NEET-UG 2024| ಪರೀಕ್ಷೆ ರದ್ದಿನಿಂದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ಪರಿಣಾಮ: ಕೇಂದ್ರ
x

NEET-UG 2024| ಪರೀಕ್ಷೆ ರದ್ದಿನಿಂದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ಪರಿಣಾಮ: ಕೇಂದ್ರ


ಹೊಸದಿಲ್ಲಿ, ಜು.5- ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸುವುದು ತಾರ್ಕಿಕವಲ್ಲ.ಇದರಿಂದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಗಂಭೀರ ಹಾನಿಯಾಗಲಿದೆ ಎಂದು ಕೇಂದ್ರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು ಅಭ್ಯರ್ಥಿಗಳು, ಕೋಚಿಂಗ್ ಸಂಸ್ಥೆಗಳು ಮತ್ತು ನೀಟ್-ಯುಜಿ ಆಕಾಂಕ್ಷಿಗಳ ಪೋಷಕರು ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸುವಂತೆ ಸರ್ಕಾರ ಸಿಬಿಐಗೆ ಹೇಳಿದೆ ಎಂದು ತಿಳಿಸಿದೆ.

ʻದೇಶಾದ್ಯಂತ ನಡೆದ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಗೌಪ್ಯತೆಯ ಉಲ್ಲಂಘನೆಗೆ ಪುರಾವೆಗಳು ಇಲ್ಲದೆ ಇರುವುದರಿಂದ, ಸಂಪೂರ್ಣ ಪರೀಕ್ಷೆಯನ್ನು ಮತ್ತು ಈಗಾಗಲೇ ಘೋಷಿಸಿದ ಫಲಿತಾಂಶಗಳನ್ನು ರದ್ದುಗೊಳಿಸುವುದು ತರ್ಕಬದ್ಧವಲ್ಲ,ʼ ಎಂದು ಕೇಂದ್ರ ಹೇಳಿದೆ.

ʻಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದರೆ, ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹಾನಿಯಾಗಲಿದೆ. ಅನ್ಯಾಯದ ಮಾರ್ಗ ಬಳಸದೆ ಪರೀಕ್ಷೆ ಬರೆದವರ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ,ʼ ಎಂದು ಹೇಳಿದೆ.

ಮೇ 5 ರಂದು ನಡೆದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದ್ದು,ಹೊಸದಾಗಿ ಪರೀಕ್ಷೆ ನಡೆಸುವಂತೆ ನಿರ್ದೇಶನ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಜುಲೈ 8 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

Read More
Next Story