
ಶತಾವಧಾನಿ ಗಣೇಶ್
ಐವರಿಗೆ ಪದ್ಮವಿಭೂಷಣ, ಕರ್ನಾಟಕದ ಶತಾವಧಾನಿ ಆರ್.ಗಣೇಶ್ ಸೇರಿ 13 ಮಂದಿಗೆ ಪದ್ಮಭೂಷಣ ಗೌರವ
ಕೇಂದ್ರ ಸರ್ಕಾರ ಐವರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮಭೂಷಣ ಹಾಗೂ 54ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.
ಬಹುಭಾಷಾ ಪಂಡಿತ, ಶತಾವಧಾನಿ ಆರ್.ಗಣೇಶ್ ಅವರು 2026ನೇ ಸಾಲಿನ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾಲ್ಕು ದಶಕಗಳಿಂದ ಕನ್ನಡ, ತೆಲುಗು, ತಮಿಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಅವಧಾನಗಳನ್ನು ಪ್ರಸ್ತುತಪಡಿಸುತ್ತಿರುವ ಗಣೇಶ್ ಅವರಿಗೆ ಈ ಪ್ರತಿಷ್ಠಿತ ಗೌರವ ಸಂದಿದೆ.
ಕೇಂದ್ರ ಸರ್ಕಾರ ಐವರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮಭೂಷಣ ಹಾಗೂ 54ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಪದ್ಮವಿಭೂಷಣ ಗೌರವಕ್ಕೆ ಪಾತ್ರರಾದವರಲ್ಲಿ ಮಹಾರಾಷ್ಟ್ರದ ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ), ಕೇರಳದ ಕೆ.ಟಿ.ಥಾಮಸ್, ಉತ್ತರ ಪ್ರದೇಶದ ಎನ್. ರಾಜಮ್, ಕೇರಳದ ಪಿ.ನಾರಾಯಣನ್ ಹಾಗೂ ವಿ.ಎಸ್.ಅಚ್ಯುತಾನಂದನ್ (ಮರಣೋತ್ತರ) ಪ್ರಮುಖರು.
ಪದ್ಮಭೂಷಣ ಪ್ರಶಸ್ತಿಯು ಮಹಾರಾಷ್ಟ್ರದ ಅಲ್ಕಾ ಯಾಗ್ನಿಕ್, ಉತ್ತರಾಖಂಡದ ಭಗತ್ ಸಿಂಗ್ ಕೋಶ್ಯಾರಿ, ತಮಿಳುನಾಡಿನ ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ, ಕೇರಳದ ಮಮ್ಮುಟ್ಟಿ, ಅಮೆರಿಕದ ಡಾ. ನೋರಿ ದತ್ತಾತ್ರೇಯುಡು, ಮಹಾರಾಷ್ಟ್ರದ ಪಿಯೂಷ್ ಪಾಂಡೆ (ಮರಣೋತ್ತರ), ತಮಿಳುನಾಡಿನ ಎಸ್.ಕೆ.ಎಂ.ಮೈಲಾನಂದನ್, ಕರ್ನಾಟಕದ ಶತಾವಧಾನಿ ಆರ್.ಗಣೇಶ್, ಜಾರ್ಖಂಡ್‌ನ ಶಿಬು ಸೊರೆನ್ (ಮರಣೋತ್ತರ), ಮಹಾರಾಷ್ಟ್ರದ ಉದಯ್ ಕೋಟಕ್, ದೆಹಲಿಯ ವಿ.ಕೆ.ಮಲ್ಹೋತ್ರಾ (ಮರಣೋತ್ತರ), ಕೇರಳದ ವೆಲ್ಲಪ್ಪಲ್ಲಿ ನಟೇಶನ್, ಅಮೆರಿಕದ ವಿಜಯ್ ಅಮೃತರಾಜ್ ಅವರಿಗೆ ಸಂದಿದೆ.
