ಶಿವಾಜಿ ಪ್ರತಿಮೆ ಕುಸಿತ | ತನಿಖೆಗೆ ತಂಡ ನಿಯೋಜನೆ- ನೌಕಾಪಡೆ
x

ಶಿವಾಜಿ ಪ್ರತಿಮೆ ಕುಸಿತ | ತನಿಖೆಗೆ ತಂಡ ನಿಯೋಜನೆ- ನೌಕಾಪಡೆ

ಅದೇ ಸ್ಥಳದಲ್ಲಿ ಛತ್ರಪತಿ ಶಿವಾಜಿ ಅವರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.


ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತದ ʻದುರದೃಷ್ಟಕರ ಅಪಘಾತʼದ ಕಾರಣ ಕಂಡುಹಿಡಿಯಲು ತನಿಖಾ ತಂಡವನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

ಮಹಾರಾಷ್ಟ್ರದ ಸಿಂಧುದುರ್ಗದ ಮಾಲ್ವಾನ್ ತೆಹಸಿಲ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಪ್ರತಿಮೆಯನ್ನು ಕಳೆದ ವರ್ಷ ಡಿಸೆಂಬರ್ 4 ರ ನೌಕಾಪಡೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು.

ʻಸಿಂಧುದುರ್ಗದ ನಾಗರಿಕರಿಗೆ ಸಮರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಉಂಟಾದ ಹಾನಿಯಿಂದ ನೌಕಾಪಡೆ ಕಳವಳಗೊಂಡಿದೆ,ʼ ಎಂದು ನೌಕಾಪಡೆ ವಕ್ತಾರರು ಹೇಳಿಕೆ ನೀಡಿದ್ದಾರೆ.

ʻನೌಕಾಪಡೆಯು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ತಜ್ಞರ ಜೊತೆಗೂಡಿ ಈ ದುರದೃಷ್ಟಕರ ಘಟನೆಗೆ ಕಾರಣವನ್ನುಕಂಡುಹಿಡಿಯಲು ತಂಡವನ್ನು ನಿಯೋಜಿಸಿದೆ. ಪ್ರತಿಮೆಯನ್ನು ಸರಿಪಡಿಸಿ, ಮರುಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಿದೆ,ʼ ಎಂದು ಹೇಳಿದೆ.

ಅದೇ ಸ್ಥಳದಲ್ಲಿ ಶಿವಾಜಿ ಮಹಾರಾಜರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಂಬೈನಲ್ಲಿ ಹೇಳಿದ್ದಾರೆ.

Read More
Next Story