
ಕೃತಕ ಬುದ್ಧಿಮತ್ತೆ ರಚಿತ ಚಿತ್ರ.
ಪಂಜಾಬ್ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಉಗ್ರನ ಹತ್ಯೆ
ಬುಧವಾರ ಬೆಳಗಿನ ಜಾವ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದ ಚಟುವಟಿಕೆಗಳು ಕಂಡು ಬಂದವು. ತಕ್ಷಣ ಗಡಿ ಭದ್ರತಾ ಯೋಧರು ಚುರುಕಾಗಿ ಕಾರ್ಯಾಚರಣೆ ಆರಂಭಿಸಿದರು.
ಪಂಜಾಬ್ನ ಪಾಕಿಸ್ತಾನ ಗಡಿ ಪ್ರದೇಶವಾಗಿರುವ ಪಠಾಣ್ ಕೋಟ್ ಮೂಲಕ ಭಾರತಕ್ಕೆ ಒಳನುಸುಳಲು ಯತ್ನಿಸಿದ ಉಗ್ರನೊಬ್ಬನನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದೆ. ಪಠಾಣ್ ಕೋಟ್ ಜಿಲ್ಲೆ ಬಿಒಪಿ ತಾಶ್ ಪಟಾಣ್ ಪ್ರದೇಶದಲ್ಲಿ ಬಿಎಸ್ಎಫ್ ಯೋಧರು ಒಬ್ಬ ಉಗ್ರನನ್ನು ಹತ್ಯೆಗೈದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಬುಧವಾರ ಬೆಳಗಿನ ಜಾವ ಅಂತಾರಾಷ್ಟ್ರೀಯ ಗಡಿಯಲ್ಲಿ ಶಂಕಾಸ್ಪದ ಚಟುವಟಿಕೆಗಳು ಕಂಡು ಬಂದವು. ತಕ್ಷಣ ಗಡಿ ಭದ್ರತಾ ಯೋಧರು ಚುರುಕಾಗಿ ಕಾರ್ಯಾಚರಣೆ ಆರಂಭಿಸಿದರು. ತಕ್ಷಣ ಒಬ್ಬ ಉಗ್ರ ಒಳಗೆ ನುಗ್ಗಲು ಯತ್ನಿಸಿದ್ದ. ತಕ್ಷಣ ಬಿಎಸ್ಎಫ್ ಅಧಿಕಾರಿಗಳು ಗುಂಡು ಹೊಡೆದು ಆತನನ್ನು ಹತ್ಯೆ ಮಾಡಿದ್ದಾರೆ. ಹತನಾದ ಉಗ್ರ ಯಾವ ಸಂಘಟನೆಗೆ ಸೇರಿದವನು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಕೆಲ ದಿನಗಳ ಹಿಂದೆ ಮೇಘಾಲಯ ಗಡಿಯ ಮೂಲಕ ಕೆಲವು ಒಳನುಸುಳುಕೋರರು ಭಾರತದ ಗಡಿ ದಾಟಲು ಯತ್ನಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿಯು ಯತ್ನವನ್ನು ವಿಫಲಗೊಳಿಸಿ ಅವನ್ನು ಹತ್ಯೆ ಮಾಡಿತ್ತು. ಇದೀಗ ಪಂಜಾಬ್ ಗಾಡಿಯಲ್ಲಿ ಒಳನುಸುಳುಕೊರರ ಹಾವಳಿ ಜಾಸ್ತಿಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸೇನೆಯು ಸತತ ಕಾರ್ಯಚರಣೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಪಾಕಿಸ್ತಾನ ಸೇನೆ ನೆರವಿನಿಂದ ಬೇರೆ ರಾಜ್ಯಗಳ ಗಡಿಗಳ ಮೂಲಕ ಒಳನುಸುಳಳು ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಸೇನೆಯು ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.