ಪದ್ಮ ಪ್ರಶಸ್ತಿಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪುಸ್ತಕ ಮನೆಯ ಅಂಕೇಗೌಡ, ದಾವಣಗೆರೆಯ ಖ್ಯಾತ ವೈದ್ಯ ಡಾ. ಸುರೇಶ್ ಹಾನಗವಾಡಿ, ಸುಮಂಗಲಿ ಸೇವಾಶ್ರಮದ ಎಸ್.ಜಿ ಸುಶೀಲಮ್ಮ ಸೇರಿ 54ಮಂದಿ ಭಾಜನರಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿಯು ಅಂಕೇಗೌಡ, ಆರ್ಮಿಡಾ ಫೆರ್ನಾಂಡಿಸ್, ಭಗವಾನ್ ದಾಸ್ ರಾಯಕ್ವಾರ್, ಭಿಕಲ್ಯಾ ಲಾಡಕ್ಯಾ ಧಿಂದಾ, ಬ್ರಜಲಾಲ್ ಭಟ್, ಬುಧರಿ ತಾತಿ, ಚರಣ್ ಹೇಂಬ್ರಮ್, ಚಿರಂಜಿ ಲಾಲ್ ಯಾದವ್, ಧಾರ್ಮಿಕ ಲಾಲ್ ಚುನ್ನಿ ಲಾಲ್ ಪಾಂಡ್ಯ, ಗಫ್ರುದ್ದೀನ್ ಮೇವತಿ ಜೋಗಿ, ಹೈಲಿ ವಾರ್, ಇಂದರ್ಜೀತ್ ಸಿಂಗ್ ಸಿದ್ಧು, ಕೆ. ಪಾಜನಿವೇಲ್, ಕೈಲಾಶ್ ಚಂದ್ರ ಪಂತ್, ಖೇಮ್ ರಾಜ್ ಸುಂದ್ರಿಯಾಲ್, ಕೊಲ್ಲಕ್ಕಾಯಿಲ್ ದೇವಕಿ ಅಮ್ಮಾ ಜಿ, ಕುಮಾರಸ್ವಾಮಿ ತಂಗರಾಜ್, ಮಹೇಂದ್ರ ಕುಮಾರ್ ಮಿಶ್ರಾ, ಮೀರ್ ಹಾಜಿಭಾಯಿ ಕಾಸಂಭಾಯಿ, ಮೋಹನ್ ನಗರ್, ನರೇಶ್ ಚಂದ್ರ ದೇವ್ ವರ್ಮಾ, ನಿಲೇಶ್ ವಿನೋದಚಂದ್ರ ಮಂಡಲವಾಲಾ, ನೂರುದ್ದೀನ್ ಅಹ್ಮದ್, ಓದುವಾರ್ ತಿರುತಾನಿ ಸ್ವಾಮಿನಾಥನ್, ಪದ್ಮಾ ಗುರ್ಮೆಟ್, ಪೊಖಿಲಾ ಲೇಕ್ತೆಪಿ, ಪುನ್ನಿಯಾಮೂರ್ತಿ ನಟೇಶನ್, ಆರ್. ಕೃಷ್ಣನ್, ರಘುಪತ್ ಸಿಂಗ್, ರಘುವೀರ್ ತುಕಾರಾಂ ಖೇಡ್ಕರ್, ರಾಜಸ್ಥಾಪತಿ ಕಾಳಿಯಪ್ಪ ಗೌಂಡರ್, ರಾಮಾ ರೆಡ್ಡಿ ಮಾಮಿಡಿ, ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ, ಎಸ್. ಜಿ. ಸುಶೀಲಾ ಅಮ್ಮ, ಸಾಂಗ್ಯುಸಾಂಗ್ ಎಸ್. ಪೊಂಗೆನರ್, ಶಫಿ ಶೌಕ್, ಶ್ರೀರಂಗ್ ದೇವಬಾ ಲಾಡ್, ಶ್ಯಾಮ್ ಸುಂದರ್, ಸಿಮಾಂಚಲ್ ಪಾತ್ರೋ, ಸುರೇಶ್ ಹನಗವಾಡಿ, ತಗಾ ರಾಮ್ ಭೀಲ್, ತೇಚಿ ಗುಬಿನ್, ತಿರುವಾರೂರು ಭಕ್ತವತ್ಸಲಂ, ವಿಶ್ವ ಬಂಧು, ಯುಮ್ನಾಮ್ ಜಾತ್ರಾ ಸಿಂಗ್ ಅವರಿಗೆ ಸಂದಿದೆ.
ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸುವ ಪದ್ಮ ಪ್ರಶಸ್ತಿಗಳು (ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ) ಭಾರತದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ. 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳನ್ನು ಕಲೆ, ಸಾಹಿತ್ಯ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಸರ್ಕಾರಿ ನೌಕರರು (ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ) ಈ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.

