್ಯುತ್ತಮ ಟಿ20 ಬ್ಯಾಟರ್ ಮತ್ತು ಬೌಲರ್‌ ಲಯವನ್ನು ಕಂಡುಕೊಂಡಿದ್ದರಿಂದ, ಭಾರತ ಗುರುವಾರ (ಜೂನ್ 20) ಕೆನ್ಸಿಂಗ್ಟನ್ ಓವಲ್ ಪಾರ್ಕ್‌ನಲ್ಲಿ ಆಫ್ಗನಿಸ್ತಾನ ವಿರುದ್ಧದ ಪಂದ್ಯವನ್ನು ತನ್ನದಾಗಿಸಿಕೊಂಡಿತು.


ತಂಡದ ಅತ್ಯುತ್ತಮ ಟಿ20 ಬ್ಯಾಟರ್ ಮತ್ತು ಬೌಲರ್‌ ಲಯವನ್ನು ಕಂಡುಕೊಂಡಿದ್ದರಿಂದ, ಭಾರತ ಗುರುವಾರ (ಜೂನ್ 20) ಕೆನ್ಸಿಂಗ್ಟನ್ ಓವಲ್ ಪಾರ್ಕ್‌ನಲ್ಲಿ ಅಫ್ಗನಿಸ್ಥಾನ ವಿರುದ್ಧದ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಮೇಲ್ನೋಟಕ್ಕೆ, ಇದೊಂದು ಕೌತುಕದ ಪಂದ್ಯವಾಗಿತ್ತು. ಭಾರತದ ಲಕ್ಷಾಂತರ ಬೆಂಬಲಿಗರು ಸೂಪರ್ ಎಂಟು ಎದುರಾಳಿಗಳಲ್ಲಿ ಮೊದಲನೆಯವರು ಅಫ್ಗನ್ನರು ಎಂದು ಸಂತೋಷಗೊಂಡಿದ್ದರು. ಆದರೆ, ಅಫ್ಘನ್ನರು ಅಗಾಧ ಕೌಶಲ ಹೊಂದಿರುವ ಮತ್ತು ಭಯವಿಲ್ಲದೆ ಆಟವಾಡುವ ಅಪಾಯಕಾರಿ ತಂಡ.

ರೋಹಿತ್-ಕೊಹ್ಲಿ ಜೋಡಿ ಮತ್ತೆ ವಿಫಲ: ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಮೊಹಮ್ಮದ್ ನಬಿ ಮತ್ತು ನೂರ್ ಅಹ್ಮದ್ ಮತ್ತಿತರ ಸ್ಟಾರ್‌ ಆಟಗಾರರಿಂದ ತುಂಬಿರುವ ಅಫ್ಘಾನಿಸ್ತಾನ ತಂಡ, 20 ಓವರ್‌ಗಳ ಸ್ವರೂಪದಲ್ಲಿ ಅತ್ಯುತ್ತಮವಾಗಿ ಹೊಂದಿಕೊಂಡಿದೆ. ಎದುರಾಳಿಗಳಲ್ಲಿ ಅನಿಶ್ಚಿತತೆ ಅಥವಾ ಆತಂಕದ ಮೊದಲ ಚಿಹ್ನೆ ಕಂಡುಬಂದರೆ, ಅವರನ್ನು ಗೆಲ್ಲುವ ಕೌಶಲ ಮತ್ತು ಬಲವನ್ನು ಹೊಂದಿದ್ದಾರೆ.

ಗುರುವಾರ ಸ್ವಲ್ಪ ಸಮಯದವರೆಗೆ ಭಾರತ ಇಂಥ ಅವಕಾಶ ನೀಡಬಹುದು ಎಂಬಂತೆ ಕಂಡುಬಂದಿತು. ಹೊಸ ಆರಂಭಿಕ ಜೋಡಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸತತ ನಾಲ್ಕನೇ ವೈಫಲ್ಯ ಎದುರಾಯಿತು. ನಿಧಾನಗತಿಯ ಮೇಲ್ಮೈಯಲ್ಲಿ ಅಫ್ಘಾನಿಸ್ತಾನದ ಕೈ ಮೇಲಾಗುತ್ತಿದೆ ಎಂದುಕೊಳ್ಳುತ್ತಿರುವಾಗ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಪ್ರತುತ್ತರ ಬಂದಿತು.

