Kolkata rape-murder | ‘150 ಗ್ರಾಂ ವೀರ್ಯ’, ‘ಟಿಎಂಸಿ ನಾಯಕನ ಮಗ’: ಇದೆಲ್ಲ ಎಷ್ಟು ನಿಜ?
x
ಸಿಬಿಐ ಅಧಿಕಾರಿಯೊಬ್ಬರು ಶುಕ್ರವಾರ ತನಿಖೆಗಾಗಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಗಮಿಸಿದರು̤

Kolkata rape-murder | ‘150 ಗ್ರಾಂ ವೀರ್ಯ’, ‘ಟಿಎಂಸಿ ನಾಯಕನ ಮಗ’: ಇದೆಲ್ಲ ಎಷ್ಟು ನಿಜ?

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅಸಂಖ್ಯಾತ ವದಂತಿಗಳು ಮತ್ತು ಊಹಾಪೋಹಗಳು ಹಬ್ಬಿವೆ. ಕೋಲ್ಕತ್ತಾ ಪೊಲೀಸರು ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅಂತಿಮವಾಗಿ ಕೆಲವು ವದಂತಿಗಳು ಸುಳ್ಳು ಎಂದು ತೋರಿಸಿಕೊಟ್ಟಿದ್ದಾರೆ.


ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅಸಂಖ್ಯಾತ ವದಂತಿಗಳು ಮತ್ತು ಊಹಾಪೋಹಗಳು ಹಬ್ಬಿವೆ.

ಒಂದು ಆಡಿಯೋ ಕ್ಲಿಪ್‌, ಇದನ್ನು ಸುಳ್ಳು ಸುದ್ದಿ ಎಂದು ಕೋಲ್ಕತ್ತಾ ಪೊಲೀಸರು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿದ್ದಾರೆ, ಒಬ್ಬ ಮಹಿಳೆ ಮಾತ್ರ ಮಾತಾಡಿದ್ದಾರೆ. ಅದು ಕೂಡ ಸ್ವಗತದಂತೆ. ಈ ಪೋಸ್ಟ್ ನ್ನು ಫೇಸ್‌ಬುಕ್‌ನಲ್ಲಿ ಸಾವಿರಾರು ಜನರು ಲೈಕ್ ಮಾಡಿದ್ದಾರೆ ಮತ್ತು ಶೇರ್ ಮಾಡಿದ್ದಾರೆ.

ವೈದ್ಯೆ ಮೇಲೆ ಒಬ್ಬರಿಗಿಂತ ಹೆಚ್ಚು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು, ಹಂಚಿಕೊಂಡಿದ್ದಾರೆ. ಈ ಯಾವ ವದಂತಿಗೂ ಯಾವುದೇ ಪುರಾವೆ ಇಲ್ಲ.ಹೀಗಿದ್ದರೂ, ಕೋಲ್ಕತ್ತದ ಹೆಚ್ಚಿನ ಮಂದಿ ಇದೆಲ್ಲವೂ ನಿಜ ಎಂದುಕೊಂಡಿದ್ದಾರೆ. ಮಾಧ್ಯಮ ಸಂಸ್ಥೆಗಳು ಇಂಥ ಒಂದು ವದಂತಿ ಕುರಿತು ವಿವರ ವರದಿ ಪ್ರಕಟಿಸಿದೆ. ಕಳೆದ ಕೆಲವು ದಿನಗಳಿಂದ ಕೋಲ್ಕತ್ತಾ ಪೊಲೀಸರು ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅಂತಿಮವಾಗಿ ಕೆಲವು ವದಂತಿಗಳನ್ನುಸುಳ್ಳು ಎಂದು ತೋರಿಸಿಕೊಟ್ಟಿದ್ದಾರೆ. ಹೀಗೆ ಛಿದ್ರಗೊಂಡ 5 ವದಂತಿಗಳೆಂದರೆ,

