
ಶುಭಾಂಶು ಶುಕ್ಲಾ
ಬಾಹ್ಯಾಕಾಶದಿಂದ ಭೂಮಿಗೆ ಶುಭಾಂಶು ಶುಕ್ಲಾ ಪಯಣ: ಆಕ್ಸಿಯಂ-4 ಮಿಷನ್ ಇಂದು ಸ್ಪ್ಲಾಷ್‌ಡೌನ್
ಶುಭಾಂಶು ಶುಕ್ಲಾ ಜೊತೆ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಸೋಮವಾರ (ಜುಲೈ 14) ಸಂಜೆ 4:45ಕ್ಕೆ ಐಎಸ್‌ಎಸ್‌ನಿಂದ ಹೊರಟಿದ್ದಾರೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಆಕ್ಸಿಯಂ-4 ವಾಣಿಜ್ಯ ಮಿಷನ್‌ನ ಇತರ ಮೂವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ವಾಸ್ತವ್ಯದ ನಂತರ ಇಂದು ಭೂಮಿಗೆ ಮರಳಲಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಬಳಿ ಮಧ್ಯಾಹ್ನ 3.01ಕ್ಕೆ ಡ್ರ್ಯಾಗನ್ 'ಗ್ರೇಸ್' ಬಾಹ್ಯಾಕಾಶ ನೌಕೆ ಸ್ಪ್ಲಾಷ್‌ಡೌನ್ ಆಗುವ ನಿರೀಕ್ಷೆಯಿದೆ. ಈ ಮೂಲಕ 22.5 ಗಂಟೆಗಳ ಸುದೀರ್ಘ ಭೂಪ್ರಯಾಣಕ್ಕೆ ತೆರೆ ಬೀಳಲಿದೆ.
ಶುಭಾಂಶು ಶುಕ್ಲಾ ಜೊತೆ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಸೋಮವಾರ (ಜುಲೈ 14) ಸಂಜೆ 4:45ಕ್ಕೆ ಐಎಸ್‌ಎಸ್‌ನಿಂದ ಹೊರಟಿದ್ದಾರೆ. "ಡ್ರ್ಯಾಗನ್ ಮತ್ತು ಆಕ್ಸಿಯಂ-4 ಸಿಬ್ಬಂದಿ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಲು ಮತ್ತು ಸ್ಯಾನ್ ಡಿಯಾಗೋ ಕರಾವಳಿಯ ಬಳಿ ಸ್ಪ್ಲಾಷ್‌ಡೌನ್ ಆಗಲು ಸಿದ್ಧರಾಗಿದ್ದಾರೆ ಸ್ಪೇಸ್‌ಎಕ್ಸ್ 'ಎಕ್ಸ್'ನಲ್ಲಿ ಪ್ರಕಟಿಸಿದೆ. ಬಾಹ್ಯಾಕಾಶ ನೌಕೆ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಷ್‌ಡೌನ್ ಆಗುವ ಮೊದಲು ಅಲ್ಪಾವಧಿಯ ಸಾನಿಕ್ ಬೂಮ್ ಶಬ್ದ ಹೊರಡಿಸಲಿದೆ ಎಂದೂ ಅದು ತಿಳಿಸಿದೆ.
