ಮುಸ್ಲಿಂ ಮಹಿಳೆಯರು ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯಬಹುದು: ಸುಪ್ರೀಂ
CrPC ಯ ಸೆಕ್ಷನ್ 125 ಅಡಿಯಲ್ಲಿ ಶಾ ಬಾನೋ ಕೂಡ ಅನೇಕ ವರ್ಷಗಳ ಹಿಂದೆ ಜೀವನಾಂಶವನ್ನು ಕೋರಿ ದ್ದರು. ಇದು ಧರ್ಮವನ್ನು ಲೆಕ್ಕಿಸದೆ ಎಲ್ಲಾ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಸ್ಲಿಂ ಮಹಿಳೆ ತನ್ನ ವಿಚ್ಛೇದಿತ ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ವಿಭಾಗ 125 ರ ಅಡಿಯಲ್ಲಿ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯ ಬಹುದು ಎಂದು ಸುಪ್ರೀಂ ಕೋರ್ಟ್ ಜುಲೈ 10ರಂದು ತೀರ್ಪು ನೀಡಿದೆ. ಇದು ಧರ್ಮವನ್ನು ಲೆಕ್ಕಿಸದೆ ಎಲ್ಲ ವಿವಾಹಿತ ಮಹಿಳೆಯರಿಗೆ ಅನ್ವಯಿಸುತ್ತದೆ.
ಅಷ್ಟೇ ಅಲ್ಲದೆ, ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ 1986, ಜಾತ್ಯತೀತ ಕಾನೂನಿನ ಮೇಲೆ ಮೇಲುಗೈ ಸಾಧಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪತ್ನಿಗೆ ಜೀವನಾಂಶ ನೀಡುವಂತೆ ತೀರ್ಪು ನೀಡಿದ್ದ ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ಮೊಹಮ್ಮದ್ ಅಬ್ದುಲ್ ಸಮದ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ವಜಾಗೊಳಿಸಿತು.
ಕೌಟುಂಬಿಕ ನ್ಯಾಯಾಲಯ ನೀಡಿದ್ದ ಜೀವನಾಂಶ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿತ್ತು. ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು.
ಸಿಆರ್‌ಪಿಸಿಯ ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶಕ್ಕೆ ಅರ್ಹರಲ್ಲ. ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ 1986 ರ ನಿಬಂಧನೆಗಳನ್ನು ಅನ್ವಯಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.
ಎಲ್ಲ ವಿವಾಹಿತ ಮಹಿಳೆಯರಿಗೂ ಅನ್ವಯ
ʻನಾವು ಈ ಮೂಲಕ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ. ಸೆಕ್ಷನ್ 125 ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ; ಕೇವಲ ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲʼ ಎಂದು ತೀರ್ಪು ಪ್ರಕಟಿಸಿದ ನ್ಯಾ.ನಾಗರತ್ನ ಹೇಳಿದರು.
ʻಜೀವನಾಂಶ ನೀಡುವ ಕಾನೂನು ಎಲ್ಲ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ,ʼ ಎಂದು ಪೀಠ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ. ನ್ಯಾ.ನಾಗರತ್ನ ಮತ್ತು ನ್ಯಾ.ಮಸಿಹ್ ಅವರು ಪ್ರತ್ಯೇಕವಾದ, ಆದರೆ, ಏಕ ರೀತಿಯ ತೀರ್ಪು ನೀಡಿದರು. ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ 1986, ಜಾತ್ಯತೀತ ಕಾನೂನಿನ ಮೇಲೆ ಮೇಲುಗೈ ಸಾಧಿಸುವುದಿಲ್ಲ ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.
ಜೀವನಾಂಶ ದಾನವಲ್ಲ
ಅದು ವಿವಾಹಿತ ಮಹಿಳೆಯರ ಹಕ್ಕು. ಅವರ ಧರ್ಮವನ್ನು ಲೆಕ್ಕಿಸದೆ ಎಲ್ಲ ವಿವಾಹಿತ ಮಹಿಳೆಯರಿಗೆ ಅನ್ವಯಿಸು ತ್ತದೆ ಎಂದು ಪೀಠ ಹೇಳಿದೆ.
ಶಾ ಬಾನೋ ಪ್ರಕರಣ: ಅರ್ಜಿದಾರ ಪತಿಯ ವಾದದ ಪ್ರಕಾರ, ʻಮೊಹಮ್ಮದ್ ಅಹ್ಮದ್ ಖಾನ್ ವಿ/ಎಸ್ ಶಾ ಬಾನೋ ಬೇಗಂ ಪ್ರಕರಣದಲ್ಲಿ ವಿಚ್ಛೇದನಕ್ಕೆ ಕಾರಣ ಸಂಬಂಧಿಸಿರುವುದಿಲ್ಲ ಮತ್ತು ಪ್ರತಿಯೊಬ್ಬ ಮುಸ್ಲಿಂ ಮಹಿಳೆ ಸಿಆರ್ಪಿಸಿ ಸೆಕ್ಷನ್ 125 ರ ಅರ್ಜಿ ನಿರ್ವಹಿಸಲು ಅರ್ಹರಿರು ತ್ತಾರೆ. ಈ ತೀರ್ಪು ವಜಾಗೊಳಿಸಲು ಮುಸ್ಲಿಂ ಮಹಿಳೆಯರ (ವಿಚ್ಛೇದನ ಹಕ್ಕುಗಳ ರಕ್ಷಣೆ) ಕಾಯಿದೆ 1986ನ್ನು ಜಾರಿಗೊಳಿಸಲಾಯಿತು ಮತ್ತು ಅದು ಸುಪ್ರೀಂ ಕೋರ್ಟ್ ತೀರ್ಪನ್ನು ಕ್ರೋಡೀಕರಿಸಿತುʼ.
