ನೀಟ್‌-ಪಿಜಿ 2022 ವಿರುದ್ಧ ಮನವಿ: ತಿರಸ್ಕರಿಸಿದ ಸುಪ್ರೀಂ ಕೋರ್ಟ್
x

ನೀಟ್‌-ಪಿಜಿ 2022 ವಿರುದ್ಧ ಮನವಿ: ತಿರಸ್ಕರಿಸಿದ ಸುಪ್ರೀಂ ಕೋರ್ಟ್


ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ 2022 ರಲ್ಲಿ ನಡೆಸಿದ ನೀ‌ಟ್-ಯುಜಿ ಪರೀಕ್ಷೆಯಲ್ಲಿ ಲೋಪಗಳಿವೆ ಎಂದು ಆರೋಪಿಸಿ ಮತ್ತು ಉತ್ತರ ಕೀ-ಉತ್ತರ ಪತ್ರಿಕೆಗಳನ್ನು ಬಹಿರಂಗಪಡಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಜೂನ್ 11) ತಿರಸ್ಕರಿಸಿದೆ.

2022 ರಲ್ಲಿ ಪ್ರೀತೀಶ್ ಕುಮಾರ್ ಮತ್ತು ಇತರರು ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ರಜಾಕಾಲದ ಪೀಠ, ʻಅವಧಿ ಮೀರಿದ ಈ ಅರ್ಜಿಗಳು ನಿಷ್ಪ್ರಯೋಜಕ,ʼ ಎಂದು ಹೇಳಿದರು. ಆರು ಅರ್ಜಿದಾರರ ಪೈಕಿ ಇಬ್ಬರು ಈ ವರ್ಷ ಜೂನ್ 23 ರಂದು ನಡೆಯಲಿರುವ ನೀಟ್-ಪಿಜಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಕುಮಾರ್ ಮತ್ತು ಇತರರ ಪರ ವಕೀಲರು ಹೇಳಿದರು.

ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಸಮಾನ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ನಂತರ ವಿವಿಧ ಪಿಜಿ ಕೋರ್ಸ್‌ಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪೋಸ್ಟ್ ಗ್ರಾಜುಯೇಟ್ (ಎನ್‌ಇಇಟಿ-ಪಿಜಿ) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ನಡೆಸುತ್ತದೆ.

ಉತ್ತರಪತ್ರಿಕೆಗಳನ್ನು ಕೊಡುವುದಿಲ್ಲ: ʻರಾಷ್ಟ್ರೀಯ ಪರೀಕ್ಷಾ ಮಂಡಳಿಯು ಉತ್ತರದ ಕೀಗಳು, ಉತ್ತರ ಪತ್ರಿಕೆಗಳು, ಪ್ರಶ್ನೆಪತ್ರಿಕೆಗಳನ್ನು ನೋಡಲು ಅನುಮತಿ ಕೊಡುತ್ತಿಲ್ಲ,ʼ ಎಂದು ವಕೀಲರು ಹೇಳಿದರು. ಮನವಿಯನ್ನು ʻಅನಗತ್ಯವಾಗಿʼ ಬಾಕಿ ಇರಿಸಲು ಸಾಧ್ಯವಿಲ್ಲ ಎಂದು ಹೇಳಿದ ಪೀಠ ಮನವಿಯನ್ನು ತಿರಸ್ಕರಿಸಿತು.ತಮ್ಮ ನೀಟ್-ಪಿಜಿ ಅಂಕಗಳಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿ ಮರು ಮೌಲ್ಯಮಾಪನಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ, ಪ್ರೀತೀಶ್ ಕುಮಾರ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.

ನೀಟ್-ಯುಜಿ ಪರೀಕ್ಷೆ: ‌ನೀಟ್‌-ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ, ʻಪರೀಕ್ಷೆಯ ಪಾವಿತ್ರ್ಯದ ಮೇಲೆ ಪರಿಣಾಮ ಬೀರಿದೆ. ಆದ್ದರಿಂದ ನಮಗೆ ಉತ್ತರಗಳು ಬೇಕಿದೆ,ʼ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನೀಟ್-ಯುಜಿ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಜೊತೆಗೆ, ಬಿಹಾರ ಸರ್ಕಾರಕ್ಕೂ ಪೀಠ ನೋಟಿಸ್ ಜಾರಿ ಮಾಡಿದೆ. ರಾಜ್ಯದಲ್ಲಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

Read More
Next Story