Deve Gowda: ಜಾತಿಗಿಂತ ಆರ್ಥಿಕ ಮೀಸಲಾತಿ ಆದ್ಯತೆ ನೀಡಿ ; ಸಂಸತ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ
x
ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ

Deve Gowda: ಜಾತಿಗಿಂತ ಆರ್ಥಿಕ ಮೀಸಲಾತಿ ಆದ್ಯತೆ ನೀಡಿ ; ಸಂಸತ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ

Deve Gowda: ತೀರಾ ಬಡತನದಿಂದ ಬಳಲುತ್ತಿರುವವರು ಅಥವಾ ಕೆಟ್ಟ ಜೀವನ ಪರಿಸ್ಥಿತಿ ಹೊಂದಿರುವವರಿಗೆ ಮಾತ್ರ ಆದ್ಯತೆ ನೀಡಬೇಕೇ ಎಂದು ಸದನ ಯೋಚಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದರು.


ಮೀಸಲಾತಿಯನ್ನು ಜಾತಿ ಆಧಾರದ ಮೇಲೆ ಮುಂದುವರಿಸಬೇಕೇ ಅಥವಾ ಕುಟುಂಬದ ಆರ್ಥಿಕ ಸ್ಥಿತಿಯನ್ನು ಆಧರಿಸಿ ನೀಡಬೇಕೆ ಎಂದು ಸಂಸತ್ತು ಚಿಂತಿಸಬೇಕಾಗಿದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡ ಮಂಗಳವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ "ಭಾರತದ ಸಂವಿಧಾನದ 75 ವರ್ಷಗಳ ಪ್ರಯಾಣ" ಕುರಿತ ಚರ್ಚೆಯಲ್ಲಿ ಭಾಗವಹಿಸಿದ ದೇವೇಗೌಡ, '' ಜಾತಿ ಅಥವಾ ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿಯನ್ನು ಕಲ್ಪಿಸಬೇಕೇ ಎಂಬುದರ ಬಗ್ಗೆ ಸಂಸತ್​ ಸ್ವಯಂ ಪರಾಮರ್ಶೆ ಮಾಡಬೇಕಾಗಿದೆ. ಎಂದು ಹೇಳಿದ ದೇವೇಗೌಡರು., . "ನಾವು ಈ ಹಿಂದೆ ನೀಡಿರುವ ಮೀಸಲಾತಿಯಿಂದ ಜನರು ಬಳಲುತ್ತಿದ್ದಾರೆ ಮತ್ತು ಅವರನ್ನು ಮೇಲಕ್ಕೆ ಎತ್ತಿಲ್ಲ. ದಿನಕ್ಕೆ ಎರಡು ಹೊತ್ತಿನ ಊಟಕ್ಕೆ ತತ್ವಾರ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಹಿಂದಿನಂತೆಯೇ ಮೀಸಲಾತಿ ಮುಂದುವರಿಸಬೇಕೇ ಅಥವಾ ತೀರಾ ಬಡತನದಿಂದ ಬಳಲುತ್ತಿರುವವರು ಅಥವಾ ಕೆಟ್ಟ ಜೀವನ ಪರಿಸ್ಥಿತಿ ಹೊಂದಿರುವವರಿಗೆ ಮಾತ್ರ ಆದ್ಯತೆ ನೀಡಬೇಕೇ ಎಂದು ಸದನ ಯೋಚಿಸಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಹೇಳಿದರು.

"ಸದನವು ಪರಾಮರ್ಶೆ ಮಾಡಬೇಕು. ನಾಯಕರು ಈ ಬಗ್ಗೆ ಚಿಂತಿಸಬೇಕು. ಹಾಗಾದರೆ ಮಾತ್ರ ಮೀಸಲಾತಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಧಾನಿ (ನರೇಂದ್ರ ಮೋದಿ) ಈ ಬಗ್ಗೆ ಯೋಚಿಸಬಹುದು" ಎಂದು ದೇವೇಗೌಡ ಅಭಿಪ್ರಾಯಪಟ್ಟು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಹಲವಾರು ಪರೀಕ್ಷೆಗಳನ್ನು ಎದುರಿಸಿವೆ ಎಂದು ಅವರು ಹೇಳಿದರು.

ತಮಗಿಂತ ಹಿಂದೆ ಮಾತನಾಡಿದ್ದ ಸದನದ ಪ್ರತಿಪಕ್ಷ ನಾಯಕ ಜೆ.ಪಿ.ನಡ್ಡಾ ಅವರ ಭಾಷಣವನ್ನು ಉಲ್ಲೇಖಿಸಿದ ದೇವೇಗೌಡ, ಕಳೆದ 75 ವರ್ಷಗಳಲ್ಲಿ ದೇಶ ಎದುರಿಸುತ್ತಿರುವ ಮೀಸಲಾತಿ ಮತ್ತು ಇತರ ಸಮಸ್ಯೆಗಳ ಬಗ್ಗೆ "ಚಿಂತನಾಶೀಲ ಭಾಷಣ" ಎಂದು ಹೊಗಳಿದರು.

Read More
Next Story