ತ್ರಿವರ್ಣ ಧ್ವಜದೊಂದಿಗೆ ರೋಹಿತ್ ಶರ್ಮಾ ಫೋಟೋ: ನೆಟ್ಟಿಗರಿಂದ ಟೀಕಾಪ್ರಹಾರ
x

ತ್ರಿವರ್ಣ ಧ್ವಜದೊಂದಿಗೆ ರೋಹಿತ್ ಶರ್ಮಾ ಫೋಟೋ: ನೆಟ್ಟಿಗರಿಂದ ಟೀಕಾಪ್ರಹಾರ


ದೇಶಕ್ಕಾಗಿ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ಅವರ ಅದ್ಭುತ ಸಾಧನೆ ಕೂಡ ಅವರನ್ನು ಕಟುಟೀಕೆ ಮತ್ತು ನಿರಂತರ ಟ್ರೋಲಿಂಗ್‌ ನಿಂದ ರಕ್ಷಿಸುವುದಿಲ್ಲ ಎಂದು ತೋರುತ್ತದೆ.

ಎಕ್ಸ್‌ ನಲ್ಲಿ ತಮ್ಮ ಪ್ರೊಫೈಲ್ ಫೋಟೋ ಬದಲಿಸಿದ ನಂತರ, ರೋಹಿತ್‌ ರಾಷ್ಟ್ರೀಯ ಧ್ವಜವನ್ನು ಅಗೌರವಗೊಳಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಇನ್ನು ಕೆಲವರು ಬಾರ್ಬಡೋಸ್ ನೆಲದಲ್ಲಿ ಭಾರತದ ಧ್ವಜವನ್ನು ಹಾರಿಸಿರುವುದನ್ನು ವಿಜಯದ ಸಂಕೇತ ಎಂದು ಹೇಳಿದ್ದಾರೆ.

ಸಮಸ್ಯೆ ಏನು?: ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ನಂತರ ಶರ್ಮಾ, ತ್ರಿವರ್ಣ ಧ್ವಜದೊಂದಿಗೆ ಪೋಸ್ ನೀಡುತ್ತಿರುವ ಫೋಟೋ ಹಾಕಿಕೊಂಡಿದ್ದಾರೆ. ಧ್ವಜವನ್ನು ಇರಿಸಿರುವ ರೀತಿ ನೆಟಿಜನ್‌ಗಳನ್ನು ಕೆರಳಿಸಿದೆ. ಫೋಟೋದಲ್ಲಿ ಧ್ವಜದ ಒಂದು ಭಾಗ ನೆಲವನ್ನು ಸ್ಪರ್ಶಿಸಿದೆ. ಇದು ಅಗೌರವ ಮತ್ತು ಭಾರತದ ಧ್ವಜ ಸಂಹಿತೆಯ ಉಲ್ಲಂಘನೆ ಎಂದು ಕರೆದಿದ್ದಾರೆ.

ಆಟಗಾರ ಕ್ಷಮೆ ಕೇಳಬೇಕು: ʻಸುಂದರವಾದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ರೋಹಿತ್ ಶರ್ಮಾಗೆ ನಾಚಿಕೆಯಾಗಬೇಕುʼ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಗೃಹ ವ್ಯವಹಾರಗಳ ಸಚಿವಾಲಯದ ಧ್ವಜ ಸಂಹಿಕೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಅದರ ಪ್ರಕಾರ, ʻರಾಷ್ಟ್ರಧ್ವಜ ನೆಲವನ್ನು ಸ್ಪರ್ಶಿಸಬಾರದು ಅಥವಾ ನೀರಿನಲ್ಲಿ ತೇಲಬಾರದುʼ.

ಮತ್ತೊಬ್ಬ ಬಳಕೆದಾರರು ಇದೇ ನಿಯಮ ಉಲ್ಲೇಖಿಸಿ, ಶರ್ಮಾ ಅವರನ್ನು ಟೀಕಿಸಿದ್ದಾರೆ.

ʻರಾಷ್ಟ್ರೀಯ ಧ್ವಜ ನೆಲವನ್ನು ಸ್ಪರ್ಶಿಸಲು ಅನುಮತಿಯಿಲ್ಲ.ನೀವು ಟಿ20 ವಿಶ್ವಕಪ್ ಗೆದ್ದಿದ್ದರೂ, ಯಾವುದೇ ರೀತಿಯಲ್ಲಿ ಭಾರತೀಯ ಧ್ವಜವನ್ನು ಅಗೌರವಗೊಳಿಸಬಾರದು,ʼ ಎಂದು ಪೋಸ್ಟ್ ಮಾಡಿದ್ದಾರೆ.

ಇತರರು ಇದನ್ನು ಶರ್ಮಾ ಅವರ ʻಅಸೂಕ್ಷ್ಮಕ್ರಿಯೆʼ ಎಂದು ಕರೆದಿದ್ದಾರೆ.

ʻಒಂದು ವೇಳೆ ಭಾರತದಲ್ಲಿ ಇದನ್ನು ಮಾಡಿದ್ದರೆ, ಅಗೌರವ ಆಗಿದೆ ಎಂದು ಚೀರುತ್ತಿದ್ದರು. ಇದು ಅನಗತ್ಯ,ʼ ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಕ್ಷಮೆಯಾಚಿಸುವಂತೆ ಕೇಳಿಕೊಂಡಿದ್ದಾರೆ.

ʻನಿಮ್ಮಂತಹವರಿಂದ ತ್ರಿವರ್ಣ ಧ್ವಜದ ಬಗ್ಗೆ ಇಂತಹ ವರ್ತನೆ ನಿರಾಶಾದಾಯಕ. ನಿಮ್ಮ ಕಾರ್ಯ ಮತ್ತು ಮಾತುಗಳಿಂದ ಯುವಜನರನ್ನು ಪ್ರೇರೇಪಿಸುವುದು ಮತ್ತು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವುದು ನಿಮ್ಮ ಜವಾ ಬ್ದಾರಿ,ʼ ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಯಮ ಏನು ಹೇಳುತ್ತದೆ?: ಭಾರತದ ಧ್ವಜ ಸಂಹಿತೆಯು ರಾಷ್ಟ್ರಧ್ವಜವನ್ನು ಹಾರಿಸುವಾಗ ಕಟ್ಟುನಿಟ್ಟು ನಿಯಮ ಅನುಸರಿಸಬೇಕಾಗುತ್ತದೆ. ಧ್ವಜವು ನೆಲ ಇಲ್ಲವೇ ಚಾವಣಿಯನ್ನು ಸ್ಪರ್ಶಿಸಬಾರದು ಅಥವಾ ನೀರು ಮುಟ್ಟಬಾರದು ಎಂದು ನಿಯಮ ಹೇಳುತ್ತದೆ. ಜೊತೆಗೆ, ಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸುವುದು ಅಥವಾ ಅಲಂಕಾರಕ್ಕಾಗಿ ಬಳಸುವುದನ್ನು ನಿಷೇಧಿಸುತ್ತದೆ.

Read More
Next Story