
ಐಪಿಎಲ್ 2024: ಎಸ್‌ಆರ್‌ಹೆಚ್ ಫೈನಲ್ ಪ್ರವೇಶ
ಮೇ 26 ರಂದು ಚೆನ್ನೈನಲ್ಲಿ ಕೆಕೆಆರ್ ಎದುರು ಅಂತಿಮ ಹಣಾಹಣಿ
ಮೇ 24- ಚೆನ್ನೈನಲ್ಲಿ ನಡೆದ ಐಪಿಎಲ್ 2024 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನ್ನು 36 ರನ್‌ಗಳಿಂದ ಸೋಲಿಸಿದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಫೈನಲ್ ಪ್ರವೇಶಿಸಿದೆ. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ (ಮೇ 26) ನಡೆಯುವ ಪ್ರಶಸ್ತಿ ಹಣಾಹಣಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ್ನು ಎದುರಿಸಲಿದೆ.
ತಿರುಗುವ ಪಿಚ್: ಕ್ವಾಲಿಫೈಯರ್ 2 ಪಂದ್ಯದಲ್ಲಿ ನಿಧಾನವಾಗಿ ತಿರುತ್ತಿದ್ದ ಪಿಚ್ ನ್ನು ಎಸ್‌ಆರ್‌ಎಚ್ ಬೌಲರ್‌ಗಳು ಸಮರ್ಥವಾಗಿ ಬಳಸಿಕೊಂಡರು. ಇದರಿಂದ 176 ರನ್ ಚೇಸ್‌ನಲ್ಲಿ ಆರ್ ಆರ್ ನ್ನು 7 ವಿಕೆಟ್ ಗೆ 139 ರನ್ ಗೆ ನಿರ್ಬಂಧಿಸಲು ಸಾಧ್ಯವಾಯಿತು. ಇಂಪ್ಯಾಕ್ಟ್ ಪ್ಲೇಯರ್' ಆಗಿ ಬಂದ ಎಡಗೈ ಸ್ಪಿನ್ನರ್‌ಗಳಾದ ಶಹಬಾಜ್ ಅಹ್ಮದ್ (3/23) ಮತ್ತು ಅಭಿಷೇಕ್ ಶರ್ಮಾ (2/24) ವಿಕೆಟ್ ಪಡೆದರು. ಇದರಿಂದ ಉತ್ತಮ ಆರಂಭ ಕಂಡಿದ್ದ ಆರ್‌ಆರ್ ರನ್ ವೇಗ ಕುಸಿಯಿತು.
ಎಂಟನೇ ಓವರ್‌ನಲ್ಲಿ 1 ವಿಕೆಟ್ ಗೆ 65 ರನ್ ಗಳಿಸಿದ್ದ ಆರ್‌ಆರ್ , ಯಶಸ್ವಿ ಜೈಸ್ವಾಲ್ (42 ರನ್, 21 ಎಸೆತ, 4x4, 3x6) ಮತ್ತು ನಾಯಕ ಸಂಜು ಸ್ಯಾಮ್ಸನ್ (10) ಇಬ್ಬರನ್ನೂ ಐದು ಎಸೆತಗಳ ಅಂತರದಲ್ಲಿ ಕಳೆದುಕೊಂಡಿತು. ಆನಂತರ 13.4 ಓವರ್‌ಗಳಲ್ಲಿ 6 ವಿಕೆಟ್ಟಿಗೆ 92 ರನ್ ಗಳಿಸಿ, ಸಂಕಷ್ಟ ಎದುರಿಸುತ್ತಿತ್ತು. ಆದರೆ, ಧ್ರುವ್ ಜುರೆಲ್‌ಗೆ (56 ಔಟಾಗದೆ 35, 7x4, 2x6) ಏಕಾಂಗಿ ಹೋರಾಟ ನಡೆಸಿ ತಂಡವನ್ನು ಮತ್ತೆ ಹಳಿಗೆ ತಂದರು. ಆದರೆ, ಅವರ ಅರ್ಧಶತಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಕಾಗಲಿಲ್ಲ.
ಮಿಂಚಿದ ಆರ್ ಆರ್ ಬೌಲರ್‌ಗಳು: ಇದಕ್ಕೂ ಮೊದಲು, ಸಂದೀಪ್ ಶರ್ಮಾ ಅವರು ತಮ್ಮ ಕೌಶಲದಿಂದ ಹೈದರಾಬಾದ್ ತಂಡವನ್ನು 9 ವಿಕೆಟ್‌ಗೆ 175 ಕ್ಕೆ ನಿರ್ಬಂಧಿಸಿದರು. ಟಾಸ್ ಗೆದ್ದ ಸ್ಯಾಮ್ಸನ್ ,ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಮಾಡಲು ಕೇಳಿದರು. ಹೆನ್ರಿಕ್ ಕ್ಲಾಸೆನ್ ಅವರ ಅರ್ಧಶತಕ (50, 34 ಎಸೆತ)ದ ನಡುವೆಯೂ ಟ್ರೆಂಟ್ ಬೌಲ್ಟ್ (3/45) ಹೈದರಾಬಾದಿನ ಕುಸಿತವನ್ನು ಪ್ರಾರಂಭಿಸಿದರು, ಸಂದೀಪ್ ಮಧ್ಯಮ ಓವರ್‌ಗಳಲ್ಲಿ ಹೈದರಾಬಾದ್ ಆಟಗಾರರ ಉಸಿರುಗಟ್ಟಿಸಿದರು. ಅವೇಶ್ ಖಾನ್ ಪಂದ್ಯಾವಳಿಯುದ್ದಕ್ಕೂ ಕಾಡಿದರು (3/27).