1. ಟಿಎಂಸಿ ಸಚಿವರ ಪುತ್ರನ ಕೈವಾಡವಿದೆ

ಪ್ರಕರಣದಲ್ಲಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಇಂಟರ್ನಿ ಮತ್ತು ʻಸಚಿವ ಸೌಮೆನ್ ಮಹಾಪಾತ್ರ ಅವರ ಪುತ್ರʼ ಸುಭಾದೀಪ್ ಸಿಂಗ್ ಮಹಾಪಾತ್ರ ಅವರನ್ನು ರಕ್ಷಿಸಲು ಸರ್ಕಾರ, ಪೊಲೀಸರು ಹಾಗೂ ಆಸ್ಪತ್ರೆ ಆಡಳಿತ ಪ್ರಯತ್ನಿಸುತ್ತಿದೆʼ ಎಂಬ ವದಂತಿ ಹರಡಿತ್ತು.

ಮೊದಲಿಗೆ, ಸುಭಾದೀಪ್ ಸಿಂಗ್ ಮಹಾಪಾತ್ರ, ಸೌಮೆನ್ ಮಹಾಪಾತ್ರ ಅವರ ಮಗನಲ್ಲ. ಮಾಜಿ ಸಚಿವ ಮತ್ತು ಹಾಲಿ ಶಾಸಕ ತಮ್ಮ ಮಗನ ಹೆಸರು ಬೋಧಿಸತ್ವ ಮಹಾಪಾತ್ರ. ಅವರು ಪೂರ್ವ ಮಿಡ್ನಾಪುರದ ಪನ್ಸ್ಕುರಾದಲ್ಲಿ ಆರೋಗ್ಯ ವಲಯ ಮೆಡಿಕಲ್ ಆಫೀಸರ್ (ಬಿಎಂಒಎಚ್‌) ಆಗಿದ್ದಾರೆ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅವರಿಗೆ ಆರ್‌ಜಿ ಕರ್ ಆಸ್ಪತ್ರೆಯೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅವರು 2017 ರಲ್ಲಿ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ತರಬೇತಿ ಪಡೆದಿದ್ದರು. ಹತ್ಯೆ ನಡೆದಾಗ ಆತ ತನ್ನ ಗರ್ಭಿಣಿ ಪತ್ನಿಯೊಂದಿಗೆ ಅಪೋಲೋ ಆಸ್ಪತ್ರೆಯಲ್ಲಿ ಇದ್ದ ಎಂದು ಅವರ ತಾಯಿ ಸುಮನಾ ಅವರು ಆನಂತರ ಹೇಳಿದ್ದರು.

ಎರಡನೆಯದಾಗಿ, ಸುಭಾದೀಪ್ ಸಿಂಗ್ ಮಹಾಪಾತ್ರ ಬಂಕುರಾ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕ ಪ್ರಬೀರ್ ಸಿಂಗ್ ಮಹಾಪಾತ್ರ ಅವರ ಮಗ. ಆತ ಆರ್‌.ಜಿ. ಕರ್ ಆಸ್ಪತ್ರೆಯ ಇಂಟರ್ನಿ ಆಗಿದ್ದು, ಪೊಲೀಸರು ಆತನ ವಿಚಾರಣೆ ನಡೆಸಿದ್ದಾರೆ. ವದಂತಿಯಂತೆ, ಆತ ʻನಾಪತ್ತೆ ಯಾಗಿಲ್ಲʼ. ಪ್ರಬೀರ್ ಸಿಂಗ್ ಮಹಾಪಾತ್ರ ಅವರು ಬಂಕುರಾದ ಸರೆಂಗಾ ಪೊಲೀಸ್ ಠಾಣೆಯಲ್ಲಿ ಮಗನ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವ ವಿರುದ್ಧ ದೂರು ದಾಖಲಿಸಿದ್ದಾರೆ.

