ರಾಹುಲ್ ಪೌರತ್ವ: ದೆಹಲಿ ಹೈಕೋರ್ಟ್‌ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ
x

ರಾಹುಲ್ ಪೌರತ್ವ: ದೆಹಲಿ ಹೈಕೋರ್ಟ್‌ ಮೊರೆ ಹೋದ ಸುಬ್ರಮಣಿಯನ್ ಸ್ವಾಮಿ

ರಾಹುಲ್‌ ಗಾಂಧಿ ಅವರು ಯುಕೆ ಪೌರತ್ವ ಹೊಂದಿದ್ದು,ಇದು ಸಂವಿಧಾನದ 9 ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯ್ದೆ 1955ನ್ನು ಉಲ್ಲಂಘಿಸುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ‌ಅರ್ಜಿ ಮುಂದಿನ ವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.


ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಪೌರತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಹುಲ್ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮುಂದಿನ ವಾರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.

2003 ರಲ್ಲಿ ಇಂಗ್ಲೆಂಡಿನಲ್ಲಿ ನೋಂದಾಯಿಸಿದ ಬ್ಯಾಕ್‌ಆಪ್ಸ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಕಾರ್ಯದರ್ಶಿಗಳಲ್ಲಿ ರಾಹುಲ್ ಒಬ್ಬರು ಎಂದು ಸ್ವಾಮಿ ಅವರು 2019 ರಲ್ಲಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಕಂಪನಿಯ ವಾರ್ಷಿಕ ರಿಟರ್ನ್ಸ್‌ನ್ನು ಅಕ್ಟೋಬರ್ 2005 ರಲ್ಲಿ ಸಲ್ಲಿಸ ಲಾಗಿದೆ. ಅಕ್ಟೋಬರ್ 2006 ರಲ್ಲಿ ರಾಹುಲ್ ತನ್ನ ರಾಷ್ಟ್ರೀಯತೆ ಬ್ರಿಟಿಷರು ಎಂದು ಘೋಷಿಸಿದರು.

ಫೆಬ್ರವರಿ 17, 2009 ರಂದು ಸಂಸ್ಥೆಯ ಅರ್ಜಿಯಲ್ಲಿ ಕಾಂಗ್ರೆಸ್ ಸಂಸದರ ರಾಷ್ಟ್ರೀಯತೆಯು ಬ್ರಿಟಿಷ್ ಎಂದು ನೀಡಲಾಗಿದೆ. ಇಂಗ್ಲೆಂಡ್‌ ಪೌರತ್ವ ಹೊಂದಿರುವಿಕೆಯು ಸಂವಿಧಾನದ 9 ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯ್ದೆ 1955 ಅನ್ನು ಉಲ್ಲಂಘಿಸುತ್ತದೆ ಎಂದು ಸ್ವಾಮಿ ಹೇಳಿದ್ದಾರೆ.

ಎಂಎಚ್‌ಎ 2019 ರ ಏಪ್ರಿಲ್ 29 ರಂದು ರಾಹುಲ್ ಅವರಿಗೆ ಪೌರತ್ವ ಕುರಿತು ಹದಿನೈದು ದಿನಗಳೊಳಗೆ ತಿಳಿಸುವಂತೆ ಪತ್ರ ಬರೆದಿದೆ. ಈ ಬಗ್ಗೆ ಎಂಎಚ್‌ಎ ಯಾವ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.

ಐದು ಅವಧಿಗೆ ಸಂಸದರಾಗಿದ್ದ ರಾಹುಲ್ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 99 ಸ್ಥಾನ ಗಳಿಸಿರುವ ಕಾಂಗ್ರೆಸ್,10 ವರ್ಷಗಳ ನಂತರ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆದುಕೊಂಡಿದೆ.

Read More
Next Story