Tirupati laddu row| ಹೇಳಿಕೆಗೆ ಬದ್ಧ: ಟಿಡಿಪಿ
ಸೆಪ್ಟೆಂಬರ್ 25 ರಂದು ಎಫ್‌ಐಆರ್ ದಾಖಲು, ಸೆಪ್ಟೆಂಬರ್ 26 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರೂ, ಮುಖ್ಯಮಂತ್ರಿ ಸೆಪ್ಟೆಂಬರ್ 18 ರಂದು ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ತಿರುಪತಿ ದೇವಸ್ಥಾನದಲ್ಲಿ ನೀಡುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪ ಮಾಡಿರುವ ಸಮಯವನ್ನು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 30) ಪ್ರಶ್ನಿಸಿದ ಬಳಿಕ, ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಹೇಳಿಕೆಗೆ ಬದ್ಧ ಎಂದು ಪ್ರತಿಕ್ರಿಯಿಸಿದೆ.
ʻಕನಿಷ್ಠ ಪಕ್ಷ ದೇವರನ್ನಾದರೂ ರಾಜಕೀಯದಿಂದ ದೂರವಿಡಬೇಕುʼ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಹೇಳಿದ್ದು, ʻಕಲಬೆರಕೆ ಸಾಬೀತುಪಡಿಸುವ ತನಿಖಾ ತಂಡದ ವರದಿಗೆ ಕಾಯದೆ ನಾಯ್ಡು ಅವರು ಈ ವಿಷಯವನ್ನು ಏಕೆ ಬಹಿರಂಗಗೊಳಿಸಿದರು?,ʼ ಎಂದು ಪ್ರಶ್ನಿಸಿತು.
ಸೆಪ್ಟೆಂಬರ್ 25 ರಂದು ಎಫ್‌ಐಆರ್ ದಾಖಲು, ಸೆಪ್ಟೆಂಬರ್ 26 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದರೂ, ಮುಖ್ಯಮಂತ್ರಿ ಸೆಪ್ಟೆಂಬರ್ 18 ರಂದು ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ʻಉನ್ನತ ಸಾಂವಿಧಾನಿಕ ಅಧಿಕಾರಿಗಳು ಸಾರ್ವಜನಿಕವಾಗಿ ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆ ನೀಡುವುದು ಸೂಕ್ತವಲ್ಲ,ʼ ಎಂದು ಪೀಠ ಹೇಳಿದೆ.
ಟಿಡಿಪಿ ಪ್ರತಿಕ್ರಿಯೆ: ಸುಪ್ರೀಂ ಕೋರ್ಟ್‌ನ ಟೀಕೆಗೆ ಪ್ರತಿಕ್ರಿಯಿಸಿರುವ ಟಿಡಿಪಿ ರಾಷ್ಟ್ರೀಯ ವಕ್ತಾರ ಕೆ. ಪಟ್ಟಾಬಿ ರಾಮನ್, ʻನಮ್ಮ ಹೇಳಿಕೆಗಳಿಗೆ ಬದ್ಧರಾಗಿದ್ದೇವೆ. ತಿರುಪತಿ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಸಲಾಗುತ್ತಿತ್ತು. ಕೇಂದ್ರದಿಂದ ತನಿಖೆಯ ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್ ಕೇಳಿರುವುದನ್ನು ಸ್ವಾಗತಿಸುತ್ತೇವೆ. ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಎಂಟು ಟ್ಯಾಂಕರ್‌ಗಳಲ್ಲಿ ಟಿಟಿಡಿಗೆ ತುಪ್ಪ ಪೂರೈಸಿದೆ,ʼ ಎಂದರು.
ʻಲಡ್ಡುಗಳ ವಾಸನೆ ಮತ್ತು ಗುಣಮಟ್ಟದ ಬಗ್ಗೆ ಭಕ್ತರು ದೂರು ನೀಡಿದ ನಂತರ, ಉಳಿದ ನಾಲ್ಕು (ಎಂಟು) ಟ್ಯಾಂಕರ್‌ಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ ಕಲಬೆರಕೆಯಾಗಿದೆ ಎಂದು ವರದಿ ಬಂದಿದೆ,ʼ ಎಂದು ರಾಮನ್ ಹೇಳಿದರು.
ʻಪ್ರತಿ ಕೆಜಿಗೆ 319 ರೂ.ದರ ನಿಗದಿಯಾಗಿತ್ತು. ಮೊದಲ ನಾಲ್ಕು ಟ್ಯಾಂಕರ್‌ಗಳ ತುಪ್ಪ ಶುದ್ಧವಾಗಿದೆ ಮತ್ತು ಉಳಿದ ನಾಲ್ಕು ಟ್ಯಾಂಕರ್‌ಗಳು ಕಲಬೆರಕೆಯಾಗಿದೆ ಎಂದು ಹೇಳಲಾಗುವುದಿಲ್ಲ. ನಾವು ಕಳುಹಿಸಿದ ತುಪ್ಪದ ಮಾದರಿಗಳ ವರದಿಯನ್ನು ಎನ್‌ಡಿಡಿಬಿ ನೀಡಿದೆ. ಆಂಧ್ರಪ್ರದೇಶ ಸರ್ಕಾರ ಎಲ್ಲಾ ವರದಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ,ʼ ಎಂದು ಹೇಳಿದರು.