
ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್.
ಉದಯನಿಧಿ ವಿರುದ್ಧ ಹೊಸ ಎಫ್ಐಆರ್‌ಗಳನ್ನು ದಾಖಲಿಸಬಾರದು: ಸುಪ್ರೀಂ ಕೋರ್ಟ್
ಮಹಾರಾಷ್ಟ್ರ, ಬಿಹಾರ, ಜಮ್ಮು ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸ್ಟಾಲಿನ್ ಅವರ ಹೇಳಿಕೆಯ ವಿರುದ್ಧ ಎಫ್ಐಆರ್‌ಗಳು ದಾಖಲಾಗಿವೆ.
ತಮಿಳುನಾಡು ಉಪಮುಖ್ಯಮಂತ್ರಿ ಎಂ. ಉದಯನಿಧಿ ಸ್ಟಾಲಿನ್ ಅವರ "ಸನಾತನ ಧರ್ಮ ನಿರ್ಮೂಲನೆ" ಹೇಳಿಕೆಯ ಬಗ್ಗೆ ಯಾವುದೇ ಹೊಸ ಎಫ್ಐಆರ್‌ಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, ಸ್ಟಾಲಿನ್ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಅವರ ಮೇಲೆ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಈ ಹಿಂದಿನ ತಾತ್ಕಾಲಿಕ ಆದೇಶವನ್ನೂ ವಿಸ್ತರಿಸಿದೆ.
2023ರ ಸೆಪ್ಟೆಂಬರ್‌ನಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಮಾತನಾಡಿದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, "ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲ ಮಾಡಬೇಕು" ಎಂದು ಹೇಳಿದ್ದರು. ಅಲ್ಲದೆ, ಸನಾತನ ಧರ್ಮ’ವನ್ನು ಕೊರೊನಾವೈರಸ್, ಮಲೇರಿಯಾ ಮತ್ತು ಡೆಂಗೆಗೆ ಹೋಲಿಸಿ, ಅದನ್ನು ನಾಶಪಡಿಸಬೇಕು ಎಂದು ಕರೆಕೊಟ್ಟಿದ್ದರು.
ಮಹಾರಾಷ್ಟ್ರ, ಬಿಹಾರ, ಜಮ್ಮು ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸ್ಟಾಲಿನ್ ಅವರ ಹೇಳಿಕೆಯ ವಿರುದ್ಧ ಎಫ್ಐಆರ್‌ಗಳು ದಾಖಲಾಗಿವೆ.