T20 WC, Super 8| ಭಾರತ vs ಬಾಂಗ್ಲಾದೇಶ ಪಂದ್ಯದ ಮುನ್ನೋಟ
x

T20 WC, Super 8| ಭಾರತ vs ಬಾಂಗ್ಲಾದೇಶ ಪಂದ್ಯದ ಮುನ್ನೋಟ

ಟಿ20 ವಿಶ್ವಕಪ್‌ನ ಸೂಪರ್ ಎಂಟರ ಹಣಾಹಣಿಯಲ್ಲಿ ಅಜೇಯ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಭಾರತ ಪ್ರಶಸ್ತಿಯನ್ನು ಗೆಲ್ಲಬಲ್ಲ ತಂಡ ಎಂಬುದರಲ್ಲಿ ಸಂದೇಹವಿಲ್ಲ.


ನಾರ್ತ್ ಸೌಂಡ್ (ಆಂಟಿಗುವಾ), ಜೂನ್ 21- ಟಿ20 ವಿಶ್ವಕಪ್‌ನ ಸೂಪರ್ ಎಂಟರ ಹಣಾಹಣಿಯಲ್ಲಿ ಅಜೇಯ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸುತ್ತಿದೆ.

ಮುಖಾಮುಖಿ ಪಂದ್ಯಗಳಲ್ಲಿ ಭಾರತದ ದಾಖಲೆ ಉತ್ತಮವಾಗಿದೆ. ಆದರೆ, ಬಾಂಗ್ಲಾದೇಶ ಧೈರ್ಯಶಾಲಿ ತಂಡವಾಗಿರುವುದರಿಂದ, ರೋಹಿತ್ ಶರ್ಮಾ ತಂಡ ಜಾಗರೂಕವಾಗಿರುತ್ತಾರೆ.

ಎರಡು ದಕ್ಷಿಣ ಏಷ್ಯಾದ ನೆರೆಹೊರೆ ರಾಷ್ಟ್ರಗಳು ಈ ಹಿಂದೆ ಕೆಲವು ಕ್ರೀಡಾಂಗಣದ ಹೊರಗಿನ ಮಾತಿನ ಸಮರ ನಡೆಸಿವೆ. ಬಾಂಗ್ಲಾದೇಶ ಕ್ರೀಡೆಯಲ್ಲಿ ಭಾರತದ ಆರ್ಥಿಕ ಸಾಮರ್ಥ್ಯದ ಬಗ್ಗೆ ತನ್ನ ಅನುಮಾನ ವ್ಯಕ್ತಪಡಿಸಿದೆ.

ವಿಶ್ವ ಕಪ್‌ನಲ್ಲಿ ಭಾರತವು ಪ್ರಶಸ್ತಿಯನ್ನು ಗೆಲ್ಲಬಲ್ಲ ತಂಡ ಎಂಬುದರಲ್ಲಿ ಸಂದೇಹವಿಲ್ಲ.

ಭಾರತೀಯರು ತಮ್ಮ ಆರಂಭಿಕ ಸೂಪರ್ ಎಂಟು ಪಂದ್ಯಗಳಲ್ಲಿ ಅಫ್ಘಾನಿಸ್ತಾನದ ವಿರುದ್ಧ ವೃತ್ತಿಪರ ಪ್ರದರ್ಶ ನೀಡಿದರು. ಅವರ ಉಳಿದ ಎರಡು ಪಂದ್ಯಗಳ ನಡುವೆ ದಿನ ಮಾತ್ರ ಬಿಡುವು ಇದ್ದು, ಇದುವರೆಗೆ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡದ ಆಟಗಾರರು ತಮ್ಮ ಸಾಮರ್ಥ್ಯ ಮತ್ತೆ ಗಳಿಸುತ್ತಾರೆ ಎಂದು ಆಶಿಸಲಾಗಿದೆ.

ಆರಂಭಿಕ ಜೋಡಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ, ಇಬ್ಬರೂ ಉತ್ತಮ ಆರಂಭ ಪಡೆದಿದ್ದಾರೆ. ಆದರೆ, ಅದನ್ನು ದೊಡ್ಡ ಸ್ಕೋರ್‌ ಆಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ರನ್‌ ವೇಗವನ್ನು ಹೆಚ್ಚಿಸಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡಿದ್ದಾರೆ. ಆದರಲ್ಲಿ ಯಶಸ್ವಿಯಾಗಿಲ್ಲ.

