210 ಕೋಟಿ ರೂ. ತೆರಿಗೆ ದಂಡ: ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್‌
x

210 ಕೋಟಿ ರೂ. ತೆರಿಗೆ ದಂಡ: ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್‌


ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ತನ್ನ ಮನವಿಯನ್ನು ವಜಾಗೊಳಿ ಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸೋಮವಾರ (ಮಾರ್ಚ್ 11) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಹಂಗಾಮಿ ಮು.ನ್ಯಾ. ಮನಮೋಹನ್ ಮತ್ತು ನ್ಯಾ. ತುಷಾರ್ ರಾವ್ ಗೆಡೆಲಾ ಅವರ ಪೀಠದ ಮುಂದೆ ಹಿರಿಯ ವಕೀಲ ವಿವೇಕ್ ಟಂಖಾ ಅವರು ವಿಷಯವನ್ನು ಪ್ರಸ್ತಾಪಿಸಿದರು. ರಾಜಕೀಯ ಪಕ್ಷದ ಖಾತೆಗಳನ್ನುಸ್ಥಗಿತಗೊಳಿಸಿರುವುದರಿಂದ ಇದು ತುರ್ತು ವಿಷಯ ಎಂದು ಟಂಖಾ ಹೇಳಿದರು. ಹಂಗಾಮಿ ಮು.ನ್ಯಾ.ಮನಮೋಹನ್ ಅವರು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಒಪ್ಪಿಕೊಂಡರು.

2023ರ ಮಾರ್ಚ್ 8 ರಂದು ಕೆಲವು ತೆರಿಗೆ ಪಾವತಿ ವ್ಯತ್ಯಾಸಗಳಿಗೆ ದಂಡ ವಿಧಿಸಿರುವುದರ ವಿರುದ್ಧ ಕಾಂಗ್ರೆಸ್‌ನ ಮನವಿಯನ್ನು ಐಟಿಎಟಿ ವಜಾಗೊಳಿಸಿತ್ತು. ಐಟಿ ಟ್ರಿಬ್ಯೂನಲ್ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಹಣ ಸ್ಥಗಿತಗೊಳಿಸಿರುವುದು ʻಪ್ರಜಾಪ್ರಭುತ್ವದ ಮೇಲಿನ ದಾಳಿʼ ಎಂದು ಕಾಂಗ್ರೆಸ್‌ ಹೇಳಿತ್ತು. ಆದಾಯ ತೆರಿಗೆ ಇಲಾಖೆ ವಿಧಿಸಿದ 210 ಕೋಟಿ ರೂ. ದಂಡವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮಂಡಳಿ ವಜಾಗೊಳಿಸಿತ್ತು.

Read More
Next Story