ಕೇಜ್ರಿವಾಲ್‌ಗೆ ಜಾಮೀನು:  ವಿನಾಯಿತಿ ನೀಡಿಲ್ಲ-ಸುಪ್ರೀಂ ಕೋರ್ಟ್
x

ಕೇಜ್ರಿವಾಲ್‌ಗೆ ಜಾಮೀನು: ವಿನಾಯಿತಿ ನೀಡಿಲ್ಲ-ಸುಪ್ರೀಂ ಕೋರ್ಟ್


ʻದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮಧ್ಯಂತರ ಜಾಮೀನು ನೀಡುವಲ್ಲಿ ಯಾವು ದೇ ವಿನಾಯಿತಿ ನೀಡಿಲ್ಲʼ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಆಮ್ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಸಂಚಾಲಕರಿಗೆ ನೀಡಿದ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಜ್ರಿವಾಲ್ ಅವರ ವಕೀಲರ ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ʻನಾವು ಯಾರಿಗೂ ಯಾವುದೇ ವಿನಾಯಿತಿ ನೀಡಿಲ್ಲ. ಯಾವುದೇ ತೀರ್ಪಿನ ವಿಶ್ಲೇಷಣೆ ಸ್ವಾಗತಾರ್ಹʼ ಎಂದು ಹೇಳಿದೆ.

ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಚುನಾವಣೆ ಸಭೆಗಳಲ್ಲಿ ಕೇಜ್ರಿವಾಲ್ ಮಾಡಿದ ಭಾಷಣಗಳಿಗೆ ಆಕ್ಷೇಪಿಸಿದರು.ʻಜನರು ಎಎಪಿಗೆ ಮತ ಹಾಕಿದರೆ ತಾವು ಜೂನ್ 2 ರಂದು ಮತ್ತೆ ಜೈಲಿಗೆ ಹೋಗಬೇಕಿಲ್ಲ,ʼ ಎಂದು ಕೇಜ್ರಿವಾಲ್‌ ಹೇಳಿದ್ದರು.

ʻಇದು ಅವರ ಊಹೆ. ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲʼ ಎಂದು ಪೀಠ ಹೇಳಿತು.

ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಸಿಂಘ್ವಿ, ಕೇಂದ್ರದ ಹಿರಿಯ ಸಚಿವರೊಬ್ಬರು ನೀಡಿದ ಹೇಳಿಕೆ ಕುರಿತು ಗಮನ ಸೆಳೆದರು.

ಸುಪ್ರೀಂ ಕೋರ್ಟ್‌ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಸಲ್ಲಿಸಿದ ಮುಖ್ಯ ಮನವಿಯ ವಿಚಾರಣೆ ನಡೆಸುತ್ತಿದೆ. ನ್ಯಾಯಾಲಯ ಮೇ 10 ರಂದು ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದು,ಜೂನ್ 2 ರಂದು ಶರಣಾಗುವಂತೆ ಸೂಚಿಸಿದೆ.

ದೆಹಲಿ ಮುಖ್ಯಮಂತ್ರಿಯನ್ನು ಮಾರ್ಚ್ 21 ರಂದು ಬಂಧಿಸಲಾಯಿತು.

Read More
Next Story