ವಾರಾಣಸಿ ಕಾಲೇಜು ಆವರಣದಿಂದ ಮಸೀದಿ ತೆರವುಗೊಳಿಸಲು ವಿದ್ಯಾರ್ಥಿಗಳ ಆಗ್ರಹ
ಮಾಜಿ ವಿದ್ಯಾರ್ಥಿ ಸಂಘದ ಮುಖಂಡ ವಿವೇಕಾನಂದ ಸಿಂಗ್ ಮಾತನಾಡಿ, ಸಮಾಧಿಯ ಭೂಮಿ ವಕ್ಫ್ ಮಂಡಳಿಗೆ ಸೇರಿಲ್ಲ. ಅದನ್ನು ಕ್ಯಾಂಪಸ್ನಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ವಾರಣಾಸಿ: ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನ ಆವರಣದಲ್ಲಿರುವ ಮಸೀದಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 500 ವಿದ್ಯಾರ್ಥಿಗಳು ಕೇಸರಿ ಧ್ವಜಗಳನ್ನು ಹಿಡಿದು 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗುತ್ತಾ ಶುಕ್ರವಾರ ಕಾಲೇಜು ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಅದಕ್ಕಿಂತ ಮೊದಲೇ ಹಾಜರಿದ್ದ ದೊಡ್ಡ ಪೊಲೀಸ್ ಪಡೆ ಅವರನ್ನು ಕಾಲೇಜಿಗೆ ಪ್ರವೇಶಿಸದಂತೆ ತಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ಮಸೀದಿಯಲ್ಲಿ 'ನಮಾಜ್' ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಒಂದು ವಿಭಾಗವು ಹನುಮಾನ್ ಚಾಲೀಸಾ ಪಠಿಸಿತ್ತು. ಕಾಲೇಜಿನಲ್ಲಿ ಉದ್ವಿಗ್ನತೆ ಉಂಟಾದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಮಾಜಿ ವಿದ್ಯಾರ್ಥಿ ಸಂಘದ ಮುಖಂಡ ವಿವೇಕಾನಂದ ಸಿಂಗ್ ಮಾತನಾಡಿ, ಸಮಾಧಿಯ ಭೂಮಿ ವಕ್ಫ್ ಮಂಡಳಿಗೆ ಸೇರಿಲ್ಲ. ಅದನ್ನು ಕ್ಯಾಂಪಸ್ನಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
"ಕಾಲೇಜಿನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಕ್ಯಾಂಪಸ್ನಿಂದ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ಪೊಲೀಸರು ನಮಗೆ ಕಾಲೇಜು ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸಮಾಧಿಯಲ್ಲಿ 'ನಮಾಜ್' ಮಾಡಲು ಸಾಧ್ಯವಾದರೆ, ವಿದ್ಯಾರ್ಥಿಗಳಿಗೆ ಅಲ್ಲಿ ಹನುಮಾನ್ ಚಾಲೀಸಾ ಪಠಿಸಲು ಅವಕಾಶ ನೀಡಬೇಕು" ಎಂದು ಸಿಂಗ್ ಹೇಳಿದರು.
ಸಹಾಯಕ ಪೊಲೀಸ್ ಆಯುಕ್ತ (ಕಂಟೋನ್ಮೆಂಟ್) ವಿದುಶ್ ಸಕ್ಸೇನಾ ಮಾತನಾಡಿ, "ಕಾಲೇಜು ಗೇಟ್ನಲ್ಲಿ ಸಾಕಷ್ಟು ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳ ಗುಂಪು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಂದರು. ಅವರಲ್ಲಿ ಕೆಲವರು ಸ್ವಲ್ಪ ಆಕ್ರಮಣಕಾರಿಯಾಗಿದ್ದರು. ಪೊಲೀಸರು ಅವರನ್ನು ಶಾಂತಗೊಳಿಸಿದರು. ಕಾಲೇಜಿನಲ್ಲಿ ಉದ್ವಿಗ್ನತೆಯ ಮಧ್ಯೆ ಪೊಲೀಸರು ಗುರುವಾರ ಕ್ಯಾಂಪಸ್ಗೆ ಹೊರಗಿನವರ ಪ್ರವೇಶ ನಿರ್ಬಂಧಿಸಿದರು. ಗುರುತಿನ ಚೀಟಿಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಯಿತು ಎಂದು ಹೇಳಿದರು.
ಈ ಹಿಂದೆ, ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಕಾಲೇಜು ಕ್ಯಾಂಪಸ್ನಲ್ಲಿರುವ ಮಸೀದಿ ಮತ್ತು ಅದರ ಸುತ್ತಮುತ್ತಲಿನ ಭೂಮಿಯನ್ನು ವಕ್ಫ್ ಆಸ್ತಿ ಎಂದು ಹೇಳಿಕೊಂಡಿತ್ತು
2018ರಲ್ಲಿ ಉದಯ್ ಪ್ರತಾಪ್ ಕಾಲೇಜಿಗೆ ನೋಟಿಸ್ ಕಳುಹಿಸಲಾಗಿದ್ದು, ಅದರ ಕ್ಯಾಂಪಸ್ನಲ್ಲಿರುವ ಮಸೀದಿ ಮತ್ತು ಕಾಲೇಜು ಭೂಮಿಯನ್ನು ಟೋಂಕ್ ನವಾಬ್ ವಕ್ಫ್ ಮಂಡಳಿಗೆ ದಾನ ಮಾಡಿದ್ದಾರೆ ಮತ್ತು ಆದ್ದರಿಂದ ಕಾಲೇಜು ಕ್ಯಾಂಪಸ್ ವಕ್ಫ್ ಆಸ್ತಿಯಾಗಿದೆ ಎಂದು ಪ್ರಾಂಶುಪಾಲ ಡಿ.ಕೆ.ಸಿಂಗ್ ಈ ಹಿಂದೆ ತಿಳಿಸಿದ್ದರು.