
ಪತಿಯ ಹೆಸರಿಗೆ ಕಳಂಕ ತರುವುದನ್ನು ನಿಲ್ಲಿಸಿ,: ಎ.ಆರ್.ರೆಹಮಾನ್ ಪತ್ನಿ ಸಾಯಿರ ಬಾನು
ಎ.ಆರ್.ರೆಹಮಾನ್ ಅವರ ಹೆಸರಿಗೆ ಕಳಂಕ ತರುವುದನ್ನು ನಿಲ್ಲಿಸುವಂತೆ ಸೈರಾ ಬಾನು ಯೂಟ್ಯೂಬರ್‌ಗಳು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ರೆಹಮಾನ್ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ.
ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಕೆಲವು ದಿನಗಳ ಹಿಂದೆ ತಮ್ಮ ವೈವಾಹಿಕ ಜೀವನದ ಏರುಪೇರುಗಳು ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಾನೂನು ನೋಟಿಸ್ ನೀಡಿದ್ದರು. ಇದೀಗ ಅವರ ಪತ್ನಿ ಸಾಯಿರಾ ಬಾನು ಅವರು ಪ್ರಕಟಣೆ ಹೊರಡಿಸಿ, ತಮ್ಮ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಹರಡದಂತೆ ಯೂಟ್ಯೂಬರ್‌ಗಳು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಅವರ ಹೆಸರಿಗೆ ಕಳಂಕ ತರುವುದನ್ನು ನಿಲ್ಲಿಸಿ. ಅವರು ಅಮೂಲ್ಯ ರತ್ನ ಎಂದು ಅವರು ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈನಲ್ಲಿದ್ದೇನೆ ಎಂದು ಹೇಳಿಕೊಂಡಿರುವ ಸಾಯಿರಾ ಬಾನು, ಅನಗತ್ಯ ಹೇಳದಂತೆ ಮಾಧ್ಯಮಗಳಿಗೆ ಒತ್ತಾಯಿಸಿದರು. "ಅವರು ಒಬ್ಬ ಅಮೂಲ್ಯ ರತ್ನ. ವಿಶ್ವದ ಅತ್ಯುತ್ತಮ ವ್ಯಕ್ತಿ. ಆರೋಗ್ಯ ಸಮಸ್ಯೆಗಳಿಂದಾಗಿ ನಾನು ಚೆನ್ನೈ ತೊರೆಯಬೇಕಾಯಿತು, ಸಾಯಿರಾ ಎಲ್ಲಿದ್ದಾತೆ ಎಂದು ನೀವು ಆಶ್ಚರ್ಯ ಪಡುತ್ತೀರಿ ಎಂದು ನನಗೆ ತಿಳಿದಿದೆ. ನಾನು ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
ಆರೋಗ್ಯ ಕಾರಣಕ್ಕೆ ರೆಹಮಾನ್ ಅವರಿಂದ ವಿಚ್ಛೇದ ತೆಗೆದುಕೊಳ್ಳಲು ಬಯಸಿದ್ದೆ ಎಂದು ಅವರು ಸ್ಪಷ್ಟಪಡಿಸಿದರು. ರೆಹಮಾನ್ ಅವರ ಜೀವನ ಶೈಲಿಯೊಂದಿಗೆ ಹೊಂದಿಕೆಯಾಗುತ್ತಿರಲಿಲ್ಲ. ಹೀಗಾಗಿ ಅವರಿಗೆ ಮತ್ತು ಮಕ್ಕಳಿಗೆ ತೊಂದರೆ ನೀಡಲು ನಾನು ಬಯಸಲಿಲ್ಲ ಎಂದು ಅವರು ಪ್ರಕಟಣೆಯಲ್ಲಿ ಬರೆದಿದ್ದಾರೆ.
ನವೆಂಬರ್ 19 ರಂದು ತನ್ನ ವಕೀಲರ ಮೂಲಕ ಹೇಳಿಕೆ ನೀಡಿದ್ದ ಸಾಯಿರಾ ಬಾನು, ತನ್ನ ಪತಿಯಿಂದ ಬೇರ್ಪಡುವ "ಕಠಿಣ ನಿರ್ಧಾರ" ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದರು, ಈಗ ತನ್ನ ಹೇಳಿಕೆಯಲ್ಲಿ ರೆಹಮಾನ್ "ಅದ್ಭುತ ಮನುಷ್ಯ" ಎಂದು ಹೇಳಿದ್ದಾರೆ.
ಅವರನ್ನು ಹೇಗಿದ್ದಾರೊ ಹಾಗೆಯೇ ಬಿಡಬೇಕು ಎಂದು ಸಾಯಿರಾ ಮನವಿ ಮಾಡಿದ್ದಾರೆ. "ಅವರಿಗೆ ಬೇರೆ ಯಾವುದೇ ಸಂಬಂಧವಿಲ್ಲ.. ನಾನು ಅವರನ್ನು ನಂಬುತ್ತೇನೆ, ನಾನು ಅವನನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಅವನು ನನ್ನನ್ನು ಅಷ್ಟೇ ಪ್ರೀತಿಸುತ್ತಾರೆ" ಎಂದು ಅವರು ಹೇಳಿದರು.
ಅವರ ವಿರುದ್ಧದ ಸುಳ್ಳು ಆರೋಪಗಳನ್ನು ನಿಲ್ಲಿಸಬೇಕು. ಅವರ ಹೆಸರಿಗೆ ಕಳಂಕ ತರುವುದನ್ನು ನಿಲ್ಲಿಸಿ, ನೀವು ಹೇಳುತ್ತಿರುವುದು ಎಲ್ಲ ಸುಳ್ಳು. ಈ ಕ್ಷಣದಲ್ಲಿ ನಮ್ಮನ್ನು ಖಾಸಗಿಯಾಗಿರಲು ಬಿಡಬೇಕು ಎಂದು ನಿಮ್ಮೆಲ್ಲರಿಗೂ ನನ್ನ ಪ್ರಾಮಾಣಿಕ ಪ್ರಾರ್ಥನೆಗಳು. ನಾವು ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಚಿಕಿತ್ಸೆಯ ನಂತರ ನಾನು ಚೆನ್ನೈಗೆ ಮರಳುತ್ತೇನೆ" ಎಂದು ಬಾನು ಬರೆದಿದ್ದಾರೆ.
ಭಾವನಾತ್ಮಕ ಒತ್ತಡ
ದಂಪತಿ ವಿಚ್ಛೇಧನ ಘೋಷಿಸಿದ ಬಳಿಕ ರೆಹಮಾನ್ ಅವರ ಅವರ ಬಾಸಿಸ್ಟ್ ಮೋಹಿನಿ ಡೇ ಅವರು ತಮ್ಮ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದರು. ಇದು ತೀವ್ರ ಊಹಾಪೋಹಗಳಿಗೆ ಕಾರಣವಾಯಿತು.