ಆದರೆ, ಸಂದೀಪ್(2/25, 4 ಓವರ್) ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳು ಹೊಡೆಯಲು ಸಾಧ್ಯವಾಗದಂತೆ ಚೆಂಡು ಎಸೆದು, 30 ಯಾರ್ಡ್ ವೃತ್ತದಲ್ಲಿ ನಿಂತಿದ್ದ ಫೀಲ್ಡರ್ ಗಳನ್ನು ತೆರವುಗೊಳಿಸಲು ಬ್ಯಾಟರ್ ಗಳಿಗೆ ಸಾಧ್ಯವಾಗಲಿಲ್ಲ.
ಚಹಾಲ್ 3 ಕ್ಯಾಚ್ : ಯಜುವೇಂದ್ರ ಚಾಹಲ್ ಥರ್ಡ್ ಮ್ಯಾನ್ ಸ್ಥಾನದಲ್ಲಿ ಮೂರು ಕ್ಯಾಚ್ ಹಿಡಿದರೆ, ರವಿಚಂದ್ರನ್ ಅಶ್ವಿನ್ ಅದೇ ಸ್ಥಾನದಲ್ಲಿ ಇನ್ನೊಂದು ಕ್ಯಾಚ್ ಹಿಡಿದರು.
ಟ್ರಾವಿಸ್ ಹೆಡ್ (28 ಎಸೆತಗಳಲ್ಲಿ 34) ಸೇರಿದಂತೆ ಸನ್ ರೈಸರ್ಸ್ ಬ್ಯಾಟರ್‌ಗಳು ಎದುರಿಸಿದ ಸಮಸ್ಯೆಯೆಂದರೆ, ಹೊಡೆತದ ಆಯ್ಕೆಯಲ್ಲಿ ಮಾಡಿದ ಲೋಪಗಳು. ಆರಂಭದಲ್ಲಿ ಅಭಿಷೇಕ್ (12) ಅವರು ಬೌಲ್ಟ್ ಎಸೆತದಲ್ಲಿ ಔಟ್ ಆದರು. ಚೆಪಾಕ್ ಪಿಚ್ ಬಗ್ಗೆ ಪರಿಚಯವಿರುವ ರವಿಚಂದ್ರನ್ ಅಶ್ವಿನ್ ಅವರನ್ನು ಹೊಸ ಚೆಂಡಿನಲ್ಲಿ ಬಳಸಿಕೊಳ್ಳುವ ತಂತ್ರ ಕೆಲಸ ಮಾಡಲಿಲ್ಲ (4 ಓವರ್‌ಗಳಲ್ಲಿ 0/43). ರಾಹುಲ್ ತ್ರಿಪಾಠಿ (15 ಎಸೆತ, 37 ರನ್) ಉತ್ತಮವಾಗಿ ಬ್ಯಾಟ್ ಮಾಡಿದರು.
ಮಾರ್ಕ್‌ರಮ್ ವೈಫಲ್ಯ: ಹೆಡ್ ಆಟವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದುಕೊಳ್ಳುತ್ತಿರುವಾಗ, ಬೌಲ್ಟ್ ಅವರ ಕಡಿಮೆ ಉದ್ದದ ಚಂಡು ಹೊಡೆಯಲು ಪ್ರಯತ್ನಿಸಿ, ಔಟ್ ಆದರು. ತಂಡಕ್ಕೆ ನಲ್ಲಿ ಐಡೆನ್ ಮಾರ್ಕ್‌ರಮ್ ಅವರ ಮರು ಪ್ರವೇಶದಿಂದ ಲಾಭ ಆಗಲಿಲ್ಲ. ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ಕ್ಯಾಚ್ ನೀಡಿದರು. ಕ್ಲಾಸೆನ್ ಆಟದ ಬೆಂಬಲದಿಂದ ಸನ್‌ರೈಸರ್ಸ್ 3 ವಿಕೆಟ್‌ಗೆ 99 ರನ್ ಗಳಿಸಿ ದ್ದಾಗ, ಸಂದೀಪ್ ಎಸೆತಕ್ಕೆ ಹೆಡ್ ವಿಕೆಟ್ ಕಳೆದುಕೊಂಡರು. ಚೆಂಡು ತಿರುಗುತ್ತಿರುವುದರಿಂದ ಬ್ಯಾಟ್‌ಗೆ ಬರುತ್ತಿಲ್ಲ ಎಂದು ಅರ್ಥ ಮಾಡಿ ಕೊಂಡ ಕ್ಲಾಸೆನ್, ತನ್ನೆಡೆಗೆ ಬಂದ ಚೆಂಡುಗಳನ್ನು ಹಣಿದರು. ಆದರೆ, ನಿಧಾನಗತಿಯ ಚೆಂಡು ಒಂದಕ್ಕೆ ವಿಕೆಟ್ ಒಪ್ಪಿಸಿದರು. ಕ್ಲಾಸೆನ್ ನಿರ್ಗಮನದೊಂದಿಗೆ 200 ದಾಟುವ ಅವಕಾಶ ಮುರುಟಿ ಹೋಯಿತು.