ಸದನದಲ್ಲಿ ಪ್ರತಿಭಟನೆ : ಆರು ಬಿಜೆಪಿ ಶಾಸಕರ ಅಮಾನತು
x

ಸದನದಲ್ಲಿ ಪ್ರತಿಭಟನೆ : ಆರು ಬಿಜೆಪಿ ಶಾಸಕರ ಅಮಾನತು


ಕೋಲ್ಕತ್ತಾ, ಫೆ.12 - ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಆರು ಬಿಜೆಪಿ ಶಾಸಕರನ್ನು ಪಶ್ಚಿಮ ಬಂಗಾಳ ವಿಧಾನಸಭೆಯಿಂದ 30 ದಿನ ಕಾಲ ಅಮಾನತುಗೊಳಿಸಲಾಗಿದೆ.

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಲಿಯಲ್ಲಿ ಸೃಷ್ಟಿಯಾಗಿರುವ ಅರಾಜಕತೆಯನ್ನು ಪ್ರತಿಭಟಿಸಿ ಬಿಜೆಪಿ ಶಾಸಕರು ಸದನದಲ್ಲಿ ಘೋಷಣೆ ಕೂಗಿದರು. ಸುವೇಂದು ಅಧಿಕಾರಿ, ಅಗ್ನಿಮಿತ್ರ ಪಾಲ್, ಮಿಹಿರ್ ಗೋಸ್ವಾಮಿ, ಬಂಕಿಮ್ ಘೋಷ್, ತಾಪಸಿ ಮೊಂಡಲ್ ಮತ್ತು ಶಂಕರ್ ಘೋಷ್ ಅಮಾನತುಗೊಂಡವರು. ಪ್ರ ಶ್ನೋ ತ್ತರ ಅವಧಿ ಆರಂಭಗೊಂಡ ಬಳಿಕ ಬಿಜೆಪಿ ಶಾಸಕರು ಸದನದ ನೆಲದ ಮೇಲೆಯೇ ಧರಣಿ ನಡೆಸಿ, ಘೋಷಣೆಗಳನ್ನು ಕೂಗಿದರು. ಇದು ಗದ್ದಲಕ್ಕೆ ಕಾರಣವಾಯಿತು. ಸಭಾಪತಿ ಬಿಮನ್ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಶಾಸಕ ಶೋಭನ್‌ ದೇಬ್ ಚಟರ್ಜಿ ಅವರಿಗೆ ಬಿಜೆಪಿ ಶಾಸಕರ ಅಮಾನತು ಪ್ರಸ್ತಾವವನ್ನು ಮಂಡಿಸಲು ಅವಕಾಶ ನೀಡಿದರು. ಆನಂತರ ಶಾಸಕರನ್ನು ಅಮಾನತುಗೊಳಿಸಿದರು.

ವಿವಾದವೇನು?: ಸ್ಥಳೀಯ ಟಿಎಂಸಿ ನಾಯಕ ಶೇಖ್ ಶಾಜಹಾನ್ ಮತ್ತು ಅವರ ಗ್ಯಾಂಗ್ ಬಲವಂತವಾಗಿ ಭೂಮಿ ವಶಪಡಿಸಿಕೊಂಡು, ಲೈಂಗಿಕ ಕಿರುಕುಳ ನೀಡುತ್ತಿದೆ ಎಂದು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಡಿತರ ಹಗರಣದಲ್ಲಿ ಆರೋಪಿ ಮನೆ ಮೇಲೆ ದಾಳಿ ನಡೆಸಲು ಹೋದ ಜಾರಿ ನಿರ್ದೇಶನಾಲಯ (ಇಡಿ)ದ ತಂಡದ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಶಾಜಹಾನ್‌ ಕಳೆದ ತಿಂಗಳಿನಿಂದ ತಲೆಮರೆಸಿ ಕೊಂಡಿದ್ದು,ಆತನನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದು ವ್ಯಾಪಕ ಅಶಾಂತಿಗೆ ಕಾರಣವಾಗಿದೆ.

Read More
Next Story