2. ʻ150 ಗ್ರಾಂ ವೀರ್ಯʼ ಪತ್ತೆಯಾಗಿದೆ

ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ಮೃತಳ ಯೋನಿಯಲ್ಲಿ 151 ಗ್ರಾಂ ದ್ರವ ಇತ್ತು ಎಂದು ವೈದ್ಯರ ಅಭಿಪ್ರಾಯದೊಂದಿಗೆ ವರದಿ ಮಾಡಿತು.ಆ ವೈದ್ಯ ʻಇದು ಒಬ್ಬ ವ್ಯಕ್ಯಿಯದಲ್ಲʼ ಮತ್ತು ʻಅತ್ಯಾಚಾರದಲ್ಲಿ ಹಲವರು ಭಾಗಿಯಾಗಿದ್ದಾರೆʼ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದರು. ಕೆಲವೇ ಸಮಯದಲ್ಲಿ ಹಲವು ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿದವು: ಅನೇಕರು ʻ150 ಗ್ರಾಂʼ ಅನ್ನು ʻ150 ಮಿಗ್ರಾಂʼ ಗೆ ಬದಲಿಸಿದರು. ವೈದ್ಯೆಯ ಪೋಷಕರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ತಮ್ಮ ದೂರಿನಲ್ಲಿ ವೀರ್ಯದ ಪ್ರಮಾಣ ʻ150 ಮಿಗ್ರಾಂʼ ಎಂದು ನಮೂದಿಸಿದ್ದಾರೆ. ಇದು ಒಬ್ಬ ವ್ಯಕ್ತಿಯದು ಆಗಿರಲು ಸಾಧ್ಯವಿಲ್ಲ ಎಂದು ವರದಿ ಮಾಡಿದವು.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಎಕ್ಸ್‌ ಪೋಸ್ಟ್‌ನಲ್ಲಿ ಇದರ ನಿಜವನ್ನು ಹೊರಹಾಕಿದ್ದಾರೆ. ಮೊದಲು, ವೀರ್ಯ ಸೇರಿದಂತೆ ಯಾವುದೇ ದ್ರವವನ್ನು ಮಿಲಿಲೀಟರ್‌ಗಳಲ್ಲಿ (ಮಿಲೀ) ಅಳೆಯಲಾಗುತ್ತದೆ. ಎರಡನೆಯದಾಗಿ, ಶವಪರೀಕ್ಷೆಯಲ್ಲಿ ದಾಖಲಿಸಿದ ʻ150 ಗ್ರಾಂʼ ಎನ್ನುವುದು ಮಹಿಳೆಯ ಆಂತರಿಕ ಮತ್ತು ಬಾಹ್ಯ ಜನನಾಂಗಗಳ ತೂಕವಾಗಿದೆ.

ನಮೂನೆಯಲ್ಲಿ ಎಷ್ಟು ಪುರುಷರ ವೀರ್ಯ ಇದೆ ಎಂಬುದನ್ನು ಬರಿ ಕಣ್ಣಿನಿಂದ ಇಲ್ಲವೇ ಊಹಾಪೋಹದಿಂದ ಅಂದಾಜು ಮಾಡಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಪೊಲೀಸರು ಪದೇ ಪದೇ ಹೇಳಿದ್ದಾರೆ. ಮಾದರಿಗಳನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಇನ್ನೂ ಬರಬೇಕಿದೆ.

ಶವಪರೀಕ್ಷೆ ವರದಿ ʻನಕಲಿʼ ಎಂದು ಹಲವರು ನಂಬಿರುವುದರಿಂದ, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಲಾಗಿದೆ. ಮ್ಯಾಜಿಸ್ಟ್ರೇಟ್, ಮೂವರು ವೈದ್ಯ ಸಾಕ್ಷಿಗಳು ಮತ್ತು ವೈದ್ಯೆಯ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದಿದೆ ಎಂದು ಮೊಯಿತ್ರಾ ಸ್ಪಷ್ಟಪಡಿಸಿದ್ದಾರೆ.

3. ಮಹಿಳೆಯ ʻವಸ್ತಿ ಕುಹರ(ಪೆಲ್ವಿಕ್ ಗರ್ಡಲ್/ಮೂಳೆ)‌ ಮುರಿದಿದೆ

ಮೃತಳ ಕುಟುಂಬದವರೊಂದಿಗೆ ಬಂದಿದ್ದ ನೆರೆಯವರು ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ, ಅದು ಆನಂತರ ವೈರಲ್ ಆಗಿತ್ತು - ಮಹಿಳೆಯ ʻಕಾಲುಗಳು 90 ಡಿಗ್ರಿಗಳಷ್ಟು ಹರಡಿಕೊಂಡಿತ್ತು. ಅವಳ ʻವಸ್ತಿ ಕುಹರ( ಪೆಲ್ವಿಕ್‌ ಮೂಳೆ) ಮುರಿಯದೆʼ ಹೀಗೆ ಆಗಲು ಸಾಧ್ಯವಿಲ್ಲ.

