
ಸ್ಮೃತಿ ಇರಾನಿ ಬಿಜೆಪಿಯ ನೂತನ ಅಧ್ಯಕ್ಷೆ?
ಈ ಹಿಂದೆ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ನಿತಿನ್ ಗಡ್ಕರಿ ಮತ್ತು ಅಮಿತ್ ಶಾ ಅವರು ಹೊಂದಿದ್ದ ಅಧ್ಯಕ್ಷ ಹುದ್ದೆಗೆ ಲೋಕಸಭೆ ಕದನದಲ್ಲಿ ಅಮೇಥಿಯಲ್ಲಿ ಪರಾಭವಗೊಂಡ ಸ್ಮೃತಿ ಇರಾನಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ.
ಬಿಜೆಪಿಯ ಪ್ರಸ್ತುತ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಪೂರ್ಣ ಕಾಲಿಕ ಅಧ್ಯಕ್ಷರ ಅಗತ್ಯೆತೆ ಇದ್ದು, ಬಿಜೆಪಿ, ಹೊಸ ಪ್ರಯತ್ನದ ಭಾಗವಾಗಿ ತನ್ನ ಮೊದಲ ಮಹಿಳಾ ಅಧ್ಯಕ್ಷರನ್ನು ಹೊಂದುವ ಬಗ್ಗೆ ಯೋಚಿಸುತ್ತಿದೆ.
ಈ ಹಿಂದೆ ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ನಿತಿನ್ ಗಡ್ಕರಿ ಮತ್ತು ಅಮಿತ್ ಶಾ ಅವರು ಹೊಂದಿದ್ದ ಅಧ್ಯಕ್ಷ ಹುದ್ದೆಗೆ ಲೋಕಸಭೆ ಕದನದಲ್ಲಿ ಅಮೇಥಿಯಲ್ಲಿ ಪರಾಭವಗೊಂಡ ಸ್ಮೃತಿ ಇರಾನಿ ಅವರನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಇರಾನಿ ಅವರು ಆಕ್ರಮಣ ಶೈಲಿಯ ನಾಯಕತ್ವ ಅಧ್ಯಕ್ಷ ಹುದ್ದೆಗೆ ಸರಿಯಾಗಿದೆ ಎಂಬ ಮಾತು ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದ ಧರ್ಮೇಂದ್ರ ಪ್ರಧಾನ್ ಅಥವಾ ಶಿವರಾಜ್ ಸಿಂಗ್ ಚೌಹಾಣ್ ಅವರಂತಹ ಬಿಜೆಪಿ ನಾಯಕರು ಈಗ ನರೇಂದ್ರ ಮೋದಿ ಸಂಪುಟದಲ್ಲಿರುವುದರಿಂದ ಇರಾನಿ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ ಎನ್ನಲಾಗಿದೆ.
ಇತರ ಆಕಾಂಕ್ಷಿಗಳು
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಹೆಸರೂ ಅಧ್ಯಕ್ಷ ಹುದ್ದೆಗೆ ಕೆಳಿಬರುತ್ತಿದೆ. ತಾವ್ಡೆಯವರು ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಅವರು ಅತ್ಯಂತ ಪ್ರಭಾವಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ.
ಬಿಜೆಪಿಯ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ ಲಕ್ಷ್ಮಣ್, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾದ ಪ್ರಧಾನ ಕಾರ್ಯದರ್ಶಿ ಮತ್ತು ಉಸ್ತುವಾರಿ ಸುನಿಲ್ ಬನ್ಸಾಲ್ ಮತ್ತು ರಾಜಸ್ಥಾನದ ರಾಜ್ಯಸಭಾ ಸದಸ್ಯ ಓಂ ಮಾಥುರ್ ಕೂಡಾ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗಿದೆ.
ಆದಾಗ್ಯೂ, ಬಿಜೆಪಿ ನಾಯಕತ್ವವು ಸ್ಮೃತಿ ಇರಾನಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸುತ್ತವೆ. ಸ್ಮೃತಿ ಅವರು ಆಕ್ರಮಣಕಾರಿ ನಾಯಕತ್ವ ಹೊಂದಿದ್ದು, ಬಹು-ಭಾಷಾ ಪಾಂಡಿತ್ಯ ಇರುವ ಕಾರಣ ಅಧ್ಯಕ್ಷ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಆಯ್ಕೆ ಪ್ರಕ್ರಿಯೆಯು ರಹಸ್ಯವಾಗಿಯೇ ಉಳಿದಿದ್ದು, ಬಿಜೆಪಿಯಲ್ಲಿ ಯಾರೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಮಾತನಾಡಲು ಮುಂದೆ ಬಂದಿಲ್ಲ