ಸೂರ್ಯ ಪ್ರದರ್ಶನ: ಸೂರ್ಯಕುಮಾರ್ ಅವರು ಟಿ20 ಬ್ಯಾಟರ್ ಆಗಿ ತಮ್ಮದೇ ಆದ ಲಯದಲ್ಲಿದ್ದಾರೆ. ಅವರು ಪಿಚ್‌ನ ಸ್ವರೂಪ ಮತ್ತು ಅಫ್ಘಾನ್ ದಾಳಿಯ ಗುಣಮಟ್ಟವನ್ನು ಸುಳ್ಳು ಮಾಡುವಂಥ ಹೊಡೆತಗಳ ಮೂಲಕ ಅವರ ಬಗ್ಗೆ ಬೌಲರ್‌ಗಳು ಏಕೆ ಭಯಪಡುತ್ತಾರೆ ಎಂಬುದನ್ನು ತೋರಿಸಿಕೊಟ್ಟರು. ಇಂದು ಅವರಿಗೆ ಸರಿಸಮಾನ ಪ್ರದರ್ಶನ ನೀಡಿದ ಇನ್ನೊಬ್ಬರು ಬೌಲರ್ ಜಸ್ಪ್ರೀತ್ ಬುಮ್ರಾ. ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಟಿ20 ಟೂರ್ನಿಯಲ್ಲಿ ಬೃಹತ್ ಪ್ರದರ್ಶನ ನೀಡಿದ್ದಾರೆ. ಒಂದುವೇಳೆ ರೋಹಿತ್ ಶರ್ಮಾ ಈ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆರಿಸಿಕೊಳ್ಳಬೇಕು ಎಂದು ಆಯ್ಕೆ ಬೂಮ್ರಾ ಆಗಿರುತ್ತದೆ. ಸೂರ್ಯಕುಮಾರ್ ಬ್ಯಾಟರ್‌ ಎನ್ನುವುದು ಇದಕ್ಕೆ ಕಾರಣವಲ್ಲ; ಬೂಮ್ರಾ ಸರಿಸಾಟಿ ಯಿಲ್ಲದ ಬೌಲಿಂಗ್ ಗುಂಪಿನ ನಾಯಕ. ಎಲ್ಲ ಮೂರು ಅಂತಾರಾಷ್ಟ್ರೀಯ ರೂಪಾಂತರಗಳಲ್ಲಿ ಮಾದರಿ ಆಟಗಾರ. ಆದರೆ, 20 ಓವರ್ ಮಾದರಿಯಲ್ಲಿ ಅವರ ಕೌಶಲ ಮತ್ತು ನಿಯಂತ್ರಣ ಅವರನ್ನು ಅನಿವಾರ್ಯವಾಗಿಸುತ್ತದೆ.