ಮತ್ತೊಬ್ಬಒತ್ತಡದಲ್ಲಿರುವ ಬ್ಯಾಟರ್, ಎಡಗೈ ಆಟಗಾರ ಶಿವಂ ದುಬೆ. ಅವರು ಮಧ್ಯ ಮತ್ತು ಅಂತಿಮ ಓವರ್‌ಗಳಲ್ಲಿ ಸಿಕ್ಸರ್‌ ಹೊಡೆಯಲು ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾದವರು. ಆದರೆ, ಫಾರ್ಮ್ ಅವರನ್ನು ತೊರೆದಿದೆ.

ಗ್ರೂಪ್ ಲೀಗ್ ಪಂದ್ಯದಲ್ಲಿ ದುಬೆ ಯುಎಸ್‌ಎ ವಿರುದ್ಧ ಅಜೇಯ 31 ರನ್ ಗಳಿಸಿದರು. ಆದರೆ, ಸೂರ್ಯಕುಮಾರ್ ಯಾದವ್ ಅವರ ಆಟ ಅಂತಿಮವಾಗಿ ಯಶಸ್ಸಿಗೆ ಕಾರಣವಾಯಿತು.

ಮತ್ತೊಂದು ವೈಫಲ್ಯದಿಂದ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಕಳೆದುಕೊಳ್ಳಬಹುದು.

ಅಫ್ಘಾನಿಸ್ತಾನದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಟ ಅತಿ ದೊಡ್ಡ ಸಕಾರಾತ್ಮಕ ಅಮಶವಾಗಿತ್ತು. ಭರ್ಜರಿ ಹೊಡೆತಕ್ಕೆ ಹೆಸರುವಾಸಿಯಾಗಿರುವ ಪಾಂಡ್ಯ, ಗುರುವಾರ ಅದನ್ನು ಪ್ರದರ್ಶಿಸಿದರು.

ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಬೌಲಿಂಗ್‌ ಆರಂಭಿಸುವ ನಿರೀಕ್ಷೆಯಿದ್ದು, ಅದೇ ಸಂಯೋಜನೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಕೆರಿಬಿಯನ್‌ನಲ್ಲಿನ ವಿಕೆಟ್‌ಗಳು ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವಾಗಿವೆ. ಭಾರತ ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೂರು ಪಂದ್ಯ ಆಡಿದೆ.

ಮೊಹಮ್ಮದ್ ಸಿರಾಜ್ ಬದಲು ಕುಲದೀಪ್ ತನ್ನ ಸ್ಥಾನವನ್ನು ಉಳಿಸಿಕೊಳ್ಳಬಹುದು.

ʻಮೂವರು ಎಡಗೈ ಸ್ಪಿನ್ನರ್‌ಗಳು ಆಡುವುದರಿಂದ ಪ್ರಯೋಜನವಿದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ಇಬ್ಬರು ಫಿಂಗರ್ ಸ್ಪಿನ್ನರ್‌ ಮತ್ತು ಒಬ್ಬರು ಮಣಿಕಟ್ಟಿನ ಸ್ಪಿನ್ನರ್,ʼ ಎಂದು ಅಫ್ಘಾನಿಸ್ತಾನದ ಪಂದ್ಯದ ನಂತರ ಅಕ್ಷರ್ ಪಟೇಲ್ ಹೇಳಿದರು.

ʻನಾವು ಮೂವರ ಕಾಂಬಿನೇಷನ್ ಚೆನ್ನಾಗಿದೆ. ನಮ್ಮಲ್ಲಿ ಉತ್ತಮ ತಂಡವಿದೆ, ನಾವು ಚೆನ್ನಾಗಿ ಸಂವಹನ ನಡೆಸುತ್ತೇವೆ. ಯಾರು ಮೊದಲು ಬೌಲಿಂಗ್ ಮಾಡಲು ಬಂದರೂ, ನಾವು ಏನು ಮಾಡುತ್ತಿದ್ದೇವೆ ಮತ್ತು ಏನು ಮಾಡುವುದಿಲ್ಲ ಎಂಬುದನ್ನು ಸಂವಹನ ಮಾಡುತ್ತೇವೆ. ಬೌಲಿಂಗ್ ಮಾಡುವಾಗ ಅದು ಬಹಳ ಮುಖ್ಯ,ʼ ಎಂದು ಹೇಳಿದರು.

