Ranveer Allahbadia : ನಿನ್ನ ಮನಸ್ಸಿನಲ್ಲಿ ಕೊಳಕು ತುಂಬಿದೆ; ರಣವೀರ್ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್​
x
ರಣವೀರ್ ಅಲಹಾಬಾದಿಯಾ.

Ranveer Allahbadia : ನಿನ್ನ ಮನಸ್ಸಿನಲ್ಲಿ ಕೊಳಕು ತುಂಬಿದೆ; ರಣವೀರ್ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್​

Ranveer Allahbadia ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್‌ ಕೋಟಿಸ್ವರ್ ಸಿಂಗ್ ಅವರಿದ್ದ ನ್ಯಾಯಪೀಠ, ''ಇದು ಅಶ್ಲೀಲತೆ ಅಲ್ಲವಾದರೆ, ಇನ್ನೇನು?" ಎಂದು ಪ್ರಶ್ನಿಸಿದರು.


ಯೂಟ್ಯೂಬ್ ಶೋ ಇಂಡಿಯಾ ಗಾಟ್​ ಲ್ಯಾಟೆಂಡ್​ನಲ್ಲಿ ನೀಡಿದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಯೂಟ್ಯೂಬರ್​ ರಣವೀರ್ ಅಲಹಬಾದಿಯಾ (Ranveer Allahbadia) ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಆತನನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಆದೇಶಿದೆ. ಆತನ ಮೇಲೆ ಹೊಸ ಎಫ್‌ಐಆರ್ ದಾಖಲು ಮಾಡದಿರಲೂ ಆದೇಶ ನೀಡಿದೆ. ಆದರೆ, ಕಾರ್ಯಕ್ರಮದಲ್ಲಿ ಆತ ನೀಡಿರುವ ಹೇಳಿಕೆಗಳಿಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಲಯ, ಮೌಖಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಏನನ್ನು ಬೇಕಾದರೂ ಹೇಳುವುದು ತಪ್ಪು ಎಂದು ಹೇಳಿತಲ್ಲ, ಆತನ ಮನಸ್ಸಿನಲ್ಲಿ ಕೊಳಕು ತುಂಬಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್‌ ಕೋಟಿಸ್ವರ್ ಸಿಂಗ್ ಅವರಿದ್ದ ನ್ಯಾಯಪೀಠ, ''ಇದು ಅಶ್ಲೀಲತೆ ಅಲ್ಲವಾದರೆ, ಇನ್ನೇನು?" ಎಂದು ಪ್ರಶ್ನಿಸಿ, ಈ ಮಾತುಗಳನ್ನು ಕೇಳಿದರೆ ಪೋಷಕರು, ಸಹೋದರಿಯರು, ಸಂಪೂರ್ಣ ಸಮಾಜವೇ ಲಜ್ಜೆ ಪಡಬೇಕು,'' ಎಂದು ಕಿಡಿಕಾರಿದೆ.

ಹಿರಿಯ ವಕೀಲ ಅಭಿನವ ಚಂದ್ರಚೂಡ್ ಅಲಹಬಾದಿಯ ಪರ ವಾದ ಮಂಡಿಸಿದ್ದು,, ಆತನಿಗೆ ಜೀವ ಬೆದರಿಕೆಗಳು ಬರುತ್ತಿರುವ ಆ ಕಾರಣ ಆತನನ್ನು ಬಂಧಿಸಬಾರದು ಎಂದು ಮನವಿ ಮಾಡಿದ್ದರು. ಸುಪ್ರೀಂ ಕೋರ್ಟ್ ಇದನ್ನು ಪರಿಗಣಿಸಿ ಮುಂಬೈ ಮತ್ತು ಗುವಾಹಟಿ ಪೊಲೀಸರು ದಾಖಲಿಸದ್ದ ಎಫ್‌ಐಆರ್‌ಗಳಲ್ಲಿ ಆತನಿಗೆ ರಕ್ಷಣೆ ನೀಡಲು ಒಪ್ಪಿದೆ.

ಅಲಹಬಾದಿಯಾ ವಿರುದ್ಧ ಹೊಸ ಎಫ್​ಐಆರ್​ ದಾಖಲಿಸಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಹೊಸ ಎಫ್‌ಐಆರ್ ದಾಖಲಾದರೆ ಬಂಧಿಸಬಾರದು ಎಂದು ಕೂಡಾ ಆದೇಶಿಸಿದೆ.

ಎಲ್ಲ ಯೂಟ್ಯೂಬರ್​ಗಳ ಮೇಲೆ ಕೇಸ್​

ಅಸ್ಸಾಂ ಪೊಲೀಸರು ಮತ್ತು ಮಹಾರಾಷ್ಟ್ರ ಸೈಬರ್ ಪೊಲೀಸ್ ಅಲಹಬಾದಿಯಾ, ರೈನಾ, ಆಶಿಷ್ ಚಂಚಲಾನಿ, ಅಪೂರ್ವ ಮುಖಿಜಾ ಮತ್ತು ಇತರರ ವಿರುದ್ಧ ಅಶ್ಲೀಲ ವಿಷಯ ಪ್ರಸಾರ ಆರೋಪದಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಈ ಶೋ ನಿರ್ಬಂಧಿತ ಪ್ರೇಕ್ಷಕರಿಗಾಗಿ ನಿರ್ಮಾಣಗೊಂಡಿದ್ದರೂ ಅದರ ಕ್ಲಿಪ್‌ಗಳು ವೈರಲ್ ಆಗಿ ಟೀಕೆಗಳು ಕೇಳಿ ಬಂದಿದ್ದವು.

ವಿರೋಧದ ಬಳಿಕ ಅಲಹಬಾದಿಯಾ ಸಾರ್ವಜನಿಕ ಕ್ಷಮೆ ಕೇಳಿದ್ದ. ಈ ವಿವಾದದ ಹಿನ್ನೆಲೆಯಲ್ಲಿ, ಸಮಯ್ ರೈನಾ ಶೋನ ಎಲ್ಲಾ ವೀಡಿಯೊಗಳನ್ನು ಡಿಲೀಟ್ ಮಾಡಿದರು,

ಅಲಹಬಾದಿಯಾ ಈಗಾಗಲೇ ಎರಡನೇ ಸಮನ್ಸ್ ಬಂದರೂ ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ (NCW) ಅಲಹಬಾದಿಯಾದ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ. ಜೀವ ಬೆದರಿಕೆ ಇದೆ ಎಂಬ ಕಾರಣವನ್ನು ಉಲ್ಲೇಖಿಸಿ ರಣವೀರ್​ ವಿಚಾರಣೆಗೆ ಹಾಜರಾಗಲು ಹೆಚ್ಚು ಸಮಯ ಕೇಳಿದ್ದರು.

Read More
Next Story