ಮೊಹಮ್ಮದ್ ಶಮಿಯೊಂದಿಗೆ ಸಾನಿಯಾ ಮಿರ್ಜಾ ಮದುವೆ?
x

ಮೊಹಮ್ಮದ್ ಶಮಿಯೊಂದಿಗೆ ಸಾನಿಯಾ ಮಿರ್ಜಾ ಮದುವೆ?

ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಈ ವರ್ಷದ ಆರಂಭದಲ್ಲಿ ವಿಚ್ಛೇದನ ಪಡೆದರು. ಶಮಿ ಕೂಡ ಪತ್ನಿ ಹಸಿನ್ ಜಹಾನ್‌ ಅವರಿಂದ ಬೇರ್ಪಟ್ಟಿದ್ದಾರೆ. ಶಮಿ-ಸಾನಿಯಾ ವಿವಾಹ ವದಂತಿ ಯನ್ನು ಸಾನಿತಾ ಅವರ ತಂದೆ ಇಮ್ರಾನ್‌ ತಳ್ಳಿಹಾಕಿದ್ದಾರೆ.


ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಾರೆ ಎಂಬ ಊಹಾಪೋಹ ಹಬ್ಬಿದೆ. ಈ ವದಂತಿಗಳನ್ನು ಸಾನಿಯಾ ತಂದೆ ಇಮ್ರಾನ್ ತಳ್ಳಿಹಾಕಿದ್ದಾರೆ.

ಈ ಸಂಬಂಧ ಎನ್‌ಡಿಟಿವಿ ಜೊತೆ ಮಾತನಾಡಿದ ಇಮ್ರಾನ್, ʻಇದೆಲ್ಲ ಅಸಂಬದ್ಧ. ಸಾನಿಯಾ ಆತನ ಭೇಟಿಯನ್ನೇ ಮಾಡಿಲ್ಲʼ ಎಂದು ಹೇಳಿದ್ದಾರೆ.

ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಈ ವರ್ಷದ ಆರಂಭದಲ್ಲಿ ವಿಚ್ಛೇದನ ಪಡೆದರು; ಶಮಿ ಕೂಡ ಪತ್ನಿ ಹಸಿನ್ ಜಹಾನ್‌ ಅವರಿಂದ ಬೇರ್ಪಟ್ಟಿದ್ದಾರೆ.

ಮಲಿಕ್ ಜೊತೆಗಿನ ಬೇರ್ಪಡುವಿಕೆಯನ್ನು ಘೋಷಿಸಿದ ಸುಮಾರು 5 ತಿಂಗಳ ನಂತರ ಸಾನಿಯಾ ಇತ್ತೀಚೆಗೆ ಹಜ್‌ ಪವಿತ್ರ ಯಾತ್ರೆ ಕೈಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ʻತಾವು ಸ್ಥಿತ್ಯಂತರಗೊಳ್ಳುವ ಅನುಭವʼ ಕ್ಕೆ ಸಜ್ಜಾಗುತ್ತಿದ್ದೇನೆ. ಉತ್ತಮ ಮಾನವಳಾಗಿ ಮರಳಲು ಆಶಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಭಾನುವಾರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, ʻನಾನು ಈ ಪರಿವರ್ತನೀಯ ಅನುಭವಕ್ಕಾಗಿ ತಯಾರಿ ನಡೆಸುತ್ತಿದ್ದೇನೆ. ನನ್ನ ಯಾವುದೇ ತಪ್ಪು ಮತ್ತು ನ್ಯೂನತೆಗೆ ನಿಮ್ಮ ಕ್ಷಮೆಯನ್ನು ನಮ್ರತೆಯಿಂದ ಕೇಳುತ್ತೇನೆ,ʼ ಎಂದು ಬರೆದಿದ್ದರು.

ʻಅಲ್ಲಾ ನನ್ನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಮತ್ತು ನನಗೆ ಈ ಹಾದಿಯಲ್ಲಿ ಮಾರ್ಗದರ್ಶನ ನೀಡುತ್ತಾನೆ,ʼ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ʻನಾನು ಅದೃಷ್ಟಶಾಲಿ ಮತ್ತು ಆಭಾರಿಯಾಗಿದ್ದೇನೆ. ಜೀವಿತಾವಧಿಯ ಪ್ರಯಾಣದಲ್ಲಿ ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆ ಗಳಲ್ಲಿ ನನ್ನನ್ನು ಇರಿಸಿಕೊಳ್ಳಿ. ವಿನಮ್ರ ಹೃದಯ ಮತ್ತು ದೃಢ ಮನಸ್ಸಿನೊಂದಿಗೆ ಉತ್ತಮ ಮನುಷ್ಯಳಾಗಿ ಹಿಂತಿರುಗಲು ಆಶಿಸುತ್ತೇನೆ,ʼ ಎಂದಿದ್ದಾರೆ.

ಇತ್ತೀಚೆಗೆ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಭಾಗವಸಿದ್ದ ಸಾನಿಯಾ, ತಮ್ಮ ವೃತ್ತಿಜೀವನದ ಬಗ್ಗೆ, ವಿಶೇಷವಾಗಿ 2015-16 ರಲ್ಲಿ ಮಾರ್ಟಿನಾ ಹಿಂಗಿಸ್ ಅವರ ಪಾಲುದಾರಿಕೆ ಕುರಿತು, ಮಾತನಾಡಿದರು;

ʻಈ ಕಾರ್ಯಕ್ರಮ ವೀಕ್ಷಿಸುತ್ತಿರುವ ಎಲ್ಲಾ ಮಹಿಳೆಯರು ಇದನ್ನು ಅರ್ಥಮಾಡಿಕೊಳ್ಳಬಹುದು ಎಂದು ಭಾವಿಸುತ್ತೇನೆ..ಒಂದಾದ ನಂತರ ಇನ್ನೊಂದು ಗೆಲುವು ಗಳಿಸಿದಾಗ, ಕ್ರೀಡಾಪಟುಗಳು ಅದನ್ನು 'ವಲಯದಲ್ಲಿರುವುದು' ಎಂದು ಕರೆಯುತ್ತಾರೆ. ಮಾರ್ಟಿನಾ ಮತ್ತು ನಾನು ಆ ಆರು ತಿಂಗಳ ಕಾಲ ಏನು ಗಳಿಸಿದ್ದೆವು ಎಂಬುದನ್ನು ವಿವರಿಸಲು, ಇದು ಅತ್ಯುತ್ತಮ ಪದ ಎಂದು ನಾನು ಭಾವಿಸುತ್ತೇನೆ,ʼ.

ಏತನ್ಮಧ್ಯೆ, ಮೊಹಮ್ಮದ್ ಶಮಿ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದಾರೆ. ಕೌಟುಂಬಿಕ ದೌರ್ಜನ್ಯ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪದ ನಂತರ, ಶಮಿ ಮತ್ತು ಅವರ ಪತ್ನಿ ಹಸಿನ್ ಜಹಾನ್ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ, ಈ ಸವಾಲುಗಳ ನಡುವೆಯೂ ಶಮಿ ವೃತ್ತಿಪರವಾಗಿ ಮಿಂಚುತ್ತಿದ್ದಾರೆ. ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು 2023 ರ ಒಂದು ದಿನದ ವಿಶ್ವಕಪ್‌ನಲ್ಲಿ ದೇಶದ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.

Read More
Next Story