Tirupathi laddu controversy| ತಿರುಪತಿ ಲಡ್ಡುಈಗ ಕಳಂಕರಹಿತ-ಟಿಟಿಡಿ
x

Tirupathi laddu controversy| ತಿರುಪತಿ ಲಡ್ಡುಈಗ ಕಳಂಕರಹಿತ-ಟಿಟಿಡಿ


ತಿರುಪತಿ: ಪವಿತ್ರ ಸಿಹಿತಿಂಡಿಯ ಪಾವಿತ್ರ್ಯವನ್ನು ಪುನಃಸ್ಥಾಪಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಹೇಳಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ವಹಿಸುತ್ತಿರುವ ಟಿಟಿಡಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶ್ರೀವಾರಿ ಲಡ್ಡು ಈಗ ಕಳಂಕರಹಿತವಾಗಿದೆ ಎಂದು ಶುಕ್ರವಾರ ರಾತ್ರಿ ಹೇಳಿದೆ.

ʻಶ್ರೀವಾರಿ ಲಡ್ಡುವಿನ ದೈವತ್ವ ಮತ್ತು ಪರಿಶುದ್ಧತೆ ಈಗ ಮರಳಿದೆ. ಭಕ್ತರಿಗೆ ತೃಪ್ತಿಯಾಗುವಂತೆ ಲಡ್ಡು ಪ್ರಸಾದದ ಪಾವಿತ್ರ್ಯವನ್ನು ರಕ್ಷಿಸಲು ಟಿಟಿಡಿ ಬದ್ಧವಾಗಿದೆ,ʼ ಎಂದು ದೇವಾಲಯದ ಆಡಳಿತ ಮಂಡಳಿ ಪೋಸ್ಟ್‌ನಲ್ಲಿ ತಿಳಿಸಿದೆ.

ಎರಡು ದಿನಗಳ ಹಿಂದೆ ಸಿಎಂ ಚಂದ್ರಬಾಬು ನಾಯ್ಡು ಕಲಬೆರಕೆ ತುಪ್ಪದ ವಿಷಯ ಬಹಿರಂಗಗೊಳಿಸಿದ್ದರು. ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ʻಇದು ಹಾದಿ ತಪ್ಪಿಸುವ ರಾಜಕೀಯ ಮತ್ತು ಕಟ್ಟು ಕಥೆʼ ಎಂದು ಟೀಕಿಸಿದ್ದರು.

ಕೇಂದ್ರ ಸರ್ಕಾರವು ಆಂಧ್ರಪ್ರದೇಶ ಸರ್ಕಾರದಿಂದ ಈ ಸಂಬಂಧ ವರದಿ ಕೇಳಿದೆ ಮತ್ತು ಅದನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮದ ಭರವಸೆ ನೀಡಿದೆ. ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Read More
Next Story