
ಶರದ್ ಪವಾರ್ ಬಣ 'ಎನ್‌ಸಿಪಿ-ಶರಶ್ಚಂದ್ರ ಪವಾರ್' ಬಣ: ಎಸ್‌ಸಿ
ನವದೆಹಲಿ, ಫೆ.19- ಶರದ್ ಪವಾರ್ ನೇತೃತ್ವದ ಗುಂಪಿಗೆ ಚುನಾವಣೆ ಆಯೋಗ ನೀಡಿರುವ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರಶ್ಚಂದ್ರ ಪವಾರ್' ಎಂಬ ಹೆಸರು ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ನೇತೃತ್ವದ ಗುಂಪನ್ನುನೈಜ ಎನ್‌ಸಿಪಿ ಎಂದು ಗುರುತಿಸುವ ಚುನಾವಣಾ ಆಯೋಗದ ಫೆಬ್ರವರಿ 7 ರ ಆದೇಶದ ವಿರುದ್ಧ ಶರದ್ ಪವಾರ್ ಅವರ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಅಜಿತ್ ಪವಾರ್ ನೇತೃತ್ವದ ಬಣದ ಪ್ರತಿಕ್ರಿಯೆ ಕೇಳಿದೆ.
ಶರದ್ ಪವಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಚುನಾವಣೆ ಆಯೋಗದ ಫೆ.7 ರ ಆದೇಶವು ಮಧ್ಯಂತರ ಆದೇಶ ಎಂದು ವಾದಿಸಿದರು. ʻಫೆ.26 ರಿಂದ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದ್ದು, ನಮ್ಮ ಗುಂಪು ಯಾವುದೇ ಹೆಸರು ಅಥವಾ ಚಿಹ್ನೆ ಇಲ್ಲದೆ ಇರುತ್ತದೆʼ ಎಂದು ಅವರು ಹೇಳಿದರು.
ಪವಾರ್ ಗುಂಪಿನ ಶಾಸಕರು ವಿಪ್ ಉಲ್ಲಂಘಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಮನವಿಯ ತುರ್ತು ವಿಚಾರಣೆಯನ್ನು ಕೋರಿದ್ದರು. ಫೆಬ್ರವರಿ 15 ರಂದು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರ ಆದೇಶವನ್ನು ಪರಿಗಣಿಸಿ ಅವರು ತುರ್ತು ವಿಚಾರಣೆಯನ್ನು ಕೋರಿದ್ದರು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ನಿಜವಾದ ಎನ್‌ಸಿಪಿ ಮತ್ತು ಆಂತರಿಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಸಂವಿಧಾನದಲ್ಲಿರುವ ಪಕ್ಷಾಂತರ ವಿರೋಧಿ ನಿಯಮಗಳನ್ನು ಬಳಸಲಾಗುವುದಿಲ್ಲ ಎಂದು ಫೆಬ್ರವರಿ 15 ರಂದು ಸ್ಪೀಕರ್ ನಾರ್ವೇಕರ್ ಹೇಳಿದ್ದರು. ಆದರೆ,
ಫೆ.7 ರಂದು ಚುನಾವಣಾ ಆಯೋಗವು ಅಜಿತ್ ಪವಾರ್ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿ, 'ಗಡಿಯಾರ' ಚಿಹ್ನೆಯನ್ನು ಗುಂಪಿಗೆ ನೀಡಿತು. ಫೆಬ್ರವರಿ 20 ರಂದು ಮರಾಠ ಕೋಟಾ ಕುರಿತು ಚರ್ಚಿಸಲು ಒಂದು ದಿನದ ವಿಶೇಷ ವಿಧಾನಸಭೆ ಅಧಿವೇಶನ ನಡೆಯಲಿದೆ.