ಆದರೆ, ಎರಡು ಶವಪರೀಕ್ಷೆ ವರದಿಗಳಲ್ಲಿ ಯಾವುದರಲ್ಲೂ ಮುರಿತಗಳನ್ನು ಉಲ್ಲೇಖಿಸಿಲ್ಲ. ನಾಲ್ಕು ಪುಟಗಳ ವರದಿಯಲ್ಲಿ ಬಲಿಪಶುವನ್ನು ಸಾಯಿಸುವ ಮೊದಲು ಕುತ್ತಿಗೆ ಹಿಸುಕಿದ್ದು, ಇದರಿಂದ ಆಕೆಯ ಥೈರಾಯ್ಡ್ ಕಾರ್ಟಿಲೆಜ್ ಮುರಿದುಹೋಗಿದೆ ಎಂದು ಉಲ್ಲೇಖಿಸಲಾಗಿದೆ.

ಆಕೆಯ ಹೊಟ್ಟೆ, ತುಟಿ, ಬೆರಳು ಮತ್ತು ಎಡಗಾಲಿಗೆ ಗಾಯಗಳಾಗಿವೆ. ಆಕೆಯ ಬಾಯಿಯನ್ನು ಮುಚ್ಚಲಾಗಿತ್ತು ಮತ್ತು ಆಕೆಯ ತಲೆಯನ್ನು ಗೋಡೆ ಅಥವಾ ನೆಲಕ್ಕೆ ಹೊಡೆಯಲಾಗಿದೆ ಮತ್ತು ಕಿರುಚಾಟವನ್ನು ತಡೆಯಲು ಬಾಯಿ ಮತ್ತು ಗಂಟಲನ್ನು ನಿರಂತರವಾಗಿ ಒತ್ತಲಾಗಿದೆ. ಆಕೆಯ ಕಣ್ಣು, ಬಾಯಿ ಮತ್ತು ಖಾಸಗಿ ಭಾಗಗಳಿಂದ ರಕ್ತಸ್ರಾವವಾಗಿತ್ತು. ಆಕೆಯ ಖಾಸಗಿ ಅಂಗದಲ್ಲಿ ʻವಿಕೃತ ಲೈಂಗಿಕ ಕ್ರಿಯೆʼ ಮತ್ತು "ಜನನಾಂಗದ ಚಿತ್ರಹಿಂಸೆʼ ಯಿಂದ ಆಳವಾದ ಗಾಯ ಕಂಡುಬಂದಿದೆ. ಆದರೆ, ಯಾವುದೇ ಮುರಿತದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು,ʼ ಮಹಿಳೆಯ ಹೇಳಿಕೆಗಳು ಸುಳ್ಳುʼ ಎಂದು ವಿವರಿಸಿದರು.

4. ಅಸಹಜ ಸಾವು ಪ್ರಕರಣ ದಾಖಲಿಸಿದ್ದು,ಪ್ರಕರಣವನ್ನು ಮುಚ್ಚಿಹಾಕಲು ಮನೆಯವರು ಕೇಳಿದಾಗ ʼಆತ್ಮಹತ್ಯೆʼ ಎಂದು ಹೇಳಿದರು

ವೈದ್ಯೆಯದು ʻಆತ್ಮಹತ್ಯೆʼ ಎಂದು ನಾವು ಆಕೆಯ ಕುಟುಂಬಕ್ಕೆ ಹೇಳಿಲ್ಲ ಎಂದು ಕೋಲ್ಕತ್ತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ನೀಡಿರುವುದು ಆಸ್ಪತ್ರೆಯ ಸಹಾಯಕ ಅಧೀಕ್ಷಕ ಎನ್ನಲಾಗಿದೆ.

