ಖರ್ಗೆ, ವೇಣುಗೋಪಾಲ್ ಅವರೊಂದಿಗೆ  ಶರ್ಮಿಳಾ ರೆಡ್ಡಿ ಚರ್ಚೆ
x

ಖರ್ಗೆ, ವೇಣುಗೋಪಾಲ್ ಅವರೊಂದಿಗೆ ಶರ್ಮಿಳಾ ರೆಡ್ಡಿ ಚರ್ಚೆ


ನವದೆಹಲಿ, ಜೂನ್ 18- ಚುನಾವಣೆಯಲ್ಲಿ ಸೋಲಿನ ನಂತರ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ನ್ನು ಪುನರುಜ್ಜೀವನಗೊಳಿಸುವ ಸಂಬಂಧ ಪಕ್ಷದ ಕೇಂದ್ರ ನಾಯಕತ್ವಕ್ಕೆ ರಾಜ್ಯಾಧ್ಯಕ್ಷೆ ವೈ.ಎಸ್. ಶರ್ಮಿಳಾ ರೆಡ್ಡಿ ಅವರು ಮಂಗಳವಾರ ತಮ್ಮ ಮಾರ್ಗಸೂಚಿಯನ್ನು ವಿವರಿಸಿದರು.

ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಪಕ್ಷದ ಸಂಘಟನಾ ಯಂತ್ರವನ್ನು ಬಲಪಡಿಸುವ ಮತ್ತು ರಾಜ್ಯದಲ್ಲಿ ಕಳೆದುಹೋದ ರಾಜಕೀಯ ಸ್ಥಾನವನ್ನು ಮರಳಿ ಪಡೆಯುವ ಯೋಜನೆಗಳ ಬಗ್ಗೆ ತಿಳಿಸಿದರು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಶೂನ್ಯ ಸಾಧನೆ ಮಾಡಿದೆ.

ಖರ್ಗೆ ಮತ್ತು ವೇಣುಗೋಪಾಲ್ ಅವರು ಮೌಲ್ಯಯುತ ಸಲಹೆಗಳನ್ನು ನೀಡಿದರು ಮತ್ತು ಪಕ್ಷವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು ಎಂದು ಶರ್ಮಿಳಾ ಹೇಳಿದರು. ʻಪಕ್ಷ ಹೆಚ್ಚಿನ ಶಕ್ತಿ ಮತ್ತು ಮಹತ್ವವನ್ನು ಪಡೆದುಕೊಳ್ಳುತ್ತದೆ. ಜನರ ಧ್ವನಿ ಮತ್ತು ಅಸ್ತ್ರವಾಗಲಿದೆ ಎಂದು ನಾಯಕರಿಬ್ಬರು ವಿಶ್ವಾಸ ವ್ಯಕ್ತಪಡಿಸಿದರು,ʼ ಎಂದು ಸಭೆ ನಂತರ ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ನ ನೀರಸ ಪ್ರದರ್ಶನದಿಂದಾಗಿ ತನ್ನ ನೆಲೆಯನ್ನು ಮರಳಿ ಪಡೆಯಲು ಹೊಸ ತಂತ್ರವನ್ನು ರೂಪಿಸಲು ಪ್ರೇರೇಪಿಸಿದೆ. ಪಕ್ಷ ದ ಪುನರುಜ್ಜೀವನದ ಜವಾಬ್ದಾರಿಯನ್ನು ಶರ್ಮಿಳಾ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕೇಂದ್ರ ನಾಯಕತ್ವವನ್ನು ಭೇಟಿ ಮಾಡಿದ್ದರು.

Read More
Next Story