Saif ali Khan : ಸೈಫ್ ಅಲಿ ಖಾನ್‌ಗೆ ಚುಚ್ಚಿದವನ ಬಂಧನ; ಬಾಂಗ್ಲಾ ಪ್ರಜೆಯೆಂಬ ಅನುಮಾನ
Saif ali Khan :ಆರೋಪಿ ಹಲವಾರು ಹೆಸರುಗಳನ್ನು ಇಟ್ಟುಕೊಂಡಿದ್ದ. ಆರೋಪಿ ಬಿಜೋಯ್ ದಾಸ್, ವಿಜಯ್ ದಾಸ್, ಮೊಹಮ್ಮದ್ ಇಲ್ಯಾಸ್ ಮತ್ತು ಬಿಜೆ ಎಂದು ಹೇಳಿಕೊಂಡಿದ್ದಾನೆ.
ನಟ ಸೈಫ್ ಅಲಿಖಾನ್ (Saif ali Khan) ಮನೆಗೆ ನುಗ್ಗಿ ಚಾಕುವಿನಿಂದ ಹಲವು ಬಾರಿ ಚುಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂಬಾತ ತಾನೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಹಲವಾರು ಹೆಸರುಗಳನ್ನು ಇಟ್ಟುಕೊಂಡಿದ್ದ. ಆರೋಪಿ ಬಿಜೋಯ್ ದಾಸ್, ವಿಜಯ್ ದಾಸ್, ಮೊಹಮ್ಮದ್ ಇಲ್ಯಾಸ್ ಮತ್ತು ಬಿಜೆ ಎಂದು ಹೇಳಿಕೊಂಡಿದ್ದಾನೆ.
ಥಾಣೆಯ ಹೌಸ್ ಕೀಪಿಂಗ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಶೆಹಜಾದ್ ನನ್ನು ನಗರದ ಹಿರಾನಂದಾನಿ ಎಸ್ಟೇಟ್‌ನ ಮೆಟ್ರೋ ನಿರ್ಮಾಣ ಸ್ಥಳದ ಬಳಿಯ ಕಾರ್ಮಿಕ ಶಿಬಿರದಲ್ಲಿ ಬಂಧಿಸಲಾಗಿದೆ. ಕಳ್ಳತನದ ಉದ್ದೇಶದಿಂದ ಸೈಫ್ ಅಲಿ ಖಾನ್ ಅವರ ಮನೆಗೆ ಪ್ರವೇಶಿಸಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಮಾಧ್ಯಮಗಳ ಜತೆ ಮಾತನಾಡಿದ ಮುಂಬೈ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು, ಆರೋಪಿ ಬಾಂಗ್ಳಾದೇಶ ಪ್ರಜೆ ಎಂಬ ಅನುಮಾನವೂ ಇದೆ. ಆತನಿಂದ ವಶಪಡಿಸಿಕೊಳ್ಳಲಾದ ದಾಖಲೆಗಳು ಈ ರೀತಿಯ ಅನುಮಾನಕ್ಕೆ ಕಾರಣವಾಗಿದೆ. ಆತ ಕೆಲವು ತಿಂಗಳ ಹಿಂದೆ ಭಾರತವನ್ನು ಪ್ರವೇಶಿಸಿ ಮುಂಬೈ ತಲುಪಿರುವ ಶಂಕೆ ಇದೆ ಎಂದು ಹೇಳಿದ್ದಾರೆ. .
ಆರೋಪಿ ಕಳೆದ ಐದು-ಆರು ತಿಂಗಳಿನಿಂದ ಮುಂಬೈ ಮತ್ತು ಥಾಣೆಯ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನಕ್ಕೆ ಮೊದಲು ಆತ ಗುತ್ತಿಗೆದಾರರೊಂದಿಗೆ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಮೇಲಿನ ದಾಳಿ ನಂತರ, ಆರೋಪಿ ನಿರಂತರವಾಗಿ ಮಾಧ್ಯಮಗಳ ಮೂಲಕ ಪೊಲೀಸರ ಕಾರ್ಯಾಚರಣೆ ಬಗ್ಗೆ ನೋಡುತ್ತಿದ್ದ ಎಂದುಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. .
ಘಟನೆ ನಂತರ ದಾದರ್ ರೈಲ್ವೆ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ಲಿಪ್ ಸೇರಿದಂತೆ ಹಲವಾರು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.