
ಎನ್‌ಡಿಎ 3.0: ಆರ್ಥಿಕ ಅಜೆಂಡಾ ರೂಪಿಸಲಿರುವ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂದಿನ ತಿಂಗಳು ಬಜೆಟ್ ಮಂಡಿಸುವಾಗ, ಸರ್ಕಾರದ ಆರ್ಥಿಕ ಕಾರ್ಯಸೂಚಿಯನ್ನು ಪ್ರಸ್ತುತಪಡಿಸುವ ಸಾಧ್ಯತೆಯಿದೆ.
ಹಣದುಬ್ಬರ ಅಧಿಕಗೊಳಿಸದೆ ಬೆಳವಣಿಗೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ ಮತ್ತು ಸಮ್ಮಿಶ್ರ ಸರ್ಕಾರದ ಅಗತ್ಯಗಳನ್ನು ಪೂರೈಸಲು ಸಂಪನ್ಮೂಲಗಳನ್ನು ಹುಡುಕಬೇಕಿದೆ. ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಮತ್ತು 2047 ರ ವೇಳೆಗೆ ʻವಿಕಸಿತ ಭಾರತ' ವಾಗಿ ಪರಿವರ್ತಿಸಲು ಅಗತ್ಯವಾದ ಸುಧಾರಣೆಗಳನ್ನುಆರ್ಥಿಕ ಕಾರ್ಯಸೂಚಿ ಒಳಗೊಂಡಿರಬೇಕಿದೆ.
ಆರ್‌ಬಿಐ ಗ್ರಾಮೀಣ ಬೇಡಿಕೆಯನ್ನು ಸುಧಾರಣೆ ಮತ್ತು ಹಣದುಬ್ಬರವನ್ನು ನಿಯಂತ್ರಣದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ.7.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಕಳೆದ ವಾರ ಅಂದಾಜಿಸಿದೆ. 2024ರ ಆರ್ಥಿಕ ವರ್ಷಕ್ಕೆ ಆರ್‌ಬಿಐನಿಂದ ಅತ್ಯಧಿಕ ಡಿವಿಡೆಂಡ್ 2.11 ಲಕ್ಷ ಕೋಟಿ ರೂ. ಲಭ್ಯವಾಗಿದೆ.
ಎನ್‌ಡಿಎ 3.0 ಸರ್ಕಾರದ ಪ್ರಮುಖ ಆದ್ಯತೆಗಳೆಂದರೆ, ಕೃಷಿ ವಲಯದ ಒತ್ತಡದ ನಿಭಾವಣೆ, ಉದ್ಯೋಗ ಸೃಷ್ಟಿ, ಬಂಡವಾಳ ವೆಚ್ಚ(ಕ್ಯಾಪಿಟಲ್ ಎಕ್ಸ್ ಪೆಂಡಿಚರ್) ವೇಗವನ್ನು ಉಳಿಸಿಕೊಳ್ಳುವುದು ಮತ್ತು ಆದಾಯ ಬೆಳವಣಿಗೆಯ ಹೆಚ್ಚಳ. ಕಳೆದ 10 ವರ್ಷಗಳಲ್ಲಿ ಮೋದಿ ಆಡಳಿತದ ಆರ್ಥಿಕ ನೀತಿಗಳಿಗೆ ರೇಟಿಂಗ್ ಏಜೆನ್ಸಿ ಎಸ್ ಆಂಡ್ ಪಿ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದೆ. ಏರ್ ಇಂಡಿಯಾ ಹೊರತುಪಡಿಸಿ, ಯಾವುದೇ ದೊಡ್ಡ ಮಟ್ಟದ ಮಾರಾಟದಿಂದ ಬಂಡವಾಳ ಹಿಂತೆಗೆದುಕೊಳ್ಳುವಿಕೆ ಸಾಧ್ಯವಾಗದೆ ಇರುವುದರಿಂದ, ತೆರಿಗೆಯೇತರ ಆದಾಯ ಸಂಗ್ರಹ ಸವಾಲಾಗಿ ಉಳಿದಿದೆ.
ಶಿಪ್ಪಿಂಗ್ ಕಾರ್ಪೊರೇಶನ್, ಎನ್‌ಎಂಡಿಸಿ ಸ್ಟೀಲ್ ಲಿಮಿಟೆಡ್, ಬಿಇಎಂಎಲ್, ಪಿಡಿಐಎಲ್ ಮತ್ತು ಎಚ್‌ಎಲ್‌ಎಲ್ ಲೈಫ್‌ಕೇರ್ ಸೇರಿದಂತೆ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಮಾರಾಟ ಚಾಲನೆಯಲ್ಲಿದೆ. ಐಡಿಬಿಐ ಬ್ಯಾಂಕ್ ಅನುಮತಿಗಳಲ್ಲಿ ಸಿಲುಕಿಕೊಂಡಿದೆ.
ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು ಸಾಕಷ್ಟು ಪ್ರತಿರೋಧ ಎದುರಿಸುತ್ತಿವೆ. ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳ ಖಾಸಗೀಕರಣವನ್ನು ಮುಂದುವರಿಸಲು ಆಗಿಲ್ಲ. ಮಾಸಿಕ ಜಿಎಸ್‌ಟಿ ಸಂಗ್ರಹ ಉತ್ತಮವಾಗಿದ್ದರೂ, ಜಿಎಸ್‌ಟಿ ಮಂಡಳಿಯು ಜಿಎಸ್‌ಟಿ 2.0 ನ್ನು ಪ್ರಾರಂಭಿಸಲು ತೆರಿಗೆ ದರ ಮತ್ತು ಸ್ಲ್ಯಾಬ್ ಗಳನ್ನು ತರ್ಕಬದ್ಧಗೊಳಿಸಬೇಕಾಗುತ್ತದೆ.
2019 ರ ಚುನಾವಣೆ ನಂತರ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯ ಉಸ್ತುವಾರಿ ನೀಡಲಾಯಿತು. ಅವರು ಸ್ವತಂತ್ರ ಭಾರತದ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ.