ಮೀಸಲಿನಲ್ಲಿ ಕೆನೆ ಪದರ ಮಾನದಂಡ: ರಾಮದಾಸ್ ಅಠವಳೆ ವಿರೋಧ
x

ಮೀಸಲಿನಲ್ಲಿ ಕೆನೆ ಪದರ ಮಾನದಂಡ: ರಾಮದಾಸ್ ಅಠವಳೆ ವಿರೋಧ


ಮುಂಬೈ, ಆ.3 - ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಿಗೆ ಕೆನೆಪದರದ ಮಾನದಂಡಗಳನ್ನು ಅನ್ವಯಿಸುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ. ಒಳ ಮೀಸಲು ಕುರಿತು ಸುಪ್ರೀಂ ಕೋರ್ಟ್ ನ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ಬಂದಿದೆ.

ಆದರೆ, ಸುಪ್ರೀಂ ಕೋರ್ಟ್‌ ತೀರ್ಪು ಹೆಚ್ಚು ಹಿಂದುಳಿದ ಜಾತಿಗಳಿಗೆ ನ್ಯಾಯವನ್ನು ಒದಗಿಸುತ್ತದೆ ಎಂದು ರಿಪಬ್ಲಿಕನ್ ಪಾರ್ಟಿ ಮುಖ್ಯಸ್ಥ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಠವಳೆ ಹೇಳಿದ್ದಾರೆ.

ಒಬಿಸಿ ಮತ್ತು ಸಾಮಾನ್ಯ ವರ್ಗದವರಿಗೂ ಇದೇ ರೀತಿಯ ಉಪ ವರ್ಗೀಕರಣ ನೀಡಬೇಕು. ಎಸ್‌ಸಿ/ಎಸ್‌ಟಿ ಮೀಸಲು ಜಾತಿಯನ್ನು ಆಧರಿಸಿದೆ. ಎಸ್‌ಸಿ-ಎಸ್‌ಟಿಗಳಿಗೆ ಮೀಸಲಿಗೆ ಕೆನೆ ಪದರದ ಮಾನದಂಡಗಳನ್ನು ಅನ್ವಯಿಸುವಿಕೆಗೆ ಆರ್‌ಪಿಐ ವಿರೋಧವಿದೆ,ʼ ಎಂದರು.

ಆರ್‌ಪಿಐ, ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದೆ.

ದೇಶದಲ್ಲಿ 1,200 ಪರಿಶಿಷ್ಟ ಜಾತಿಗಳಿದ್ದು, ಅದರಲ್ಲಿ 59 ಮಹಾರಾಷ್ಟ್ರದಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಮಹಾರಾಷ್ಟ್ರ ಸರ್ಕಾರ ಪರಿಶಿಷ್ಟ ಜಾತಿಗಳನ್ನು ಅಧ್ಯಯನ ಮಾಡಲು ಆಯೋಗವನ್ನು ರಚಿಸಬೇಕು. ಅವರನ್ನು ಎ, ಬಿ, ಸಿ, ಡಿ ವರ್ಗಗಳ ಅಡಿಯಲ್ಲಿ ಉಪವರ್ಗೀಕರಿಸಬೇಕು. ಇದರಿಂದ ಎಸ್‌ಸಿ ವರ್ಗಕ್ಕೆ ಒಳಪಡುವ ಎಲ್ಲ ಜಾತಿಗಳಿಗೂ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

Read More
Next Story