
ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ಕೇಜ್ರಿವಾಲ್ ಮನೆಗೆ ದೆಹಲಿ ಪೊಲೀಸರು, ವಿಧಿವಿಜ್ಞಾನ ತಜ್ಞರ ಭೇಟಿ
ನವದೆಹಲಿ, ಮೇ 17: ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ತಂಡವು ವಿಧಿವಿಜ್ಞಾನ ತಜ್ಞರೊಂದಿಗೆ ಶುಕ್ರವಾರ ಸಂಜೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸವನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಡಿಸಿಪಿ (ಉತ್ತರ) ಅಂಜಿತಾ ಚೆಪ್ಯಾಲ ನೇತೃತ್ವದ ತಂಡದಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಇದ್ದಾರೆ. ಅವರ ಜೊತೆಗೆ ಐವರು ವಿಧಿವಿಜ್ಞಾನ ತಜ್ಞರು ಕೂಡ ಇದ್ದಾರೆ. ಸಂಜೆ 4.45 ರ ಸುಮಾರಿಗೆ ಅಧಿಕಾರಿಗಳು ನಿವಾಸ ತಲುಪಿದರು, ಸೋಮವಾರ ಬೆಳಗ್ಗೆ ಮಲಿವಾಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದ್ದು, ಸಿಎಂ ಮನೆಯಿಂದ ಸಾಕ್ಷ್ಯ ಮತ್ತು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಬಹುದು ಎಂದು ಮೂಲಗಳು ತಿಳಿಸಿವೆ.
Next Story