ಸಶಸ್ತ್ರ ಪಡೆ ವೈದ್ಯಕೀಯ ಸೇವೆಗಳ ಮೊದಲ ಮಹಿಳಾ ಡಿಜಿ
x

ಸಶಸ್ತ್ರ ಪಡೆ ವೈದ್ಯಕೀಯ ಸೇವೆಗಳ ಮೊದಲ ಮಹಿಳಾ ಡಿಜಿ


ನವದೆಹಲಿ: ವೈಸ್ ಅಡ್ಮಿರಲ್ ಆರ್ತಿ ಸರಿನ್ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳಾ ಅಧಿಕಾರಿ ಎಂದು ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಒಟ್ಟು ವೈದ್ಯಕೀಯ ನೀತಿ ವಿಷಯಗಳಿಗೆ ಡಿಜಿಎಎಫ್‌ಎಂಎಸ್‌ ಜವಾಬ್ದಾರವಾಗಿರುತ್ತದೆ.

ಸರಿನ್ ಅವರು ಪುಣೆ ಎಎಫ್‌ಎಂಸಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಡಿಸೆಂಬರ್ 1985 ರಲ್ಲಿ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಿಗೆ ನಿಯೋಜಿಸಲ್ಪಟ್ಟರು. ರೇಡಿಯೊ ಡಯಾಗ್ನೋಸಿಸ್‌ನಲ್ಲಿ ಎಂಡಿ, ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯಿಂದ ವಿಕಿರಣ ಆಂಕಾಲಜಿಯಲ್ಲಿ ಡಿಎನ್‌ಬಿ ಹಾಗೂ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಿಂದ ಗಾಮಾ ನೈಫ್ ಸರ್ಜರಿ ತರಬೇತಿ ಪಡೆದಿದ್ದಾರೆ.

ʻ38 ವರ್ಷಗಳ ವೃತ್ತಿಜೀವನದಲ್ಲಿ ಸಶಸ್ತ್ರ ಪಡೆಗಳ ಎಲ್ಲ ಮೂರು ಶಾಖೆಗಳಲ್ಲಿ ಸೇವೆ ಸಲ್ಲಿಸಿರುವ ಅವರಿಗೆ 2024 ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು 2021 ರಲ್ಲಿ ವಿಶಿಷ್ಟ ಸೇವಾ ಪದಕ ನೀಡಲಾಗಿದೆ. ವಿಶೇಷ ಸೇವೆಗಾಗಿ ಸೇನೆ ಸಿಬ್ಬಂದಿಯ ಚೀಫ್ ಕಮೆಂಡೇಶನ್ (2017), ಚೀಫ್ ಆಫ್ ನೇವಲ್ ಸ್ಟಾಫ್ ಕಮೆಂಡೇಶನ್ (2001) ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಪ್ರಶಂಸೆ (2013) ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Read More
Next Story