Saif Ali Khan : ನಟ ಸೈಫ್‌ ಅಲಿ ಖಾನ್‌ ಮೇಲೆ ದಾಳಿ; ಶಂಕಿತ ವ್ಯಕ್ತಿಯ ಸೆರೆ
x
ಸೈಫ್‌ ಅಲಿ ಖಾನ್‌

Saif Ali Khan : ನಟ ಸೈಫ್‌ ಅಲಿ ಖಾನ್‌ ಮೇಲೆ ದಾಳಿ; ಶಂಕಿತ ವ್ಯಕ್ತಿಯ ಸೆರೆ

Saif Ali Khan: . ಸೈಫ್‌ ಮೇಲಿನ ದಾಳಿ ಮಾಡಿದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ (Saif Ali Khan) ಮನೆಗೆ ನುಗ್ಗಿ ಅವರಿಗೆ ಚಾಕು ಹಾಕಿದ ಪ್ರಕರಣದಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ದಾಳಿ ಘಟನೆ ನಡೆದು ಸುಮಾರು 30 ಗಂಟೆಗಳ ಬಳಿಕ ಒಬ್ಬನನ್ನು ಶಂಕೆಯ ಮೇರೆಗೆ ವಶಕ್ಕೆ ಪಡೆದಿದ್ದಾರೆ. ಆದರೆ ಆತ ಆರೋಪಿಯೇ ಎಂಬುದು ಖಚಿತಗೊಂಡಿಲ್ಲ.ಘಟನೆಯಾದ ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಆತನ ಫೋಟೋ ಬಹಿರಂಗಗೊಳಿಸಿದ್ದರು. ಅದರ ಆಧಾರದ ಮೇಲೆ ಒಬ್ಬನನ್ನು ಠಾಣೆಗೆ ಕರೆಸಿಕೊಂಡಿದ್ದಾರೆ.

ಸದ್ಯ ಬಾಂದ್ರಾ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದಿದ್ದಾರೆ. ಅಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದೆ. ಯಾಕೆ ದಾಳಿ ಮಾಡಿದೆ ಎಂಬುದಾಗಿ ಆತ ಬಾಯ್ಬಿಟ್ಟಿದ್ದಾನೆ. ಸೈಫ್‌ ಮೇಲಿನ ದಾಳಿ ಮಾಡಿದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬಹಿರಂಗ ಪಡಿಸಲಾಗಿದ್ದ ವಿಡಿಯೋದಲ್ಲಿ ಗುರುವಾರ ಬೆಳಗಿನ ಜಾವ 2.33 ಗಂಟೆ ಸುಮಾರಿಗೆ ದುಷ್ಕರ್ಮಿ ಖಾನ್‌ ಅವರ ಮನೆಗೆ ನುಗ್ಗಿದ್ದ. ಆರೋಪಿಯು ಘಟನೆ ಟಿ-ಶರ್ಟ್​ ಮತ್ತು ಜೀನ್ಸ್ ಧರಿಸಿದ್ದ. ಸೈಫ್ ಮನೆಯ ಮೆಟ್ಟಿಲು ಇಳಿಯುವಾಗ ಆತನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಸೈಫ್‌ ಚೇತರಿಕೆ

ಗುರುವಾರ ಬೆಳಗಿನ ಜಾವ ಮನೆಗೆ ನುಗ್ಗಿದ ಆರೋಪಿ ದರೋಡೆ ಮಾಡಲು ಪ್ರಯತ್ನಪಟ್ಟಿದ್ದ. ಇದನ್ನು ಗಮನಿಸಿದ ಸೈಫ್‌ ಅಲಿ ಖಾನ್‌ ಆತನ್ನನು ಎದುರಿಸಿದ್ದಾರೆ. ದುಡ್ಡು ಕೊಡಲು ನಿರಾಕರಿಸಿದ ಕಾರಣ ಆತ ಖಾನ್‌ಗೆ ಚಾಕುವಿನಿಂದ ಇರಿದಿದ್ದಾನೆ . ತಕ್ಷಣವೇ ಸೈಫ್‌ ಪುತ್ರ ಆಸ್ಪತ್ರೆಗೆ ದಾಖಲಿಸಿದ್ದ.

ಸೈಫ್‌ ಅವರನ್ನು ಐಸಿಯು ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆನ್ನುಹುರಿಯಲ್ಲಿ ಸಿಲುಕಿಕೊಂಡಿದ್ದ 2.5 ಇಂಚಿನ ಚಾಕುವನ್ನು ತೆಗೆದುಹಾಕಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಅವರನ್ನು ಯಾವಾಗ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಬಹುದು ಎಂಬುದನ್ನು ನಿರ್ಧರಿಸಲು ವೈದ್ಯರು ಅವರ ಕುಟುಂಬದೊಂದಿಗೆ ಚರ್ಚಿಸುತ್ತಿದ್ದಾರೆ.

Read More
Next Story