ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ; ಮುಂಬೈ ಪೊಲೀಸರಿಗೆ ಸಂದೇಶ ರವಾನೆ
ಮುಂಬೈ ಪೊಲೀಸರ ಟ್ರಾಫಿಕ್ ಸಹಾಯವಾಣಿ ಸಂಖ್ಯೆಗೆ ಹಲವಾರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಸಲ್ಮಾನ್ ಖಾನ್‌ನಿಂದ 2 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಲ್ಮಾನ್ ಖಾನ್ ಹಣ ನೀಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಮ್ಮೆ ಜೀವ ಬೆದರಿಕೆ ಬಂದಿದೆ. ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬ ನಟನಿಂದ 2 ಕೋಟಿ ರೂ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮುಂಬೈ ಪೊಲೀಸರ ಟ್ರಾಫಿಕ್ ಸಹಾಯವಾಣಿ ಸಂಖ್ಯೆಗೆ ಹಲವಾರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸುವ ಮೂಲಕ ಸಲ್ಮಾನ್ ಖಾನ್‌ನಿಂದ 2 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಲ್ಮಾನ್ ಖಾನ್ ಹಣ ನೀಡದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ವರ್ಲಿ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಎಫ್‌ಐಆರ್ ದಾಖಲಿಸಿಕೊಂಡು ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಇದಕ್ಕೂ ಮುನ್ನ ಮುಂಬೈ ಪೊಲೀಸರು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಿದ ಆರೋಪದ ಮೇಲೆ ಜಮ್ಶೆಡ್‌ಪುರದ ತರಕಾರಿ ಮಾರಾಟಗಾರ 24 ವರ್ಷದ ಶೇಖ್ ಹುಸೇನ್ ಶೇಖ್ ಮೌಸಿನ್ ಅವರನ್ನು ಬಂಧಿಸಿದ್ದರು. ಆ ಸಂದೇಶದಲ್ಲಿ 5 ಕೋಟಿ ರುಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದ.
ಈ ತಿಂಗಳ ಆರಂಭದಲ್ಲಿ ಸಲ್ಮಾನ್‌ಗೆ ನಿಕಟವಾಗಿದ್ದ ಬಾಬಾ ಸಿದ್ದಿಕಿ ಹತ್ಯೆ' ಅಕ್ಟೋಬರ್ 12 ರಂದು ಬಾಂದ್ರಾದಲ್ಲಿರುವ ತನ್ನ ಮಗನ ಕಚೇರಿಯ ಹೊರಗೆ ಜೀಶಾನ್ ತಂದೆ ಬಾಬಾ ಸಿದ್ದಿಕಿ (66) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎನ್‌ಸಿಪಿ ನಾಯಕನ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು, ಬಾಬಾ ಸಿದ್ದಿಕಿ ಸಲ್ಮಾನ್‌ನೊಂದಿಗಿನ ನಿಕಟ ಸಂಬಂಧವನ್ನು ಅವರ ಹತ್ಯೆಗೆ ಒಂದು ಕಾರಣವೆಂದು ಉಲ್ಲೇಖಿಸಿದೆ.
ಬಾಬಾ ಸಿದ್ದಿಕ್ ಅವರ ಹತ್ಯೆಯ ಬಳಿಕ ನಟ ಸಲ್ಮಾನ್ ಖಾನ್ ಅವರಿಗೆ ಹೆಚ್ಚಿನ ಭಧ್ರತೆಯನ್ನು ನೀಡಲಾಗಿದೆ. ಕಳೆದ ಕೆಲ ಸಮಯಗಳಿಂದ ಪಂಜಾಬ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಸಲ್ಮಾನ್ ಗೆ ಕೊಲೆ ಬೆದರಿಕೆಗಳು ಬರುತ್ತಿವೆ.