
ಮರಾಠ ಮೀಸಲು ಸಮಸ್ಯೆ ಪರಿಹರಿಸಿ: ಮನೋಜ್ ಜರಂಗೆ ಆಗ್ರಹ
ಜಲ್ನಾ,ಜನವರಿ 19:
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮರಾಠಾ ಕೋಟಾ ಕಾರ್ಯಕರ್ತ ಮನೋಜ್ ಜರಂಗೆ ಒತ್ತಾಯಿಸಿದರು.
ಶನಿವಾರ ಅಂತರ್ವಳಿ ಸಾರಥಿ ಗ್ರಾಮದಿಂದ ಹೊರಟು,ತಮ್ಮ ಸಮುದಾಯಕ್ಕೆ ಮೀಸಲು ನೀಡಬೇಕೆಂದು ಒತ್ತಾಯಿಸಿ ಮುಂಬೈಗೆ ಜಾಥಾ ಹೊರಡಲಿದ್ದೇನೆ. ಮರಾಠ ಮೀಸಲು ಸಮಸ್ಯೆಗೆ ಪರಿಹಾರವು ಫಡ್ನವಿಸ್ ಅವರ ಬಳಿ ಇದೆ. ಅವರು ವಿಷಯವನ್ನು ಪ್ರಾಮಾಣಿಕತೆ ಮತ್ತು ತಿಳುವಳಿಕೆಯೊಂದಿಗೆ ಪರಿಹರಿಸಬೇಕಿದೆ ಎಂದರು. 54 ಲಕ್ಷ ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವಂತೆ ಮನವಿ ಮಾಡಿದರು.
ಸಚಿವ ಎಲ್ಲಿದ್ದಾರೆ? : ಕೋಟಾ ಸಮಸ್ಯೆ ಬಗೆಹರಿಸಲು ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ಸಮಿತಿ ಡಿ.23ರಂದು ಕಾರ್ಯ ಆರಂಭಿಸಿದೆ. ಆದರೆ ಏನು ಪ್ರಗತಿ ಆಗಿದೆ? ಏಳು ಸಚಿವರ ಸಹಕಾರದಿಂದ 30 ದಿನದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಸಚಿವ ಮಹಾಜನ್ ಎಲ್ಲಿದ್ದಾರೆ? ಪರಿಹಾರ ಕಂಡುಕೊಳ್ಳಲು 40 ದಿನಗಳ ಕಾಲಾವಕಾಶ ನೀಡಿದ್ದೇವೆ. ಅವರು ಎಲ್ಲಿ ಅಡಗಿಕೊಂಡಿದ್ದಾರೆ?ʼ ಎಂದು ಪ್ರಶ್ನಿಸಿದರು.
ಅಂತಿಮ ಹೋರಾಟ: ʼ ಮುಂಬೈ ಪಾದಯಾತ್ರೆ ಅಂತಿಮ ಸಮರ. ಯಾವುದೇ ಕಾನೂನು ಅಥವಾ ಪೊಲೀಸ್ ಕ್ರಮವನ್ನು ಎದುರಿಸಲು ಸಿದ್ಧವಾಗಿದ್ದೇವೆʼ ಎಂದು ಹೇಳಿದರು.