ಕೆರಿಬಿಯನ್‌ನಲ್ಲಿ ಭಾರತದ ಏಕೈಕ ಗುರಿ ಟ್ರೋಫಿ ಗೆಲ್ಲುವುದು. ಬಾಂಗ್ಲಾದೇಶದ ವಿರುದ್ಧ ಗೆಲುವು ಮತ್ತೊಂದು ಹೆಜ್ಜೆಯಾಗಿದೆ. ಜೂನ್ 24 ರಂದು ಆಸ್ಟ್ರೇಲಿಯ ವಿರುದ್ಧ ಪಂದ್ಯವಿದೆ.

ಬಾಂಗ್ಲಾದೇಶ ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿದೆ. ಆಸ್ಟ್ರೇಲಿಯ ವಿರುದ್ಧ ಸೋತ ನಂತರ ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದೆ.

ಆರಂಭಿಕ ಆಟಗಾರರಾದ ಲಿಟ್ಟನ್ ದಾಸ್ ಮತ್ತು ತಾಂಝಿದ್ ಖಾನ್ ಅವರ ಕಳಪೆ ಪ್ರದರ್ಶನದಿಂದ ತಂಡದ ಸಂಕಷ್ಟ ಹೆಚ್ಚಿದೆ.

ʻಅಗ್ರ ಕ್ರಮಾಂಕ ರನ್ ಗಳಿಸುವುದು ಮುಖ್ಯ. ಬೌಲರ್‌ಗಳು ತಮ್ಮ ಫಾರ್ಮ್ ಮುಂದುವರಿಸುತ್ತಾರೆ. ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತೇವೆ,ʼ ಎಂದು ಬಾಂಗ್ಲಾದೇಶದ ನಾಯಕ ನಜ್ಮುಲ್ ಶಾಂಟೊ ಶುಕ್ರವಾರ ಹೇಳಿದ್ದರು. ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಶಾಂಟೊ (41) ಮತ್ತು ಟೌಹಿದ್ ಹೃದಯೊಯ್ (40) ಉತ್ತಮ ಪ್ರದರ್ಶನ ನೀಡಿದರು. ಆದರೆ ಉಳಿದವರು ತಕ್ಕಂತೆ ಆಡಲಿಲ್ಲ.

ಪ್ರತಿ ಓವರ್‌ಗೆ 3.46 ರನ್‌ ನೀಡಿ, ಎಂಟು ವಿಕೆಟ್‌ ಕಬಳಿಸಿರುವ ಬೂಮ್ರಾ ಅವರನ್ನು ನಿಭಾಯಿಸಲು ಮಾರ್ಗವನ್ನು ಕಂಡುಕೊಳ್ಳಬೇಕಿದೆ.

ಮುಸ್ತಫಿಜುರ್ ರೆಹಮಾನ್ ನೇತೃತ್ವದ ವೇಗಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಲೆಗ್ ಸ್ಪಿನ್ನರ್ ರಿಶಾದ್ ಹೊಸೈನ್ ಹೆಚ್ಚಿನ ಬೆಂಬಲ ನೀಡಬೇಕಿದೆ.

ತಂಡಗಳು:

ಬಾಂಗ್ಲಾದೇಶ: ತಂಝಿದ್ ಹಸನ್, ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಶಕೀಬ್ ಅಲ್ ಹಸನ್, ತೌಹಿದ್ ಹೃದಯ್, ಮಹ್ಮುದುಲ್ಲಾ, ಮಹೇದಿ ಹಸನ್, ರಿಶಾದ್ ಹೊಸೈನ್, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್, ಮುಸ್ತಫಿಜುರ್ ರೆಹಮಾನ್, ತನ್ವೀರ್‌ ಇಸ್ಲಾಂ, ಶರೀಫುಲ್ ಇಸ್ಲಾಂ, ತಫುಲ್ ಅಲಿ, ‌ಸೌಮ್ಯ ಸರ್ಕಾರ್.

ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಪಂದ್ಯ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.

Read More
Next Story