ಭೂಮಿಗೆ ಮರಳುವ ಹಾದಿ
ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವಾಗ ಪೆಸಿಫಿಕ್ ಮಹಾಸಾಗರದ ಮೇಲೆ ಮಧ್ಯಾಹ್ನ 2:07ಕ್ಕೆ (ಐಎಸ್‌ಟಿ) ಡಿ-ಆರ್ಬಿಟ್ ಬರ್ನ್ ನಡೆಯುವ ನಿರೀಕ್ಷೆಯಿದೆ. ಅಂತಿಮ ಸಿದ್ಧತೆಗಳಲ್ಲಿ ಕ್ಯಾಪ್ಸುಲ್‌ನ ಟ್ರಂಕ್ ಅನ್ನು ಬೇರ್ಪಡಿಸುವುದು (ಮಧ್ಯಾಹ್ನ 2:26ಕ್ಕೆ ಐಎಸ್‌ಟಿ) ಮತ್ತು ವಾತಾವರಣದ ಪ್ರವೇಶಕ್ಕೆ ಮುಂಚಿತವಾಗಿ ಹೀಟ್ ಶೀಲ್ಡ್ ಅನ್ನು ಓರಿಯಂಟ್ ಮಾಡುವುದು ಸೇರಿವೆ. ಈ ಪ್ರಕ್ರಿಯೆಯಲ್ಲಿ ಬಾಹ್ಯಾಕಾಶ ನೌಕೆ ಸುಮಾರು 1,600 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಒಡ್ಡಿಕೊಳ್ಳಲಿದೆ. ಪ್ಯಾರಾಚೂಟ್‌ಗಳು ಎರಡು ಹಂತಗಳಲ್ಲಿ ತೆರೆದುಕೊಳ್ಳಲಿವೆ – ಮೊದಲು ಸುಮಾರು 5.7 ಕಿ.ಮೀ ಎತ್ತರದಲ್ಲಿ (ಮಧ್ಯಾಹ್ನ 2:57ಕ್ಕೆ ಐಎಸ್‌ಟಿ) ಸ್ಟೆಬಿಲೈಸಿಂಗ್ ಚ್ಯೂಟ್‌ಗಳು, ನಂತರ ಸ್ಪ್ಲಾಷ್‌ಡೌನ್‌ಗೆ ಸುಮಾರು ಎರಡು ಕಿ.ಮೀ ಮೊದಲು ಮುಖ್ಯ ಪ್ಯಾರಾಚೂಟ್‌ಗಳು ತೆರೆಯಲಿವೆ.
ಬಾಹ್ಯಾಕಾಶ ನೌಕೆಯನ್ನು ವಿಶೇಷ ರಿಕವರಿ ಹಡಗಿಗೆ ಹತ್ತುವಂತೆ ಮಾಡಲಾಗುವುದು. ಅಲ್ಲಿ ಗಗನಯಾತ್ರಿಗಳನ್ನು ಕ್ಯಾಪ್ಸುಲ್‌ನಿಂದ ಹೊರತರಲಾಗುವುದು. ಆಕ್ಸಿಯಂ-4 ಸಿಬ್ಬಂದಿ ಹಡಗಿನಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದು, ನಂತರ ಹೆಲಿಕಾಪ್ಟರ್ ಮೂಲಕ ಕರಾವಳಿಗೆ ಹಿಂದಿರುಗಲಿದ್ದಾರೆ. ಗುರುತ್ವಾಕರ್ಷಣೆಯ ಪ್ರಭಾವಕ್ಕೆ ಹೊಂದಿಕೊಳ್ಳಲು ನಾಲ್ವರು ಗಗನಯಾತ್ರಿಗಳು ಏಳು ದಿನಗಳ ಕಾಲ ಪುನರ್ವಸತಿಯಲ್ಲಿ ಕಳೆಯುವ ನಿರೀಕ್ಷೆಯಿದೆ.
ಶುಕ್ಲಾ ಅವರ ಐತಿಹಾಸಿಕ ಮಾತುಗಳು:
ಸೋಮವಾರ, ಬಾಹ್ಯಾಕಾಶ ನಿಲ್ದಾಣದಿಂದ ಹೊರಡುವ ಮೊದಲು ಗಗನಯಾತ್ರಿಗಳು ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಪ್ರವೇಶಿಸಿ, ತಮ್ಮ ಬಾಹ್ಯಾಕಾಶ ಸೂಟ್‌ಗಳನ್ನು ಧರಿಸಿ, ಐಎಸ್‌ಎಸ್‌ನೊಂದಿಗಿನ ಹ್ಯಾಚ್ ಅನ್ನು ಮಧ್ಯಾಹ್ನ 2:37ಕ್ಕೆ (ಐಎಸ್‌ಟಿ) ಮುಚ್ಚಿದರು.