ಸ್ಕೋರ್ ಬೋರ್ಡ್ ಒತ್ತಡ:‌ ಹಾರ್ದಿಕ್ ಪಾಂಡ್ಯ ಅವರ ಬೆಂಬಲದೊಂದಿಗೆ ಸೂರ್ಯಕುಮಾರ್ ತಮ್ಮ ತಂಡವನ್ನು ಎಂಟು ವಿಕೆಟ್‌ಗೆ 181 ರನ್‌ಗೆ ಕೊಂಡೊಯ್ದರು. ಆನಂತರ ಅಫ್ಘಾನಿಸ್ತಾನಕ್ಕೆ ಸಣ್ಣ ಪವಾಡವೊಂದರ ಅಗತ್ಯ ಬಂದಿತು. ಅಫ್ಘಾನಿಸ್ತಾನವು ಹೆಚ್ಚು ಮೊತ್ತ ಗಳಿಸಿ, ಸ್ಕೋರ್‌ಬೋರ್ಡ್ ಮೂಲಕ ಒತ್ತಡ ಹೇರುವ ಜೊತೆಗೆ ಎದುರಾಳಿಗಳನ್ನು ಸ್ಪಿನ್ನರ್‌ಗಳ ಮೂಲಕ ಹಣಿಯಲು ಪ್ರಯತ್ನಿಸುತ್ತದೆ. ತಂಡದ ನಾಯಕ ಮತ್ತು ಲೆಗ್-ಸ್ಪಿನ್ನರ್ ರಶೀದ್, ವಿಭಿನ್ನ ಸವಾಲು ಎದುರಿಸಬೇಕಾಯಿತು. ಬುಮ್ರಾ ಅವರಿಂದಾಗಿ ಸವಾಲು ದಾಟುವುದು ದುಸ್ತರವಾಯಿತು.

ಬೂಮ್ರಾ ಬಗ್ಗೆ ಎಷ್ಟು ಹೇಳಿದರೂ, ಕಡಿಮೆಯೇ. ಪದಗಳು ಆಟಗಾರರು ಮತ್ತು ಎದುರಾಳಿಗಳ ಮೇಲೆ ಸೂರ್ಯ ಬೀರುವ ಪ್ರಭಾವಕ್ಕೆ ನ್ಯಾಯವನ್ನು ನೀಡುವುದಿಲ್ಲ.

ಉಪಸ್ಥಿತಿಯಿಂದಲೇ ಬ್ಯಾಟರ್‌ಗಳನ್ನು ಕಂಗೆಡಿಸಬಲ್ಲ ಬೂಮ್ರಾ, ನಗುತ್ತಲೇ ವಿನಾಶಕ್ಕೆ ಕಾರಣವಾಗುತ್ತಾರೆ. ಆತ ಒಬ್ಬ ಸಂಪೂರ್ಣ ಬೌಲರ್ ಆಗಿದ್ದು, ದೇಹದ ಮೇಲ್ಭಾಗದ ಬಲ, ಮಣಿಕಟ್ಟಿನ ಮಣಿಯುವಿಕೆ ಮತ್ತು ತೋಳಿನ ವಿಸ್ತರಣೆ ಯನ್ನು ಪ್ರಭಾವಶಾಲಿಯಾಗಿ ಬಳಸುತ್ತಾರೆ. ಸಾಂಪ್ರದಾಯಿಕ ವೇಗದ ಬೌಲರ್‌ಗಳಿಗಿಂತ ಭಿನ್ನವಾಗಿ, ದೇಹದ ಕೆಳ ಭಾಗದಿಂದ ವೇಗವನ್ನು ಸೃಷ್ಟಿಸುತ್ತಾರೆ. ಅವರನ್ನು ಡೆನ್ನಿಸ್ ಲಿಲ್ಲಿ, ಮೈಕೆಲ್ ಹೋಲ್ಡಿಂಗ್ ಮತ್ತು ಮಾಲ್ಕಮ್ ಮಾರ್ಷಲ್‌ ಗೆ ಹೋಲಿಸಬಹುದು. ಇನ್ನುಳಿದವರು ಅಲನ್ ಡೊನಾಲ್ಡ್, ಡೇಲ್ ಸ್ಟೇಯ್ನ್ ಮತ್ತು ಆನ್ರಿಚ್ ನಾರ್ಟ್ಜೆ.

ಗತಿ, ವೈವಿಧ್ಯತೆಯೊಂದಿಗೆ 140 ರಿಂದ 125 ಕಿಮೀ ವೇಗದಲ್ಲಿ ಚೆಂಡು ಬಿಡುಗಡೆ ಮಾಡುತ್ತಾರೆ. ಆದ್ದರಿಂದ ಚೆಂಡಿನ ಉದ್ದವನ್ನು ಕಂಡುಕೊಳ್ಳುವುದು ಕಷ್ಟಕರವಾಗುತ್ತದೆ. ಬೂಮ್ರಾವನ್ನು ಆತ ಲಯವನ್ನು ಕಳೆದುಕೊಂಡಾಗ ಮಾತ್ರ ಹಣಿಯಲು ಸಾಧ್ಯ. ಆದರೆ, ಅದು ಅಪರೂಪ.

ಈ ಟಿ 20 ವಿಶ್ವಕಪ್‌ನಲ್ಲಿ ಬೂಮ್ರಾ ಈಗಾಗಲೇ ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅವರ 4-1-7-3 ರ ಅಂಕಿಅಂಶಕ್ಕೆ ಮೂರನೇ ಪ್ರಶಸ್ತಿ ಸಿಗುವ ಸಾಧ್ಯತೆಯಿತ್ತು. ಆದರೆ, ಪಂದ್ಯಾವಳಿಯ ಪ್ರಮುಖ ಸ್ಕೋರರ್ ರಹಮಾನುಲ್ಲಾ ಗುರ್ಬಾಜ್ ಮತ್ತು ಹಜರತುಲ್ಲಾ ಝಜೈ ಅವರ ವಿಕೆಟ್‌ ಮೂಲಕ ಅಫ್ಘಾನಿಸ್ತಾನವನ್ನು ಅಂಚಿಗೆ ತಳ್ಳಿದರು.

ಆರು ಮತ್ತು 16ನೇ ಓವರ್‌ಗಳ ನಡುವೆ ಬೂಮ್ರಾ ಬೌಲಿಂಗ್ ಮಾಡಲಿಲ್ಲ. ಕೊನೆಯ ಐದರಲ್ಲಿ ಎರಡು ಓವರ್‌ ನೀಡಬಹುದೆಂದು ಭಾವಿಸಿದ್ದರು. ಮೂವರು ಎಡಗೈ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಪರಿಣಾಮಕಾರಿಯಾಗಿ ಚೆಂಡೆಸೆದರು.

ರೋಹಿತ್, ಇತ್ತೀಚಿನ ಹಿನ್ನಡೆ ಹೊರತಾಗಿಯೂ ಐದು ಟಿ20 ಶತಕ ಗಳಿಸಿದ್ದಾರೆ. ಕೊಹ್ಲಿಗೆ ಕೊಹ್ಲಿಯೇ ಸಾಟಿ. ರಿಷಬ್ ಪಂತ್, ಪಾಂಡ್ಯ, ಶಿವಂ ದುಬೆ ಉತ್ತಮ ಬ್ಯಾಟರ್‌ ಗಳಾಗಿದ್ದಾರೆ. ಸ್ಪಿನ್ ಸ್ಲೇಯರ್. ಅಕ್ಸರ್ ಮತ್ತು ಜಡೇಜಾ ಅನಿಯಂತ್ರಿತ ಆಕ್ರಮಣಶೀಲತೆ ತೋರಬಲ್ಲರು.

ಹೊಂದಿಕೊಳ್ಳುವ ಸಾಮರ್ಥ್ಯ: ಸೂರ್ಯಕುಮಾರ್‌ ಅವರಿಗೆ 50 ರನ್‌ ತಲುಪಲು ಕೇವಲ 27 ಎಸೆತ ಬೇಕಾಯಿತು. ಒಂದು ವಾರದ ಹಿಂದೆ ನ್ಯೂಯಾರ್ಕ್‌ನಲ್ಲಿ ಅವರು ಅಮೆರಿಕ ವಿರುದ್ಧ 50 ರನ್‌ ಗಳಿಸಲು 49 ಎಸೆತ ತೆಗೆದುಕೊಂಡಿದ್ದರು.

Read More
Next Story