ಕಾಯಿದೆ ಕ್ರೋಡೀಕರಣಗೊಂಡಿದೆ ಮತ್ತು ಅದರ ನಿಬಂಧನೆಗಳು ಸೆಕ್ಷನ್ 125 ಸಿಆರ್‌ಪಿಸಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಉದ್ದೇಶ ವನ್ನು ಹೊಂದಿದೆ ಎಂದು ಪತಿಯನ್ನು ಪ್ರತಿನಿಧಿಸಿದ ವಕೀಲರು ಹೇಳಿದರು.
ʻಸಾಮಾನ್ಯ ಕಾನೂನು (ಸಿಆರ್‌ಪಿಸಿ) ಮೇಲೆ ವಿಶೇಷ ಕಾನೂನು ಮೇಲುಗೈ ಸಾಧಿಸುತ್ತದೆ ಎಂಬುದು ಕಾನೂನಿನ ಒಂದು ಸ್ಥಿರ ನಿಲುವು. ಕಾಯಿದೆಯ ಭಾಷೆ ಸ್ಪಷ್ಟವಾಗಿರುವುದರಿಂದ, ನ್ಯಾಯಾಲಯ ಅದನ್ನು ಮೀರಿ ಹೋಗಲು ಯಾವುದೇ ಕಾರಣವಿಲ್ಲ. ಏನನ್ನು ಜಾರಿಗೆ ತರಬೇಕು ಎಂದು ಕಾಯಿದೆಯಲ್ಲಿ ಸರಳವಾಗಿ ತಿಳಿಸಲಾಗಿದೆ,ʼ ಎಂದರು.
ವಿಭಾಗ 5
ಸೆಕ್ಷನ್ 5 ವಿಚ್ಛೇದಿತ ದಂಪತಿಗಳಿಗೆ ಕಾಯಿದೆಯಿಂದ ನಿಯಂತ್ರಿಸಲ್ಪಡದಿರಲು ಒಂದು ಆಯ್ಕೆಯನ್ನು ನೀಡುತ್ತದೆ. ಮುಸ್ಲಿಂ ಪತ್ನಿ ಎರಡೂ ಪರಿಹಾರಗಳನ್ನು ಆಶ್ರಯಿಸಲು ಸಾಧ್ಯವಿಲ್ಲ ಎಂದು ಇದು ತೋರಿಸುತ್ತದೆ.
ಆದರೆ, ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ಗೌರವ್ ಅಗರ್ವಾಲ್ ಅವರು ಈ ಕಾಯಿದೆಯು ಕೇವಲ ಮುಸ್ಲಿಂ ವೈಯಕ್ತಿಕ ಕಾನೂನನ್ನು ದೃಢೀಕರಿಸುತ್ತದೆ ಎಂದು ಹೇಳಿದರು. ʻಇದು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಇದ್ದತ್ ಅವಧಿಯನ್ನು ಮೀರಿ ಜೀವನಾಂಶದ ಅರ್ಹತೆಯನ್ನು ವಿಸ್ತರಿಸುತ್ತದೆ. ಆದರೆ, ಸೆಕ್ಷನ್ 125 ಸಿಆರ್‌ಪಿಸಿ ಅಡಿಯಲ್ಲಿ ಅವರಿಗೆ ಲಭ್ಯವಿರುವ ಪರಿಹಾರವನ್ನು ಪರಿಗಣಿಸುವುದಿಲ್ಲ. ಏಕೆಂದರೆ, ನಂತರದ್ದರ ಉದ್ದೇಶ ವಿಭಿನ್ನವಾಗಿದೆ,ʼ ಎಂದು ಅವರು ಹೇಳಿದರು.