ಎರಡನೆಯದಾಗಿ, ಪ್ರಕರಣವನ್ನು ಮುಚ್ಚಿಹಾಕಲು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದನ್ನು ಪೊಲೀಸರು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ, ಅಸ್ವಾಭಾವಿಕ ಸಾವು ಎಂದು ಮೊದಲು ದಾಖಲಿಸಲಾಗುತ್ತದೆ. ಔಪಚಾರಿಕ ದೂರು ದಾಖಲಾದ ನಂತರ ಮತ್ತು ಶವಪರೀಕ್ಷೆ ವರದಿ ಬಂದ ನಂತರ, ಅಸಹಜ ಸಾವಿನ ಪ್ರಕರಣಗಳನ್ನು ಕೊಲೆ ತನಿಖೆಯಾಗಿ ಪರಿವರ್ತಿಸಬಹುದು ಎಂದು ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥ ವಿನೀತ್ ಗೋಯಲ್ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ.

ಪ್ರಕ್ರಿಯೆಯನ್ನು ಬಿಎನ್‌ಎಸ್‌ಎಸ್‌ ಮತ್ತು ಈ ಹಿಂದಿನ ಸಿಆರ್‌ಪಿಸಿಯಲ್ಲಿ ವಿವರಿಸಲಾಗಿದೆ.

5. ಅಪರಾಧದ ಸ್ಥಳವನ್ನುಭದ್ರಪಡಿಸಿರಲಿಲ್ಲ ಮತ್ತು ನವೀಕರಣದ ಹೆಸರಿನಲ್ಲಿ ತಿದ್ದಲಾಗಿದೆ

ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು ಎನ್ನಲಾದ ಸೆಮಿನಾರ್ ಕೊಠಡಿಯನ್ನು ನವೀಕರಣದ ಹೆಸರಿನಲ್ಲಿ ಕೆಡವಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಪರಾಧ ನಡೆದ ಸ್ಥಳ ಸುರಕ್ಷಿತವಾಗಿದೆ ಮತ್ತು ಆಸ್ಪತ್ರೆಯಲ್ಲಿ ಬೇರೆಡೆ ನವೀಕರಣಗಳು ನಡೆಯುತ್ತಿದೆ ಎಂದು ರಾಜ್ಯ ಸರ್ಕಾರವು ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ.

ಮಹುವಾ ಮೊಯಿತ್ರಾ ಅವರು ಅಪರಾಧದ ಸ್ಥಳ ಅಥವಾ ಘಟನೆ ಸ್ಥಳವನ್ನು (ಪಿಒ) ʻಅಪರಾಧ ಬೆಳಕಿಗೆ ಬಂದ ತಕ್ಷಣ ಪೊಲೀಸರು ಮೊಹರು ಹಾಕಿದ್ದಾರೆʼ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈಗ, ಕೋಲ್ಕತ್ತಾ ಪೊಲೀಸರು ಮತ್ತು ಸಿಬಿಐ ಮಾತ್ರ ಅದನ್ನು ಪ್ರವೇಶಿಸ ಬಹುದು ಮತ್ತು ಅದು ʻಸುರಕ್ಷಿತವಾಗಿದೆʼ.

ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ, ಘಟನೆ ಬಳಿಕ ವಿದ್ಯಾರ್ಥಿಗಳು ಹಾಗೂ ವೈದ್ಯರು ವಿಶ್ರಾಂತಿ ಸ್ಥಳ ಮತ್ತು ಶೌಚಾಲಯ ಬೇಕೆಂದು ಆರೋಗ್ಯ ಕಾರ್ಯದರ್ಶಿಗೆ ತಿಳಿಸಿದ್ದರು ಮತ್ತು ವಿದ್ಯಾರ್ಥಿಗಳು ಆಯ್ಕೆ ಮಾಡಿದ ಸ್ಥಳದಲ್ಲಿ ನಿರ್ಮಾಣ ಮಾಡಲಾಗುತ್ತಿದೆ; ಅಪರಾಧ ನಡೆದ ಸ್ಥಳದಲ್ಲಿ ಅಲ್ಲ.

Read More
Next Story