ಶಿವಾಜಿ ಪ್ರತಿಮೆ ಕುಸಿತ: ಗುತ್ತಿಗೆದಾರ, ಸಲಹೆಗಾರನ ವಿರುದ್ಧ ಎಫ್‌ಐಆರ್
x
ಸಿಂಧುದುರ್ಗದ ಮಾಲ್ವಾನ್ ತೆಹಸಿಲ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 4, 2023ರಂದು ಅನಾವರಣಗೊಳಿಸಿದ್ದ ಶಿವಾಜಿ ಮಹಾರಾಜರ ಪ್ರತಿಮೆ ಸೋಮವಾರ ಕುಸಿದುಬಿದ್ದಿತು.

ಶಿವಾಜಿ ಪ್ರತಿಮೆ ಕುಸಿತ: ಗುತ್ತಿಗೆದಾರ, ಸಲಹೆಗಾರನ ವಿರುದ್ಧ ಎಫ್‌ಐಆರ್


ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಪೊಲೀಸರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಮತ್ತು ಸಲಹೆಗಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ (ಆಗಸ್ಟ್ 27) ತಿಳಿಸಿದ್ದಾರೆ.

ಪಿಡಬ್ಲ್ಯುಡಿಯಿಂದ ದೂರು ದಾಖಲು: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್ ಸೋಮವಾರ ಸಂಜೆ ಮಾಲ್ವಾನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪ್ರತಿಮೆ ಕುಸಿತಕ್ಕೆ ಕಲಾವಿದ ಮತ್ತು ಸಲಹೆಗಾರ ಕಾರಣ ಎಂದು ದೂರಿದ್ದಾರೆ. ದೂರಿನ ಆಧಾರದ ಮೇಲೆ ಗುತ್ತಿಗೆದಾರ ಜಯದೀಪ್ ಆಪ್ಟೆ ಮತ್ತು ಸಲಹೆಗಾರ ಚೇತನ್ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.

ಪ್ರಧಾನಿಯಿಂದ ಅನಾವರಣ: ಕಳೆದ ವರ್ಷ ನೌಕಾಪಡೆಯ ದಿನ(ಡಿಸೆಂಬರ್ 4)ದಂದು ಸಿಂಧುದುರ್ಗದ ಮಾಲ್ವಾನ್ ತೆಹಸಿಲ್‌ನಲ್ಲಿರುವ ರಾಜ್‌ಕೋಟ್ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಮಹಾರಾಜರ 35 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಪ್ರತಿಮೆಯು ಸೋಮವಾರ (ಆಗಸ್ಟ್ 26) ಮಧ್ಯಾಹ್ನ 1 ಗಂಟೆ ಸುಮಾರಿಗೆ ಕುಸಿದಿದೆ.

ಘಟನೆಯಿಂದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಮುಜುಗರಕ್ಕೊಳಗಾಗಿದೆ. ಪ್ರತಿಮೆಯನ್ನು ಭಾರತೀಯ ನೌಕಾಪಡೆ ವಿನ್ಯಾಸಗೊಳಿಸಿ, ನಿರ್ಮಿಸಿದೆ ಎಂದು ಶಿಂಧೆ ಹೇಳಿದ್ದಾರೆ.

Read More
Next Story