ಕಾಯಿದೆಯ ಸೆಕ್ಷನ್ 5 ರ ಮೇಲೆ ಅರ್ಜಿದಾರರ ಅವಲಂಬನೆ ತಪ್ಪು. ಏಕೆಂದರೆ, ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದಾಗ, ಆ ನಿಬಂಧನೆಯು ಕಾರ್ಯರೂಪಕ್ಕೆ ಬರುತ್ತದೆ. ಪ್ರಸ್ತುತ ಪ್ರಕರಣದಲ್ಲಿ, ಪ್ರತಿವಾದಿ ಪತ್ನಿ ಸೆಕ್ಷನ್ 125 ಸಿಆರ್ ಪಿಸಿ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಪೀಠದ ಅವಲೋಕನ:
ಇದಕ್ಕೆ 1986 ರ ಕಾಯಿದೆಯು ಅಡ್ಡಿಯಾಗುವುದಿಲ್ಲ ಎಂದು ನ್ಯಾ. ಮಸಿಹ್ ಅವರು ತಮ್ಮ ಅವಲೋಕನದಲ್ಲಿ ಹೇಳಿದರು.ʻಇದು 125 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಥವಾ ಅರ್ಜಿಯನ್ನು ಸ್ಥಳಾಂತರಿಸಿದ ವ್ಯಕ್ತಿಯ ಆಯ್ಕೆ.1986ರ ಕಾಯಿದೆಯಡಿಯಲ್ಲಿ ಯಾವುದೇ ಶಾಸನಬದ್ಧ ನಿಬಂಧನೆಯನ್ನು ಒದಗಿಸಿಲ್ಲ ಎಂದು ಹೇಳುತ್ತದೆ. 125 ವಿಭಾಗವನ್ನು ನಿರ್ವಹಿಸುವುದಿಲ್ಲʼ ಎಂದರು. ಇದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿ ನಾಗರತ್ನ, ʻ1986ರ ಕಾನೂನಿನಲ್ಲಿ ಒಂದು ಪರಿಹಾರವನ್ನು ಇನ್ನೊಂದರ ಪರವಾಗಿ ತಡೆಯುವ ಯಾವುದೇ ಅಂಶವಿಲ್ಲʼ ಎಂದು ಹೇಳಿದರು.
ಮುಸ್ಲಿಂ ಮಹಿಳೆಯ ಇಂತಹ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ಸಂಸತ್ತಿಗೆ ಇದ್ದಲ್ಲಿ, ಸಂಸತ್ತು ಆ ಬಗ್ಗೆ ನಿರ್ದಿಷ್ಟಭಾಷೆಯಲ್ಲಿ ಮಾತನಾಡಬೇಕೆಂದು ನಿರೀಕ್ಷಿಸುವುದು ಸಮಂಜಸ ಎಂದು ಪೀಠ ಹೇಳಿದೆ. ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯರ ಪರವಾಗಿ ಆದೇಶಗಳು ಜಾರಿಗೊಂಡಿರಬೇಕು. ಸಂದೇಶ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿದೆ.ಸಂಹಿತೆಯ ಸೆಕ್ಷನ್ 125 ಮತ್ತು ಸೆಕ್ಷನ್ 3 ರ ಅಡಿಯಲ್ಲಿ ಎರಡೂ ಹಕ್ಕುಗಳನ್ನು ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗಿದೆ ಎಂದು ಹೇಳಿದರು.
1986 ರ ಕಾಯಿದೆಯ ನಿಬಂಧನೆಗಳು ಸೆಕ್ಷನ್ 125 ಸಿಆರ್‌ಪಿಸಿ ಅಡಿಯಲ್ಲಿ ಮುಸ್ಲಿಂ ಮಹಿಳೆಯರು ಜೀವನಾಂಶದ ಹಕ್ಕುಗಳನ್ನು ಸಲ್ಲಿಸು ವುದನ್ನು ನಿರ್ಬಂಧಿಸುವ ಸಂಸತ್ತಿನ ಉದ್ದೇಶವನ್ನು ಸೂಚಿಸುತ್ತದೆ ಎಂದು ಅರ್ಜಿದಾರರ ಸಲ್ಲಿಕೆಗೆ ಪ್ರತಿಕ್ರಿಯಿಸಿದ ಪೀಠ, ʻಇದು ಅಸಂವಿಧಾನಿಕʼ ಎಂದು ಹೇಳಿದೆ.
ವಿಚ್ಛೇದಿತ ಮುಸ್ಲಿಂ ಮಹಿಳೆಯರು ಇನ್ನು ಮುಂದೆ ಕಾಯ್ದೆಯ ಪ್ರಾರಂಭದ ದಿನಾಂಕದಿಂದ ಸೆಕ್ಷನ್ 125 ಸಿಆರ್‌ಪಿಸಿ ಅಡಿಯಲ್ಲಿ ಅರ್ಜಿ ಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಸಂಸತ್ತು ಹೇಳಬೇಕೆಂದುಕೊಂಡಿದ್ದರೆ, ಸ್ಪಷ್ಟವಾಗಿ ಕಾಯಿದೆಗೆ ವ್ಯತಿರಿಕ್ತ ಪರಿಣಾಮ ನೀಡಬಹುದಿತ್ತು ಎಂದು ಪೀಠ ಟೀಕಿಸಿತು. ನಾಗರತ್ನ ಅವರನ್ನು ಉಲ್ಲೇಖಿಸಬಹುದಾದರೆ,ʼ ಅಂತಹ ವಿಷಯದ ಅನುಪಸ್ಥಿತಿಯಲ್ಲಿ ನಾವು ಕಾಯಿದೆಗೆ ನಿರ್ಬಂಧವನ್ನು ಸೇರಿಸಬಹುದೇ? ಅದೇ ವಿಷಯ,ʼ.