ಭಾರತದ ಕೋಚ್ ಸ್ಥಾನ ಬೇಡ: ರಿಕಿ ಪಾಂಟಿಂಗ್
x

ಭಾರತದ ಕೋಚ್ ಸ್ಥಾನ ಬೇಡ: ರಿಕಿ ಪಾಂಟಿಂಗ್

ರಾಷ್ಟ್ರೀಯ ಮುಖ್ಯ ತರಬೇತುದಾರ ವರ್ಷದಲ್ಲಿ 10 ಅಥವಾ 11 ತಿಂಗಳು ಕೆಲಸ ಮಾಡಬೇಕಾಗುತ್ತದೆ. ನನಗೆ ಇಷ್ಟವಿದ್ದರೂ, ನನ್ನ ಜೀವನಶೈಲಿಗೆ ಮತ್ತು ನಾನು ನಿಜವಾಗಿಯೂ ಸಂತೋಷ ಪಡುವ ವಿಷಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಪಾಂಟಿಂಗ್‌ ಹೇಳಿದರು.


ಹೊಸದಿಲ್ಲಿ, ಮೇ 23-‌ ಭಾರತದ ಮುಖ್ಯ ಕೋಚ್ ಸ್ಥಾನಕ್ಕೆ ನನ್ನನ್ನು ಸಂಪರ್ಕಿಸಲಾಗಿದೆ. ಆದರೆ, ನನ್ನ ಜೀವನಶೈಲಿಗೆ ಹೊಂದಿಕೆಯಾಗದ ಕಾರಣ ಆಫರ್‌ ನಿರಾಕರಿಸಿದ್ದೇನೆ ಎಂದು ಆಸ್ಟ್ರೇಲಿಯದ ಶ್ರೇಷ್ಠ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಏಳು ಋತು ಪೂರ್ಣಗೊಳಿಸಿದ ಅವರು, ಈ ಹಿಂದೆ ಆಸ್ಟ್ರೇಲಿಯದ ಹಂಗಾಮಿ ಟಿ20 ಕೋಚ್ ಆಗಿದ್ದರು. ಕೋಚ್‌ ಸ್ಥಾನಕ್ಕೆ ಬಿಸಿಸಿಐನಿಂದ ಆಹ್ವಾನ ಬಂದಿತ್ತೇ ಎಂದು ಅವರು ಹೇಳಲಿಲ್ಲ.

ʻಐಪಿಎಲ್ ಸಮಯದಲ್ಲಿ ನನಗೆ ಈ ಬಗ್ಗೆ ಆಸಕ್ತಿ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಕೆಲವು ಮುಖಾಮುಖಿ ಸಣ್ಣ ಸಂಭಾಷಣೆಗಳು ನಡೆದವು. ನಾನು ರಾಷ್ಟ್ರೀಯ ತಂಡದ ಹಿರಿಯ ತರಬೇತುದಾರನಾಗಲು ಇಷ್ಟಪಡುತ್ತೇನೆ. ಆದರೆ, ನನ್ನ ಜೀವನದಲ್ಲಿ ಬೇರೆ ವಿಷಯಗಳೂ ಇವೆ ಮತ್ತು ಮನೆಯಲ್ಲಿ ಸ್ವಲ್ಪ ಕಾಲ ಕಳೆಯಲು ಬಯಸುತ್ತೇನೆ. ಭಾರತೀಯ ತಂಡದ ಕೆಲಸವನ್ನು ತೆಗೆದುಕೊಂಡರೆ, ಐಪಿಎಲ್ ತಂಡದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲಎನ್ನುವುದು ನಿಮಗೂ ಗೊತ್ತಿದೆ. ಅಲ್ಲದೆ, ರಾಷ್ಟ್ರೀಯ ಮುಖ್ಯ ತರಬೇತುದಾರ ವರ್ಷದಲ್ಲಿ 10 ಅಥವಾ 11 ತಿಂಗಳು ಕೆಲಸ ಮಾಡಬೇಕಾಗುತ್ತದೆ. ಮಾಡಲು ನನಗೆ ಇಷ್ಟವಿದ್ದರೂ, ನನ್ನ ಜೀವನಶೈಲಿಗೆ ಮತ್ತು ನಾನು ನಿಜವಾಗಿಯೂ ಸಂತೋಷ ಪಡುವ ವಿಷಯಗಳಿಗೆ ಹೊಂದಿಕೆಯಾಗುವುದಿಲ್ಲ,ʼ ಎಂದು ಹೇಳಿದರು.

ಪಾಂಟಿಂಗ್ ತಮ್ಮ ಮಗನೊಂದಿಗೆ ಈ ಪ್ರಸ್ತಾಪ ಕುರಿತು ಚರ್ಚಿಸಿದ್ದು, ಅವರು ಭಾರತಕ್ಕೆ ಬರಲು ಸಿದ್ಧವಿದ್ದಾರೆ. ʻನನ್ನ ಕುಟುಂಬ ಮತ್ತು ಮಕ್ಕಳು ಕಳೆದ ಐದು ವಾರಗಳನ್ನು ಐಪಿಎಲ್‌ನಲ್ಲಿ ನನ್ನೊಂದಿಗೆ ಕಳೆದಿದ್ದಾರೆ. ಅವರು ಪ್ರತಿ ವರ್ಷ ಬರುತ್ತಾರೆ. ನನಗೆ ಭಾರತೀಯ ಕೋಚ್ ಹುದ್ದೆಯನ್ನು ನೀಡಲಾಗಿದೆ ಎಂದು ನಾನು ಹೇಳಿದ್ದಕ್ಕೆ, ತೆಗೆದುಕೊಳ್ಳಿ. ನಾವು ಮುಂದಿನ ಒಂದೆರಡು ವರ್ಷ ಕಾಲ ಅಲ್ಲಿರಲು ಇಷ್ಟಪಡುತ್ತೇವೆ ಎಂಬ ಪ್ರತಿಕ್ರಿಯೆ ಬಂದಿತು. ಅವರು ಭಾರತದ ಕ್ರಿಕೆಟ್ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ಆದರೆ, ಸದ್ಯಕ್ಕೆ ಅದು ನನ್ನ ಜೀವನಶೈಲಿಗೆ ಹೊಂದಿಕೆಯಾಗುವುದಿಲ್ಲ,ʼ ಎಂದು ಹೇಳಿದರು.

ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನ ಗೌತಮ್ ಗಂಭೀರ್ ಅವರ ಹೆಸರು ಕೇಳಿಬಂದಿದೆ. ʻಜಸ್ಟಿನ್ ಲ್ಯಾಂಗರ್ , ಸ್ಟೀಫನ್ ಫ್ಲೆಮಿಂಗ್ ಮತ್ತು ಗೌತಮ್ ಗಂಭೀರ್ ಅವರ ಹೆಸರು ಕೇಳಿಬರುತ್ತಿದೆ. ಆದರೆ, ನನಗೆ ಈ ಸ್ಥಾನ ಬೇಡ,ʼ ಎಂದರು.

Read More
Next Story