ನಿವ್ವಳ ಸಾಲದ ಮೇಲೆ ಮಿತಿ ಹೇರಿಕೆ:  ಐವರು ನ್ಯಾಯಾಧೀಶರ ಪೀಠ ರಚನೆಗೆ ಮನವಿ
x

ನಿವ್ವಳ ಸಾಲದ ಮೇಲೆ ಮಿತಿ ಹೇರಿಕೆ: ಐವರು ನ್ಯಾಯಾಧೀಶರ ಪೀಠ ರಚನೆಗೆ ಮನವಿ

ಏಪ್ರಿಲ್ 1 ರಂದು ವಿಷಯವನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಿದ್ದರೂ, ನ್ಯಾಯಾಲಯದ ಅಧಿಕಾರಿ ಪೀಠದ ಸ್ಥಾಪನೆ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠಕ್ಕೆ ತಿಳಿಸಿದರು.


ಹೊಸದಿಲ್ಲಿ: ನಿವ್ವಳ ಸಾಲದ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿರುವ ವಿಷಯದ ವಿಚಾರಣೆಗೆ ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು ಶೀಘ್ರವಾಗಿ ರಚಿಸುವಂತೆ ಕೋರಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮನವಿ ಸಲ್ಲಿಸಿದೆ.

ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ಮತ್ತು ಇನ್ನಿತರ ಮೂಲಗಳಿಂದ ಸಾಲ ಎತ್ತುವ ʻಜಾರಿಗೊಳಿಸಬಹುದಾದ ಹಕ್ಕುʼ ಹೊಂದಿವೆಯೇ ಎಂಬ ಪ್ರಶ್ನೆಯನ್ನು ಕೇರಳ ಸರ್ಕಾರ ಎತ್ತಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಎದುರು ಕೇರಳ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ʻಏಪ್ರಿಲ್ 1 ರಂದು ಈ ವಿಷಯವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದೆ. ಪೀಠ ರಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಧಿಕಾರಿ ಇಮೇಲ್ ಕಳುಹಿಸಿಲ್ಲ,ʼ ಎಂದು ಹೇಳಿದರು.

ʻನಾನು ಅದನ್ನು ಪರಿಶೀಲಿಸುತ್ತೇನೆ,ʼ ಎಂದು ಸಿಜೆಐ ಹೇಳಿದರು.

ಏಪ್ರಿಲ್ 1 ರಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ವಿಷಯವನ್ನು ಐದು ನ್ಯಾಯಾಧೀಶ ರ ಸಂವಿಧಾನ ಪೀಠಕ್ಕೆ ಉಲ್ಲೇಖಿಸಿತ್ತು. ಪೀಠವನ್ನು ಸಿಜೆಐ ಅವರು ಆಡಳಿತಾತ್ಮಕ ಆದೇಶದ ಮೂಲಕ ರಚಿಸಬಹುದು.

ಆದರೆ, ಕೇರಳಕ್ಕೆ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು; ಮಧ್ಯಂತರ ಅರ್ಜಿ ಬಾಕಿಯಿರುವಾಗ ರಾಜ್ಯವು ʻಗಣನೀಯ ಪರಿಹಾರʼ ಪಡೆದುಕೊಂಡಿದೆ ಎಂದು ಹೇಳಿತ್ತು.

ಪೀಠವು ಸಂವಿಧಾನದ 293 ನೇ ವಿಧಿಯನ್ನು ಉಲ್ಲೇಖಿಸಿದ್ದು, ಇದು ರಾಜ್ಯಗಳು ಸಾಲ ಪಡೆಯುವ ಕುರಿತು ಇದೆ. ಈ ನಿಬಂಧನೆಯು ಇದುವರೆಗೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ಅಧಿಕೃತ ವ್ಯಾಖ್ಯಾನಕ್ಕೆ ಒಳಪಟ್ಟಿಲ್ಲ ಎಂದು ಪೀಠ ಹೇಳಿತ್ತು.

ʻಸಂವಿಧಾನದ 293 ನೇ ವಿಧಿಯು ಈ ನ್ಯಾಯಾಲಯದಿಂದ ಇದುವರೆಗೆ ಯಾವುದೇ ಅಧಿಕೃತ ವ್ಯಾಖ್ಯಾನಕ್ಕೆ ಒಳಪಟ್ಟಿಲ್ಲವಾದ್ದರಿಂದ, ನಮ್ಮ ಪ್ರಕಾರ, ಮೇಲಿನ ಪ್ರಶ್ನೆಗಳು ಸಂವಿಧಾನದ 145 (3) ನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುತ್ತವೆ. ಆದ್ದರಿಂದ, ಐವರು ನ್ಯಾಯಾಧೀಶರ ಪೀಠಕ್ಕೆ ಈ ಪ್ರಶ್ನೆಗಳನ್ನುಸಲ್ಲಿಸುವುದು ಸೂಕ್ತ,ʼ ಎಂದು ಪೀಠ ಹೇಳಿದೆ.

Read More
Next Story