Salman Khan Receives Fresh Threat via Mumbai Police Helpline
x

ಸಲ್ಮಾನ್ ಖಾನ್​ (ಸಂಗ್ರಹ ಚಿತ್ರ)

ಸಲ್ಮಾನ್ ಖಾನ್‌ಗೆ ಮತ್ತೊಂದು ಜೀವ ಬೆದರಿಕೆ: ಮುಂಬೈ ಪೊಲೀಸ್ ಹೆಲ್ಪ್‌ಲೈನ್‌ಗೆ ಸಂದೇಶ, ಕೇಸ್ ದಾಖಲು

ಮುಂಬೈನ ವರ್ಲಿಯಲ್ಲಿರುವ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಏಪ್ರಿಲ್ 13ರ ರಾತ್ರಿ ಬಂದ ಸಂದೇಶದಲ್ಲಿ ಸಲ್ಮಾನ್ ಖಾನ್‌ಗೆ ಗಂಭೀರ ಬೆದರಿಕೆ ಒಡ್ಡಲಾಗಿದೆ.


ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಸರಣಿ ಮುಂದುವರಿದಿದ್ದು, ಇತ್ತೀಚೆಗೆ ಮುಂಬೈ ಟ್ರಾಫಿಕ್ ಪೊಲೀಸ್‌ರ ವಾಟ್ಸ್​​ಆ್ಯಪ್​ ಹೆಲ್ಪ್‌ಲೈನ್‌ಗೆ ಅನಾಮಧೇಯ ಸಂದೇಶವೊಂದು ಬಂದಿದೆ. ಈ ಸಂದೇಶದಲ್ಲಿ ಸಲ್ಮಾನ್ ಖಾನ್‌ರ ಮನೆಗೆ ದಾಳಿ ಮಾಡುವುದಾಗಲಿ ಅಥವಾ ಅವರ ಕಾರನ್ನು ಸ್ಫೋಟಿಸುವುದಾಗಲಿ ಬೆದರಿಕೆ ಹಾಕಲಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈನ ವರ್ಲಿಯಲ್ಲಿರುವ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಏಪ್ರಿಲ್ 13ರ ರಾತ್ರಿ ಬಂದ ಸಂದೇಶದಲ್ಲಿ ಸಲ್ಮಾನ್ ಖಾನ್‌ಗೆ ಗಂಭೀರ ಬೆದರಿಕೆ ಒಡ್ಡಲಾಗಿದೆ. ಸಂದೇಶದಲ್ಲಿ, "ನಾವು ಸಲ್ಮಾನ್ ಖಾನ್‌ರ ಮನೆಗೆ ಒಳಗೆ ನುಗ್ಗಿ ಕೊಲೆ ಮಾಡುತ್ತೇವೆ, ಇಲ್ಲವೇ ಅವರ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸುತ್ತೇವೆ" ಎಂದು ತಿಳಿಸಲಾಗಿದೆ.

ಮುಂಬೈ ಪೊಲೀಸರು, ವರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದ್ದು, ಸಂದೇಶ ಕಳುಹಿಸಿದ ಮೊಬೈಲ್ ಸಂಖ್ಯೆಯನ್ನು ಟ್ರೇಸ್ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್‌ರ ಸುರಕ್ಷತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈಗಾಗಲೇ Y+ ಶ್ರೇಣಿಯ ಸುರಕ್ಷತೆ ಹೊಂದಿರುವ ಸಲ್ಮಾನ್‌ಗೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಒದಗಿಸಲಾಗುತ್ತಿದೆ.

ಈ ಹಿಂದಿನ ಬೆದರಿಕೆಗಳ ಇತಿಹಾಸ

ಸಲ್ಮಾನ್ ಖಾನ್‌ಗೆ ಇದು ಮೊದಲ ಬೆದರಿಕೆಯಲ್ಲ. ಕಳೆದ ಕೆಲವು ವರ್ಷಗಳಿಂದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹಿಂಬಾಲಕರಿಂದ ಬೆದರಿಕೆಗಳು ಬರುತ್ತಿವೆ. 2024ರ ಏಪ್ರಿಲ್‌ನಲ್ಲಿ, ಲಾರೆನ್ಸ್‌ನ ಸಹೋದರ ಅನ್ಮೋಲ್ ಬಿಷ್ಣೋಯಿ, ಸಲ್ಮಾನ್‌ರ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ನಡೆದ ಗುಂಡಿನ ದಾಳಿ ನಡೆಸಿದ್ದರು. ಘಟನೆಯ ಬಳಿಕ ಸಲ್ಮಾನ್‌ರ ಸುರಕ್ಷತೆಯನ್ನು Y+ ಶ್ರೇಣಿಗೆ ಏರಿಸಲಾಗಿದೆ. ಅಲ್ಲದೆ, 2024ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ 2 ಕೋಟಿ ರೂ, ಮತ್ತು 5 ಕೋಟಿ ರೂಪಾಯಿ ಕೊಡಬೇಕೆನ್ನುವ ಬೆದರಿಕೆ ಸಂದೇಶ ಬಂದಿತ್ತು ಕೆಲವು ಸಂದರ್ಭಗಳಲ್ಲಿ, ಬಿಷ್ಣೋಯಿ ಸಮುದಾಯದ ದೇವಸ್ಥಾನದಲ್ಲಿ ಕ್ಷಮೆಯಾಚನೆ ಮಾಡುವಂತೆ ಒತ್ತಾಯಿಸಲಾಗಿತ್ತು,

ಸಲ್ಮಾನ್‌ ಪ್ರತಿಕ್ರಿಯೆ ಹೀಗಿದೆ..

ಬೆದರಿಕೆಗಳ ಹೊರತಾಗಿಯೂ, ಸಲ್ಮಾನ್ ಖಾನ್ ತಮ್ಮ ವೃತ್ತಿ ಜೀವನ ಮುಂದುವರಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಸಲ್ಮಾನ್, "ಎಲ್ಲವೂ ದೇವರಿಚ್ಛೆಯಂತೆ ನಡೆಯುತ್ತದೆ, ಜೀವನದಲ್ಲಿ ಏನು ಬರಬೇಕೋ ಅದು ಬರುತ್ತದೆ" ಎಂದು ಹೇಳಿದ್ದಾರೆ,

Read More
Next Story